Advertisement

ಮಂಗಳೂರು ಗಲಭೆ: ಸಿಐಡಿ ಪೊಲೀಸರ ತನಿಖೆ ಆರಂಭ

12:49 AM Dec 28, 2019 | mahesh |

ಮಂಗಳೂರು: ನಗರದ ಗಲಭೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಗರಕ್ಕೆ ಆಗಮಿಸಿರುವ ಸಿಐಡಿ ಪೊಲೀಸರ ತನಿಖಾ ತಂಡವು ಶುಕ್ರವಾರ ತನಿಖೆ ಆರಂಭಿಸಿದೆ. ಸಿಐಡಿ ಎಸ್ಪಿ ರಾಹುಲ್‌ ಶಹಾಪೂರ್‌ ನೇತೃತ್ವದ 5 ಮಂದಿ ಅಧಿಕಾರಿಗಳ ತಂಡ ತನಿಖೆಯನ್ನು ಕೈಗೆತ್ತಿಕೊಂಡಿದೆ. ತನಿಖೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಲು ಮೂರು ತಿಂಗಳು ಕಾಲಾವಕಾಶ ನೀಡಲಾಗಿದೆ.

Advertisement

ಸಿಐಡಿ ತಂಡ ಪ್ರಥಮವಾಗಿ ಡಿ. 19ರಂದು ಮಂಗಳೂರಿನಲ್ಲಿ ನಡೆದ ಘಟನೆಯ ಬಗ್ಗೆ ವಾಸ್ತವ ಚಿತ್ರಣದ ಮಾಹಿತಿಯನ್ನು ಕಲೆ ಹಾಕಿ ಬಳಿಕ ತನಿಖೆಯನ್ನು ಕೈಗೆತ್ತಿಕೊಳ್ಳಲಿದ್ದು, ಈ ನಿಟ್ಟಿನಲ್ಲಿ ಈಗ ಘಟನಾವಳಿಯ ಮಾಹಿತಿ ಕಲೆಹಾಕುವ ಕಾರ್ಯದಲ್ಲಿ ನಿರತವಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮಂಗಳೂರು ಪೊಲೀಸರು ಈಗಾಗಲೇ ಸಾಕಷ್ಟು ಸಾಕ್ಷ್ಯ ಕಲೆಹಾಕಿದ್ದಾರೆ. ಈ ತನಿಖೆಯನ್ನು ಇನ್ನು ಸಿಐಡಿ ಕೈಗೆತ್ತಿಕೊಳ್ಳಲಿದೆ. ಮಾತ್ರವಲ್ಲದೆ ಮಂಗಳೂರು ಪೊಲೀಸರ ಪ್ರಾಥಮಿಕ ಹಂತದ ತನಿಖೆ ಸರಿಯಾಗಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಿದೆ. ಶುಕ್ರವಾರ ಬೆಳಗ್ಗೆ ಕಮಿಷನರ್‌ ಕಚೇರಿಗೆ ಆಗಮಿಸಿದ ತನಿಖಾ ತಂಡ, ಗೋಲಿಬಾರ್‌ ಘಟನೆಗೆ ಸಂಬಂ ಧಿಸಿ ಅಗತ್ಯ ಮಾಹಿತಿಯನ್ನು ಕಲೆ ಹಾಕಿತು. ಪ್ರಮುಖ ದಾಖಲೆಗಳು ಹಾಗೂ ದಾಖಲಾದ ಪ್ರಕರಣಗಳ ವಿವರವನ್ನು ಪಡೆದುಕೊಂಡಿತು ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಮ್ಯಾಜಿಸ್ಟೀರಿಯಲ್‌ ತನಿಖೆಗೆ ಸರಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಧಿಕಾರಿ ಜಗದೀಶ್‌ ಡಿ. 28ರ ಬಳಿಕ ಮಂಗಳೂರಿಗೆ ಆಗಮಿಸಿ ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ. ಈ ತನಿಖೆಯನ್ನೂ ಮೂರು ತಿಂಗಳೊಳಗೆ ಮುಕ್ತಾಯಗೊಳಿಸಿ ವರದಿ ನೀಡುವಂತೆ ಸರಕಾರ ಆದೇಶಿಸಿದೆ.

ಮುಂದುವರಿದ ಬೆದರಿಕೆ ಕರೆ
ಗೋಲಿಬಾರ್‌ ಬಳಿಕ ಪೊಲೀಸ್‌ ಆಯುಕ್ತರು ಸೇರಿದಂತೆ ಹಿರಿಯ ಪೊಲೀಸ್‌ ಅಧಿ ಕಾರಿಗಳು ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬಂದಿಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್‌ ಅಧಿಕಾರಿಗಳು, ಸೈಬರ್‌ ಅಪರಾಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಕರೆಗಳ ಮೂಲವನ್ನು ಪತ್ತೆಹಚ್ಚುವಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

Advertisement

ಭದ್ರತೆ ಹೆಚ್ಚಳಕ್ಕೆ ಕ್ರಮ
ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಿಂದ ಇರುವಂತೆ ಉನ್ನತ ಅಧಿಕಾರಿಗಳು ಸೂಚನೆ ನೀಡಿದ್ದು, ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಪೊಲೀಸ್‌ ಆಯುಕ್ತರ ಕಚೇರಿಗೆ ಆಗಮಿಸುವ ಪ್ರತಿಯೊಬ್ಬರನ್ನೂ ಕೂಲಂಕಷ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕಮಿಷನರ್‌ಗೆ ಹೊರಗೆ ಸಂಚಾರ ವೇಳೆಯಲ್ಲೂ ಭದ್ರತೆ ಒದಗಿಸುವಂತೆ ಉನ್ನತಾಧಿ ಕಾರಿಗಳು ಸೂಚನೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಹಳೆಯ ಅಧಿಕಾರಿಗಳಿಗೆ ಬುಲಾವ್‌
ಮಂಗಳೂರಿನಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಕರೆಸಿ ಅವರಿಂದ ಇಲ್ಲಿನ ಪರಿಸರದ ಸೂಕ್ಷ್ಮಗಳನ್ನು ಹಾಗೂ ವಸ್ತುಸ್ಥಿತಿ ತಿಳಿದು ಕೊಳ್ಳಲು ಹಾಗೂ ಅದರಿಂದ ಈ ಘಟನೆಯ ತನಿಖೆಗೆ ಏನಾದರೂ ಸಹಾಯ ಆಗ ಬಹುದೇ ಎನ್ನುವುದನ್ನು ಪರಿಶೀಲಿಸುತ್ತಿದ್ದಾರೆ. ಈ ದಿಶೆಯಲ್ಲಿ ಕೆ.ಯು. ಬೆಳ್ಳಿಯಪ್ಪ, ತಮ್ಮಯ್ಯ, ರಾಜೇಂದ್ರ., ಭಾಸ್ಕರ ಒಕ್ಕಲಿಗ, ಡಾ| ಎಚ್‌.ಎನ್‌. ವೆಂಕಟೇಶ ಪ್ರಸನ್ನ, ವೆಲೆಂಟೈನ್‌ ಡಿ’ಸೋಜಾ ಮಂಗಳೂರಿನಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next