Advertisement

ತರಗತಿ, ಲೈಬ್ರೆರಿಗೆ ಹಿಜಾಬ್‌ ನಿಷಿದ್ಧ; ಮಂಗಳೂರು ವಿ.ವಿ. ಕಾಲೇಜಿನ ಸಮಿತಿಯಿಂದ ನಿರ್ಧಾರ

11:48 PM May 27, 2022 | Team Udayavani |

ಮಂಗಳೂರು: ಮಂಗಳೂರು ವಿ.ವಿ. ಕಾಲೇಜಿನ ಕ್ಯಾಂಪಸ್‌ಗೆ ಹಿಜಾಬ್‌ ಧರಿಸಿ ಬರಬಹುದು. ಆದರೆ ತರಗತಿ, ಲೈಬ್ರೆರಿಗಳಿಗೆ ಹಿಜಾಬ್‌ ಧರಿಸಿ ಬರಲು ಅವಕಾಶ ಇಲ್ಲ ಎಂಬ ಕಟ್ಟುನಿಟ್ಟಿನ ನಿರ್ಣಯಕ್ಕೆ ಕಾಲೇಜು ಅಭಿವೃದ್ಧಿ ಸಮಿತಿ ಬಂದಿದೆ.

Advertisement

ಶುಕ್ರವಾರ ಸಮಿತಿಯ ಸಭೆ ನಡೆದಿದ್ದು ಶಾಸಕ ವೇದವ್ಯಾಸ ಕಾಮತ್‌ ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ, ಪ್ರಾಂಶುಪಾಲೆ, ಸಿಂಡಿಕೇಟ್‌ ಸದಸ್ಯರು ಭಾಗವಹಿಸಿದ್ದರು.

ಕಾಲೇಜಿನಲ್ಲಿ ನಡೆದ ಘಟನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಹಿಜಾಬ್‌ಗ ತರಗತಿಯಲ್ಲಿ ನಿಷೇಧ ವಿದ್ದು, ಇದನ್ನು ಕಟ್ಟುನಿಟ್ಟು ಪಾಲಿಸಲಾಗುತ್ತದೆ. ನಿಯಮ ಪಾಲನೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಯಡಪಡಿತ್ತಾಯ ತಿಳಿಸಿದರು.

ಹೈಕೋರ್ಟ್‌ ಆದೇಶ ಬಳಿಕ ಪರೀಕ್ಷಾ ಪ್ರಕ್ರಿಯೆ ಇದ್ದ ಹಿನ್ನೆಲೆಯಲ್ಲಿ ಮಾರ್ಗಸೂಚಿ ಕಳುಹಿಸಲು ತಡವಾಯಿತು. ಆ ಬಳಿಕ ಸಿಂಡಿಕೇಟ್‌ ಸಭೆ ನಡೆಸಿ ಕ್ರಮ ಕೈಗೊಂಡಿದ್ದೇವೆ. ಇದರ ಪಾಲನೆ ವಿಚಾರದಲ್ಲಿ ಶಿಕ್ಷಕರ ವಿರುದ್ಧ ದೂರಿಗೆ ಸಾಕ್ಷ್ಯ ಇದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಮುಸ್ಲಿಂ ವಿದ್ಯಾರ್ಥಿನಿಯರು ಬಂದಾಗ ಅವರಿಗೆ ತಿಳಿವಳಿಕೆ ಹೇಳಿದ್ದೇವೆ. ಆದರೆ ಅವರು ಡಿಸಿ ಬಳಿ ಹೋಗುತ್ತೇನೆ ಎಂದಾಗ ಹೋಗಿ ಎಂದಿದ್ದೇನೆ. ವಿದ್ಯಾರ್ಥಿನಿಯರಿಗೆ ಕೌನ್ಸೆಲಿಂಗ್‌ ಮಾಡುತ್ತೇವೆ. ಇಲ್ಲವೇ ಬೇರೆ ಕಾಲೇಜಿಗೆ ಹೋಗುವುದಾದರೆ ವ್ಯವಸ್ಥೆ ಮಾಡುತ್ತೇವೆ ಎಂದರು.

