Advertisement
`ಐಡಿಯಾ ಆಫ್ ಭಾರತ್ – ಟುಡೇ ಎಂಡ್ ಟುಮೊರೊ ‘ ( ಭಾರತದ ಪರಿಕಲ್ಪನೆ-ಇಂದು ಮತ್ತು ನಾಳೆ) ಎಂಬ ಶೀರ್ಷಿಕೆಯಡಿಯಲ್ಲಿ ನಗರದ ಡಾ| ಟಿ.ಎಂ.ಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿರುವ ಎರಡುದಿನಗಳ ಮಂಗಳೂರು ಲಿಟ್ ಫೆಸ್ಟ್ 2019 ರ ಎರಡನೇ ಅವೃತ್ತಿಯನ್ನು ಶುಕ್ರವಾರದಂದು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯಭಾಷೆಗಳಲ್ಲೇ ಶಿಕ್ಷಣ ನೀಡಬೇಕು ಎಂಬುದಾಗಿ ನಾನು ಹಾಗೂ ಡಾ| ಎಸ್.ಎಲ್. ಭೈರಪ್ಪ ಅವರು ಜತೆ ಸೇರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಈಗಾಗಲೇ ಮನವಿ ಮಾಡಿದ್ದೇವೆ. ಇದಕ್ಕೆ ಪೂರಕವಾಗಿ ಸ್ಪಂದನೆ ಇನ್ನೂ ಬಂದಿಲ್ಲ ಎಂದರು.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿವಿ ಕುಲಾಧಿಪತಿ ಹಾಗೂ ಲಿಟ್‌ಫೆಸ್ಟ್ ಸಂಘಟನಾ ಸಮಿತಿ ಅಧ್ಯಕ್ಷ ಡಾ| ಎನ್.ವಿನಯ ಹೆಗ್ಡೆ ಅವರು ಮಾತನಾಡಿ ಈ ಹಿಂದೆ ನಮ್ಮಲ್ಲಿ ಭಾರತ ಪರಿಕಲ್ಪನೆ ಇಲ್ಲದ ಪರಿಣಾಮವಾಗಿಯೇ ವಿದೇಶಿಯರು ದೇಶದ ಮೇಲೆ ಆಕ್ರಮಣ ಮಾಡಲು ಸಾಧ್ಯವಾಯಿತು. ನಮ್ಮ ದೇಶದ ಇತಿಹಾಸ, ಪರಂಪರೆ, ಸಂಸ್ಕೃತಿಯ ಅವಲೋಕನ ಮತ್ತು ಮನನ ಮಾಡಿಕೊಂಡು ಪ್ರಸ್ತುತ ಭಾರತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಬಗ್ಗೆ ಯುವಜನತೆಯನ್ನು ಚಿಂತನೆ ಹಚ್ಚಬೇಕಾಗಿದೆ. ಇಂತಹ ಕಾರ್ಯ ಲಿಟ್‌ಫೆಸ್ಟ್ ನಂತಹ ಕಾರ್ಯಕ್ರಮಗಳ ಮೂಲಕ ಆಗಬೇಕಾಗಿದೆ ಎಂದರು. ನಮ್ಮ ಭಾಷೆಯನ್ನು ಪ್ರೀತಿಸಬೇಕು. ಜತೆ ಅನ್ಯ ಭಾಷೆಯನ್ನು ಗೌರವಿಸಬೇಕು. ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದರು.
ಲಿಟ್‌ಫೆಸ್ಟ್ ನ ಉದ್ದೇಶವನ್ನು ವಿವರಿಸಿದ ಎಂ.ಎಸ್. ಚೈತ್ರ ಅವರು ವಿದೇಶಿ ಅನುಕರಣೆಯ ಭರಾಟೆಯಲ್ಲಿ ನಮ್ಮ ದೇಶದ ಜ್ಞಾನ, ಸಂಸ್ಕೃತಿ, ಜಾನಪದ,ಪರಂಪರೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಈ ಬಗ್ಗೆ ಅತ್ಮಾವಲೋಕನ, ಚಿಂತನ ಮಂಥನ ನಡೆಯಬೇಕಾದ ಅವಶ್ಯಕತೆ ಇದೆ. ಅದಕ್ಕೆ ವೇದಿಕೆಯೊದಗಿಸುವ ನಿಟ್ಟಿನಲ್ಲಿ ಲಿಟ್‌ಫೆಸ್ಟ್ ಆಯೋಜಿಸಲಾಗಿದೆ ಎಂದರು. ಪುಸ್ತಕ ಪಾಧಿಕಾರದ ಅಧ್ಯಕ್ಷ ಡಾ| ಬಿ.ವಿ. ವಸಂತ ಕುಮಾರ್ ಉಪಸ್ಥಿತರಿದ್ದರು. ಪ್ರೊ| ರವಿಶಂಕರ್ ನಿರೂಪಿಸಿದರು.