Advertisement
ವೆನ್ಲಾಕ್ ನಲ್ಲಿ ಕೋವಿಡ್ 19ಕ್ಕೆ ಚಿಕಿತ್ಸೆ ಪಡೆಯುತ್ತಿದ್ದ 12 ಮಂದಿ ಗುಣ ಮುಖರಾದ ಬೆನ್ನಲ್ಲೇ ಎರಡು ದಿನಗಳಲ್ಲಿ ಮೂರು ಕೋವಿಡ್ 19 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ರವಿವಾರ ಮೃತ ಪಟ್ಟಿದ್ದರು. ಎ. 16ರ ವರೆಗೆ ಸತತ 12 ದಿನಗಳಿಂದ ಪಾಸಿಟಿವ್ ಪ್ರಕರಣ ದಾಖಲಾಗದ ಜಿಲ್ಲೆಗೆ ಪ್ರಸ್ತುತ ಹೊಸ ಆತಂಕ ಎದುರಾಗಿದೆ.
ವೆನ್ಲಾಕ್ ನಲ್ಲಿ ರೋಗಿಗಳು ಪೊಲೀಸರ ಅನುಮತಿ ಪಡೆದು ಆಸ್ಪತ್ರೆ ಆವರಣದಲ್ಲಿರುವ ಹೆಲ್ಪ್ ಡೆಸ್ಕ್ ಬಳಿಗೆ ತೆರಳಬಹುದು. ಕೋವಿಡ್ 19 ಲಕ್ಷಣಗಳಿಲ್ಲದಿದ್ದರೆ ಅಲ್ಲಿಂದಲೇ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಿ ಹಿಂದಕ್ಕೆ ಕಳುಹಿಸಲಾಗುತ್ತದೆ. ಶಂಕಿತ ಕೋವಿಡ್ 19 ಲಕ್ಷಣಗಳಿದ್ದರೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಹೊಸ ಬ್ಲಾಕ್‌ಗೆ ಶಿಫಾರಸು ಮಾಡಲಾಗುತ್ತದೆ. ರಸ್ತೆ ಬಂದ್; ಬ್ಯಾರಿಕೇಡ್ ಅಳವಡಿಕೆ
ಕೋವಿಡ್-19ಕ್ಕೆ ಮೀಸಲಾಗಿರುವ ವೆನ್ಲಾಕ್ ಆಸ್ಪತ್ರೆ ಆವರಣ ಪ್ರವೇಶಿಸುವ ಗೇಟ್‌ನಲ್ಲಿ ಪೊಲೀಸರು ಕಾವಲಿದ್ದಾರೆ. ಮಿಲಾಗ್ರಿಸ್ ಮುಖ್ಯರಸ್ತೆಯಿಂದ ಎಡಕ್ಕೆ ತಿರುವು ಪಡೆದು ಆಸ್ಪತ್ರೆಯ ಒಳಹೋ ಗುವ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಚಿಲಿಂಬಿ, ರೈಲ್ವೇ
ಸ್ಟೇಷನ್‌ಗಳಿಂದ ಬರುವ ಒಳ ರಸ್ತೆಗೂ ಬ್ಯಾರಿಕೇಡ್ ಅಳವಡಿಸಸಲಾಗಿದೆ.
Related Articles
ದ.ಕ. ಜಿಲ್ಲೆಯಲ್ಲಿ ಮೊದಲ ಕೋವಿಡ್ 19 ದೃಢಪಟ್ಟದ್ದು ಭಟ್ಕಳ ಮೂಲದ ವ್ಯಕ್ತಿ ಯಲ್ಲಿ, ಮಾ. 22ರಂದು. ಅನಂತರ ಎ. 4ರ ವರೆಗೆ ಒಟ್ಟು 12 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದವು. ಎ. 5ರಿಂದ 16ರ ವರೆಗೆ ಹೊಸ ಪ್ರಕರಣ ದೃಢಪಡದ ಮತ್ತು ಚಿಕಿತ್ಸೆ ಪಡೆಯುತ್ತಿದ್ದ 12 ಮಂದಿಯೂ ಗುಣಮುಖರಾದ ಹಿನ್ನೆಲೆಯಲ್ಲಿ ಜಿಲ್ಲೆ ಕೋವಿಡ್ 19 ಮುಕ್ತವಾಗುವ ಸನ್ನಾಹದಲ್ಲಿತ್ತು. ಆದರೆ ಈಗ ಮೂರು ಪ್ರಕರಣ ದಾಖಲಾಗಿ ಆತಂಕ ಹೆಚ್ಚಿದೆ.
Advertisement
ಫೋಟೋ, ವೀಡಿಯೋಗ್ರಫಿಗೆ ಅವಕಾಶವಿಲ್ಲವೆನ್ಲಾಕ್ ಕೋವಿಡ್-19 ಮೀಸಲು ಆಸ್ಪತ್ರೆಯಾಗಿರುವ ಕಾರಣ ಇಲ್ಲಿ ಒಳ ಮತ್ತು ಹೊರ ಆವರಣದಲ್ಲಿ ಫೋಟೋಗ್ರಫಿ, ವೀಡಿಯೋಗ್ರಫಿಗೆ ಅವಕಾಶ ನಿರಾಕರಿಸಲಾಗಿದೆ. ಹೊರಭಾಗದಲ್ಲಿರುವ ರಿಕ್ಷಾ ಪಾರ್ಕಿಂಗ್ ಸ್ಥಳದಲ್ಲಿ ಮಾತ್ರ ವೀಡಿಯೋ, ಫೋಟೋ ತೆಗೆಯಲು ಅವಕಾಶವಿದ್ದು, ಅಗತ್ಯವಿದ್ದಲ್ಲಿ ಮಾತ್ರ ಶೂಟಿಂಗ್ ಮಾಡಬಹುದು ಎಂದು ಜಿಲ್ಲಾಡಳಿತ ಹೇಳಿದೆ. ಸೂಕ್ತ ಮುನ್ನೆಚ್ಚರಿಕೆ
ಮಹಿಳೆ ಮೃತಪಟ್ಟಿರುವ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ಬಂದೋಬಸ್ತ್ ಬಿಗಿಗೊಳಿಸಲಾಗಿದೆ. ಕೋವಿಡ್ 19 ಲಕ್ಷಣಗಳಿಲ್ಲದ ರೋಗಿಗಳನ್ನು ಹೆಲ್ಪ್ ಡೆಸ್ಕ್ನಿಂದಲೇ ಹಿಂದಕ್ಕೆ ಕಳುಹಿಸಲಾಗುತ್ತದೆ. ಶಂಕಿತ ಲಕ್ಷಣಗಳಿದ್ದಲ್ಲಿ ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಹೊಸ ಬ್ಲಾಕ್‌ಗೆ ಕಳುಹಿಸಲಾಗುತ್ತದೆ. ವಿನಾಕಾರಣ ಯಾರಿಗೂ ಅನುಮತಿ ಇಲ್ಲ.
-ಡಾ| ಸದಾಶಿವ, ವೈದ್ಯಕೀಯ ಅಧೀಕ್ಷಕರು
ವೆನ್ಲಾಕ್ ಆಸ್ಪತ್ರೆ, ಮಂಗಳೂರು