ಆದೇಶ ಪದವಿ ಕಾಲೇಜಿಗೂ ಅನ್ವಯ
ಶಾಸಕ ಕಾಮತ್‌ ಮಾತನಾಡಿ, ನಮಗೆ ಬಂದ ಆದೇಶದ ಪ್ರಕಾರ ಪದವಿ ಕಾಲೇಜಿಗೂ ಕೋರ್ಟ್‌ ಆದೇಶ ಅನ್ವಯ ಆಗುತ್ತದೆ. ಅದನ್ನು ಪಾಲಿಸಲೇಬೇಕು ಎಂದರು.

Advertisement

ಜೆಎನ್‌ಯು ಮಾಡಲು ಬಿಡಲಾರೆ: ಕಾಮತ್‌
ಮಂಗಳೂರು ವಿ.ವಿ. ಕಾಲೇಜನ್ನು ದಿಲ್ಲಿಯ ಜೆಎನ್‌ಯು ಮಾಡಲು ನಾವು ಅವಕಾಶ ನೀಡುವುದಿಲ್ಲ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಹೇಳಿದ್ದಾರೆ.

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕಾಲೇಜಿನಲ್ಲಿ ರಾಜಕೀಯ ಮಾಡಿ ಎಸ್‌ಡಿಪಿಐ, ಮತ್ತು ಕಾಂಗ್ರೆಸ್‌ ಬೆಂಬಲಿತರು ವಿದ್ಯಾರ್ಥಿಗಳನ್ನು ಎತ್ತಿ ಕಟ್ಟಿದ್ದಾರೆ. ಮಂಗಳೂರಿನ ಮಣ್ಣಿನಲ್ಲಿ ಹುಟ್ಟಿದವರಿಗೆ ದೇಶ ಹಾಳು ಮಾಡಲು ಅವಕಾಶ ಇಲ್ಲ. ಸರಕಾರ ಮತ್ತು ಕೋರ್ಟ್‌ ನಿಯಮ ಪಾಲಿಸದೇ ಇದ್ದರೆ ಅಧ್ಯಾಪಕರೇ ಕೋರ್ಟ್‌ ಮೆಟ್ಟಲು ಹತ್ತಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ನಡುವೆ ವಿ.ವಿ. ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನ್ಯಾಸ್‌ ಆಚಾರ್ಯ ರಾಜೀನಾಮೆ ನೀಡಿ ದ್ದಾರೆ. ಅವರು ಎಬಿವಿಪಿ ಬೆಂಬಲ ದಿಂದ ಆಯ್ಕೆಯಾಗಿದ್ದರು. ಹಿಜಾಬ್‌ಗ ನನ್ನದೂ ವಿರೋಧ ಇತ್ತು, ಆದರೆ ಪ್ರತಿಭಟನೆ ಮಾಡಿದರೆ ಕಾಲೇಜಿನಲ್ಲಿ ವಿನಾಕಾರಣ ಗಲಭೆ ಆಗುತ್ತದೆ ಎಂಬ ಕಾರಣಕ್ಕೆ ಪ್ರತಿಭಟನೆ ಬೇಡ ಎಂದಿದ್ದೆ, ನನ್ನ ಈ ನಿರ್ಧಾರ ತಪ್ಪು ಎಂದಾದರೆ ನಾನು ಅಧ್ಯಕ್ಷನಾಗಿದ್ದು ಪ್ರಯೋಜನ ಇಲ್ಲ ಹಾಗಾಗಿ ರಾಜೀನಾಮೆ ನೀಡಿ ದ್ದೇನೆ ಎಂದವರು ತಿಳಿಸಿದ್ದಾರೆ.

ಕೆಲವರಿಂದ ವಿವಾದ: ಪ್ರಾಂಶುಪಾಲೆ
ಕಾಲೇಜಿನಲ್ಲಿ 44 ಮುಸ್ಲಿಂ ವಿದ್ಯಾರ್ಥಿನಿಯರಿದ್ದು, ಹಿಜಾಬ್‌ ವಿವಾದ ಒಂದು ತಂಡದಿಂದಷ್ಟೇ ಆಗಿದೆ. 15 ವಿದ್ಯಾರ್ಥಿಗಳಷ್ಟೇ ಹಿಜಾಬ್‌ ಕುರಿತು ಮಾತನಾಡುತ್ತಿದ್ದಾರೆ ಎಂದು ಪ್ರಾಂಶುಪಾಲೆ ಡಾ| ಅನಸೂಯ ರೈ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next