Advertisement

ಮಂಗಳೂರು ವಿವಿ : ಆಗಸ್ಟ್‌ 2 ರಿಂದ ಪದವಿ, 5 ರಿಂದ ಸ್ನಾತಕೋತ್ತರ ಪರೀಕ್ಷೆ

07:57 PM Jul 20, 2021 | Team Udayavani |

ಮಂಗಳೂರು: ಕೋವಿಡ್-19ರ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟು ನಡೆಸಲು ಬಾಕಿ ಇರುವ ಏಪ್ರಿಲ್‌ 2021 ರ 1, 3, 5 ಮತ್ತು 7 ನೇ ಸೆಮಿಸ್ಟರ್‌ ಪದವಿ ಪರೀಕ್ಷೆಗಳನ್ನು ಆಗಸ್ಟ್‌ 2 ರಿಂದ ನಡೆಸಲು ಮಂಗಳೂರು ವಿಶ್ವವಿದ್ಯಾನಿಲಯ ನಿರ್ಧರಿಸಿದೆ.

Advertisement

ಇದೇ ವೇಳೆ 1 ಮತ್ತು 3 ನೇ ಸೆಮಿಸ್ಟರ್‌ ನ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನೂ ಆಗಸ್ಟ್‌ 5 ರಿಂದ ನಡೆಸಲು ಉದ್ದೇಶಿಸಲಾಗಿದೆ. ಸರ್ಕಾರ ಸೂಚಿಸಿರುವ ಕೋವಿಡ್‌ ನಿಯಂತ್ರಣ ನಿಯಮಗಳ ಕಠಿಣ ಪಾಲನೆಯೊಂದಿಗೆ ಪರೀಕ್ಷೆ ನಡೆಯಲಿದೆ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮುಂಚಿತವಾಗಿ ಮಾಹಿತಿ ನೀಡಿರುವ ವಿಶ್ವವಿದ್ಯಾನಿಲಯ, ಕಾಲೇಜುಗಳಿಗೆ ಪರೀಕ್ಷಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಸೂಚನೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next