ನವಿ ಮುಂಬಯಿ: ಕಾಸರಗೋಡು ಉಪ್ಪಳದ ಅಂಬಾರು ಶ್ರೀ ಸದಾಶಿವ ದೇವಸ್ಥಾನ ಮಂಗಲ್ಪಾಡಿ ಇದರ ನವೀಕರಣ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವವು ಫೆ. 28 ರಿಂದ ಮಾ. 5 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಇದರ ಮುಂಬಯಿ ಸಮಿತಿಯ ಪೂರ್ವಭಾವಿ ಸಭೆಯು ಫೆ. 22 ರಂದು ಕೋಪರ್‌ಖರ್ಣೇ ಹೊಟೇಲ್ ರಸ್ನಾ ಸಭಾಗೃಹದಲ್ಲಿ ನಡೆಯಿತು.
ಉದ್ಯಮಿ ಹಾಗೂ ಬ್ರಹ್ಮಕಲಶೋತ್ಸವ ಮುಂಬಯಿ ಸಮಿತಿಯ ಗೌರವಾಧ್ಯಕ್ಷ ಸಂಜೀವ ಎನ್. ಶೆಟ್ಟಿ ತಿಂಬರ ಇವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವವು ಫೆ. 28 ರಿಂದ ಮಾ. 5 ರವರೆಗೆ ಹಾಗೂ ಮಾ. 6 ರಿಂದ ಮಾ. 14 ರವರೆಗೆ ವರ್ಷಾವಧಿ ಕ್ಷೇತ್ರೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಮುಂಬಯಿ ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಎಲ್ಲ ರೀತಿಯಿಂದಲೂ ಸಹಕರಿಸುವಂತೆ ವಿನಂತಿಸಿದರು.
ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಂಬಯಿ ಉದ್ಯಮಿಗಳಾದ ಚಿಕ್ಕಪ್ಪ ಟಿ. ಶೆಟ್ಟಿ ಸಣ್ಣಹಿತ್ಲು ಮುಂಬಯಿ, ಶ್ರೀಮತಿ ರತ್ನಾ ಚಿಕ್ಕಪ್ಪ ಟಿ. ಶೆಟ್ಟಿ ಮುಂಬಯಿ, ಭವಾನಿ ಶಿಪ್ಪಿಂಗ್ ಕಂಪೆನೀಸ್ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೆ. ಡಿ. ಶೆಟ್ಟಿ, ಥಾಣೆ ಹೊಟೇಲ್ ಓನರ್ ಅಸೋಸಿಯೇಶನ್ ಅಧ್ಯಕ್ಷ ಪೊಲ್ಯ ಉಮೇಶ್ ಶೆಟ್ಟಿ, ಉದ್ಯಮಿಗಳಾದ ಪ್ರಮೋದ್ ಕರ್ಕೇರ, ಸಂಜೀವ ಶೆಟ್ಟಿ ಕುಕ್ಕಾರು ಹೊಸಮನೆ, ವಿಜಯ ಕುಮಾರ್ ಶೆಟ್ಟಿ ಕೃಷ್ಣ ನಗರ, ರಾಮಣ್ಣ ಶೆಟ್ಟಿ ಪಂಜ, ಭುಜೇಶ್ ಪೂಜಾರಿ, ಚಂದ್ರಶೇಖರ್ ಮಾಡ ಕುದ್ರಾಡಿಗುತ್ತು ಮೊದಲಾದವವರು ಪಾಲ್ಗೊಳ್ಳಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಮುಂಬಯಿ ಸಮಿತಿಯ ಅಧ್ಯಕ್ಷ ಸಂಜೀವ ಶೆಟ್ಟಿ ಕುಕ್ಕಾರು ಹೊಸಮನೆ ಮುಂಬಯಿ, ಉಪಾಧ್ಯಕ್ಷ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ, ವಿಜಯ ಕುಮಾರ್ ಕೃಷ್ಣ ನಗರ, ಸೀತಾರಾಮ ಶೆಟ್ಟಿ ತಿಂಬಾರ, ಮೋಹನ್ ಶೆಟ್ಟಿ ಮಜ್ಜಾರ್, ಶೈಲು ಪ್ರಭಾಕರ ಶೆಟ್ಟಿ ಕೋಡಿಬೈಲು, ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿಗಳಾದ ಭುಜೇಶ್ ಪೂಜಾರಿ ಚಿರುಗೋಳಿ, ಕಾರ್ಯದರ್ಶಿ ಬಾಲಕೃಷ್ಣ ಬೀರಿಗುಡ್ಡೆ, ವಿಶುಕುಮಾರ್ ಶೆಟ್ಟಿ ಹಿತ್ಲು, ಕೋಶಾಧಿಕಾರಿ ರಾಮಣ್ಣ ಶೆಟ್ಟಿ ಪಂಜ, ಸದಸ್ಯರುಗಳಾದ ಜಯಪ್ರಕಾಶ್ ಶೆಟ್ಟಿ, ಸುಭಾಶ್ ಶಿರಿಯಾ, ಐತಪ್ಪ ಪೂಜಾರಿ ನಡುಮನೆ, ನಾರಾಯಣ ಅಂಬಾರು, ಜಯಪ್ರಕಾಶ್ ಶೆಟ್ಟಿ ಮಂಗಲ್ಪಾಡಿ, ಶಿವ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ-ವರದಿ : ಸುಭಾಶ್ ಶಿರಿಯಾ