Advertisement
ಉಡುಪಿಯ ಎಂಜಿಎಂ ಕಾಲೇಜು, ಮಂಗಳೂರಿನ ವಿ.ವಿ. ಕಾಲೇಜು ಮತ್ತು ಮಡಿಕೇರಿಯ ಎಫ್ಎಂಕೆಎಂಸಿ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುವುದು. ಅಂದು ಶ್ರೀಲಂಕಾದ 6 ಮಂದಿ ವಿದ್ಯಾರ್ಥಿಗಳು ಸೇರಿದಂತೆ 5,000ಕ್ಕೂ ಅಧಿಕ ಮಂದಿ ಪರೀಕ್ಷೆ ಬರೆಯಲಿದ್ದಾರೆ ಎಂದರು.
ಕೊರೊನಾ ಸವಾಲಿನ ನಡುವೆಯೂ ಮಂಗಳೂರು ವಿ.ವಿ. ತನ್ನ ವ್ಯಾಪ್ತಿಯಲ್ಲಿ ಬರುವ 210 ಕಾಲೇಜುಗಳ ಪೈಕಿ 205 ಕಾಲೇಜುಗಳ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಪರೀಕ್ಷೆಗಳನ್ನು ಆಯೋಜಿಸಿದೆ. ಹಲವಾರು ಕೋರ್ಸ್‌ಗಳ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು ಬಾಕಿ ಇರುವ ಕೋರ್ಸ್‌ಗಳ ಫಲಿತಾಂಶವನ್ನು ಶೀಘ್ರದಲ್ಲೇ ಹಂತ ಹಂತವಾಗಿ ಪ್ರಕಟಿಸ
ಲಾಗುವುದು. ಫಿಜಿ, ಲಕ್ಷದ್ವೀಪ, ಮಣಿಪುರ, ಧಾರವಾಡ, ಜಮ್ಮು-ಕಾಶ್ಮೀರದಲ್ಲಿಯೂ ಅಲ್ಲಿನ ವಿ.ವಿ.ಗಳ ಸಹಕಾರದಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು ಎಂದು ಅವರು ವಿವರಿಸಿದರು. ಹೆಲ್ಪ್ ಡೆಸ್ಕ್
ಫಲಿತಾಂಶದಲ್ಲಿ ಯಾವುದೇ ರೀತಿಯ ಗೊಂದಲಗಳಿದ್ದರೆ ಅದನ್ನು ಪರಿಹರಿಸುವುದಕ್ಕಾಗಿ ವಿ.ವಿ.ಯು ಹೆಲ್ಪ್ಡೆಸ್ಕ್ ಮೂಲಕ ತ್ವರಿತ ಸೇವೆ ಒದಗಿಸುತ್ತಿದೆ. ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಕುಲಸಚಿವರು ತಿಳಿಸಿದರು.
Related Articles
ಮುಂದಿನ ಶೈಕ್ಷಣಿಕ ವರ್ಷದಿಂದ ಮಂಗಳೂರು ವಿ.ವಿ.ಯ ಪರೀಕ್ಷೆ, ಫಲಿತಾಂಶಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ವಿಶ್ವವಿದ್ಯಾನಿಲಯದ ತಂಡವೇ ನಿರ್ವಹಿಸಲಿದೆ. ಖಾಸಗಿಯವರಿಗೆ ಗುತ್ತಿಗೆ ನೀಡುವ ವ್ಯವಸ್ಥೆಯನ್ನು ಮುಂದುವರಿಸದೆ ಇರಲು ನಿರ್ಧರಿಸಲಾಗಿದೆ ಎಂದು ಡಾ| ಧರ್ಮ ತಿಳಿಸಿದರು.
Advertisement
ಕಂಪೆನಿಗೆ ನೋಟಿಸ್ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಫಲಿತಾಂಶ ಪ್ರಕಟ ಸಂದರ್ಭ ಈ ಬಾರಿ ಲೋಪಗಳು ತೀರಾ ಕಡಿಮೆ. ಆದರೂ ಇಬ್ಬರು ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಉಂಟಾಗಿದ್ದ ಗೊಂದಲವನ್ನು ಗಂಭೀರವಾಗಿ ಪರಿಗಣಿಸಿ ಕುಲಪತಿಯವರು ಕಂಪೆನಿಗೆ ನೋಟಿಸ್ ನೀಡಿ ಸ್ಪಷ್ಟೀಕರಣ ಕೇಳಿದ್ದಾರೆ. ಸಾಫ್ಟ್ವೇರ್‌ನಲ್ಲಿ ಉಂಟಾದ ದೋಷದಿಂದಾಗಿ ಫಲಿತಾಂಶದಲ್ಲಿ ಪ್ರಮಾದ ಆಗಿರುವುದನ್ನು ಏಜೆನ್ಸಿ ಪಡೆದುಕೊಂಡಿರುವ ಕಂಪೆನಿ ಒಪ್ಪಿಕೊಂಡಿದೆ ಎಂದು ಕುಲಸಚಿವರು ತಿಳಿಸಿದರು. ದೂರ ಶಿಕ್ಷಣ ಕೇಂದ್ರದ ನಿರ್ದೇಶಕ ಪ್ರೊ| ಸಂಗಪ್ಪ, ಸಹಾಯಕ ಕುಲ ಸಚಿವೆ ಯಶೋದಾ, ವಿಶೇಷ ಅಧಿಕಾರಿ ಡಾ| ರಮೇಶ್, ತಾಂತ್ರಿಕ ಸಮಿತಿಯ ಸದಸ್ಯ ಡಾ| ರವಿ ಉಪಸ್ಥಿತರಿದ್ದರು.