Advertisement

ಮಂಗಳೂರು ವಿದ್ಯಾರ್ಥಿನಿ ಕೊಲೆ; ಆರೋಪಿ ಪೊಲೀಸ್‌ ವಶಕ್ಕೆ

10:07 AM Jun 09, 2019 | Vishnu Das |

ಮಂಗಳೂರು : ನಗರದ ಪಿಜಿಯಲ್ಲಿ ಶುಕ್ರವಾರ ಸಂಜೆ ನಡೆದ ಅಂಜನಾ ವಸಿಷ್ಠ (22)ಎಂಬ ವಿದ್ಯಾರ್ಥಿನಿಯ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬಂಧಿತ ಆರೋಪಿ ಸಂದೀಪ್‌ ರಾಠೊಡ್‌ ಎನ್ನುವವನಾಗಿದ್ದಾನೆ. ವಿಜಯಪುರದ ಸಿಂದಗಿ ಮೂಲದ ಬೆನಕೋಟಗಿ ತಾಂಡಾದ ನಿವಾಸಿ ಎಂದು ತಿಳಿದು ಬಂದಿದೆ.

ರಾಠೊಡ್‌ನ‌ನ್ನು ಸಿಂದಗಿಯಲ್ಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹತ್ಯೆಗೈದು ಆತ ಹುಟ್ಟೂರಿಗೆ ಪರಾರಿಯಾಗಿದ್ದ.

ಬ್ಯಾಂಕಿಂಗ್‌ ಪರೀಕ್ಷೆ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ  ಚಿಕ್ಕಮಗಳೂರಿನ ತರೀಕೆರೆಯ ಮಂಜುನಾಥ ವೈ.ಎನ್‌ ಎಂಬವರ ಪುತ್ರಿ ವಸಿಷ್ಠ ಅಂಜನಾ ಉಜಿರೆಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಎಂ.ಎಸ್ಸಿ ಪೂರೈ ಸಿದ್ದಳು.

ಜೂ. 2ರಂದು ಕೋಚಿಂಗ್‌ ಸೆಂಟರ್‌ ಒಂದರಲ್ಲಿ ಬ್ಯಾಂಕಿಂಗ್‌ ಪರೀಕ್ಷೆ ತರಬೇತಿಗೆ ಮಂಗಳೂರಿಗೆ ಬಂದಿದ್ದಳು. ಆಕೆಯೊಂದಿಗೆ ಉಜಿರೆಯಲ್ಲಿ ಪರಿಚಿತನಾಗಿದ್ದ ಆರೋಪಿ ಸಂದೀಪ್‌ ರಾಠೊಡ್‌ ತರಬೇತಿಗೆ ಬಂದಿದ್ದ. ಇಬ್ಬರೂ ತಾವು ದಂಪತಿ ಎಂದು ಸುಳ್ಳು ಹೇಳಿ ಅತ್ತಾವರ ಕೆಎಂಸಿ ಆಸ್ಪತ್ರೆಯ ಹಿಂದಿನ ಮನೆಯ ಪಿಜಿಯಲ್ಲಿ ಇದ್ದರು ಎನ್ನಲಾಗಿದೆ.

Advertisement

2 ದಿನಗಳ ಬಳಿಕ ಆಕೆ ಊರಿಗೆ ಮರಳಿದ್ದು, ರಾಠೊಡ್‌ ಫೋನ್‌ ಮೂಲಕ ಆಕೆಯನ್ನು ಕರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಮಂಗಳೂರಿಗೆ ಬಂದಿದ್ದಳು. ಪಿಜಿಗೆ ಬಂದ ಬಳಿಕ ಸಂಜೆ ವೇಳೆ ಆಕೆ ಶವವಾಗಿ ಪತ್ತೆಯಾಗಿದ್ದಳು.

ವೈರ್‌ ಬಿಗಿದು ಕೊಲೆ?
ಬೆಡ್‌ನ‌ಲ್ಲಿ ಟಿವಿ ಕೇಬಲ್‌ ವೈಯರ್‌ ಕತ್ತಿಗೆ ಬಿಗಿದು ಕೊಲೆ ಮಾಡಿ ಹೊರಗಿನಿಂದ ಬಾಗಿಲು ಹಾಕಿ ಪರಾರಿಯಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಸಂಜೆವರೆಗೆ ಬಾಗಿಲು ತೆರೆಯದ್ದರಿಂದ ಕಸ ಗುಡಿ ಸುವ ಮಹಿಳೆಗೆ ಸಂಶಯ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಾಗಿಲು ಒಡೆದು ನೋಡಿ ದಾಗ ಕೊಲೆಯಾಗಿರುವುದು ಗೊತ್ತಾಗಿತ್ತು. ಅಂಜನಾಳಿಗೆ ಇತ್ತೀಚೆಗೆ ಮನೆ ಯವರು ಬೇರೆ ಹುಡುಗ ನೊಂದಿಗೆ ಮದುವೆಗೆ ಮಾತುಕತೆ ನಡೆಸಿ ದ್ದರು. ಇದೇ ಆಕೆಯ ಕೊಲೆಗೆ ಕಾರಣ ವಾಗಿರಬಹುದು ಎಂದು ಶಂಕಿಸಲಾಗಿದೆ.

ಚಿಕ್ಕಮಗಳೂರಿಂದ ತಂದೆಯೆ ಕಳಿಸಿದ್ದರು
ವಾಪಸ್‌ ಮಂಗಳೂರಿಗೆ ಹೊರ ಟಿದ್ದ ಅಂಜನಾಳನ್ನು ಆಕೆಯ ತಂದೆಯೇ ಚಿಕ್ಕಮಗಳೂರಿನಲ್ಲಿ ಬಸ್‌ ಹತ್ತಿಸಿ ಕಳುಹಿಸಿದ್ದರು. ಜತೆಗೆ ಮಂಗಳೂರಿಗೆ ತಲುಪಿದ ಬಗ್ಗೆಯೂ ಆಕೆ ಮನೆಗೆ ತಿಳಿಸಿದ್ದಳು. ಕೋಚಿಂಗ್‌ಗಾಗಿ ಮಂಗಳೂರಿನಲ್ಲಿ ಪಿಜಿಯಲ್ಲಿರುವುದಾಗಿಯೂ ಆಕೆ ಮನೆಯವರಿಗೆ ತಿಳಿಸಿದ್ದಳು.

ತನಿಖೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next