Advertisement

Udupi: ಆಲ್‌ ಇಂಡಿಯಾ ಪುರುಷರ ಕಬಡ್ಡಿಯಲ್ಲಿ ಇತಿಹಾಸ ಸೃಷ್ಟಿಸಿದ ಮಂಗಳೂರು ವಿವಿ

02:47 PM Nov 26, 2023 | Team Udayavani |

ಉಡುಪಿ: ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗ, ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ವತಿಯಿಂದ ನಡೆದ ಅಖಿಲ ಭಾರತ ಅಂತರ್‌ ವಿವಿ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಆತಿಥೇಯ ಮಂಗಳೂರು ವಿವಿ ತಂಡ ಫೈನಲ್‌ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಇತಿಹಾಸ ಸೃಷ್ಟಿಸಿದೆ.

Advertisement

33 ವರ್ಷದ ಬಳಿಕ ಮಂಗಳೂರು ವಿ.ವಿ. ತಂಡವು ಅಖಿಲ ಭಾರತ ಅಂತರ್‌ ವಿವಿ ಪುರುಷರ ಕಬಡ್ಡಿ ಪೈನಲ್‌ ಪ್ರವೇಶಿಸಿದ ಮಂಗಳೂರು ತಂಡ ಚೆನ್ನೈನ ವೇಲ್ಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ವಿವಿ ತಂಡವನ್ನು ದೊಡ್ಡ ಅಂತರದ ಜಯ ಸಾಧಿಸಿದೆ.
ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ 47-15 ಅಂತರದಿಂದ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಸೆಮಿಫೈನಲ್‌ ಪಂದ್ಯದಲ್ಲಿ ಮಂಗಳೂರು ವಿ.ವಿ. ತಂಡ ಹರ್ಯಾಣದ ಚೌಧರಿ ಬನ್ಸಿಲಾಲ್‌ ವಿವಿಯನ್ನು ಸೋಲಿಸಿ ಫೈನಲ್‌ ಗೇರಿತ್ತು. ಮಂಗಳೂರು ವಿವಿ ತಂಡವು ಚೌಧರಿ ಬನ್ಸಿಲಾಲ್ ತಂಡವನ್ನು 49-35 ಅಂಕಗಳಿಂದ ಮಣಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next