Advertisement

ಮಂಗಳೂರು ವೆಂಕಟರಮಣ ದೇವಸ್ಥಾನ ಆವರಣದಲ್ಲಿ ಕೋವಿಡ್ ಸೋಂಕು ಹರಡದಂತೆ ಔಷಧ ಸಿಂಪಡಣೆ!

03:48 PM Apr 01, 2020 | keerthan |

ಮಂಗಳೂರು: ಕೊವಿಡ್-19 ಸೋಂಕು ಹರಡದಂತೆ ತಡೆಯಲು ನಗರದ ಕಾರ್ ಸ್ಟ್ರೀಟ್  ಶ್ರೀ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ  ಔಷಧ ಸಿಂಪಡಣೆ ಮಾಡಲಾಯಿತು.

Advertisement

ಸೇವಂಜಾಲಿ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಟ್ರಸ್ಟ್ ಅಧ್ಯಕ್ಷ ಸದಸ್ಯರುಗಳು ಸೇರಿಕೊಂಡು, ಗ್ಲೌಸ್, ಮಾಸ್ಕ್ ಧರಿಸಿಕೊಂಡು, ಸೋಡಿಯಂ ಹೈಪೊಕ್ಲೋರೈಡ್, ಫಿನಾಯಿಲ್‌ ಮತ್ತು ಬ್ಲೀಚಿಂಗ್‌ ಮಿಶ್ರಣ ಔಷಧ ವಾಹನದ ಮೂಲಕ ದೇವಸ್ಥಾನ ಮತ್ತು ಅಂಗಡಿಗಳ ಮುಂದೆ ಔಷಧ ಸಿಂಪಡಣೆ ಮಾಡಿದರು.

ಪ್ರತಿನಿತ್ಯ ಸಾವಿರಾರು ಭಕ್ತರು ಆಗ ಮಿಸುತ್ತಿದ್ದ ದೇವಸ್ಥಾನದ ಆವರಣವಾದ ಕಾರಣ ಕೊವಿಡ್-19 ಸೋಂಕು ಹರಡದಂತೆ ಮುಂಜಾಗ್ರತ ಕ್ರಮವಾಗಿ  ಟ್ರಸ್ಟ್ ವತಿಯಿಂದ ಔಷಧ ಸಿಂಪಡಣೆ ಮಾಡಿದರು.

ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್ ಅವರ ಮಾರ್ಗದರ್ಶನದಂತೆ, ಔಷಧ ಸಿಂಪಡನೆಯಲ್ಲಿ ಕಾರ್ಯದರ್ಶಿ ಹನುಮಂತ ಕಾಮತ್, ಆಲ್ ಇಂಡಿಯಾ ಟೆಂಪಲ್ ಅಸೋಸಿಯೇಷನ್ ಅಧ್ಯಕ್ಷ ಜಗನ್ನಾಥ ಕಾಮತ್, ಪ್ರಶಾಂತ್ ರಾವ್, ಸದಸ್ಯರುಗಳಾದ ನರೇಶ್ ಶೆಣೈ, ವರದರಾಜ್ ಶೆಣೈ, ಸಂತೋಷ್ ಭಂಡಾರಿ, ನರೇಶ್ ಪ್ರಭು, ಚೇತನ್ ಕಾಮತ್, ಸಂತೋಷ್  ಶೆಣೈ, ದೀಪಕ್ ಮಲ್ಯ, ನರಹರಿ ಭಟ್  ಮತ್ತಿತರರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next