“ಉದಯವಾಣಿ’ಯ ನಮ್ಮ ತಂಡವು ಮೊದಲು ಹೋದದ್ದು ಜನವಾಸದ ಜತೆಗೆ ವಾಣಿಜ್ಯ ಚಟುವಟಿಕೆಗಳು ಬಹಳವಾಗಿರುವ ಬಿಕರ್ನಕಟ್ಟೆ ಹಾಗೂ ಸುತ್ತಲಿನ ಪ್ರದೇಶಗಳಿಗೆ. ಅಲ್ಲಿ ಪಕ್ಷವೊಂದರ ಬಹಿರಂಗ ಪ್ರಚಾರಕ್ಕೆ ಸಿದ್ಧತೆ ಕಾಣಿಸಿತು. “ಇವತ್ತಿನ ಸಭೆಯಲ್ಲಿ ನಮ್ಮ ಪಕ್ಷಕ್ಕೆ ಬೇರೆ ಪಕ್ಷದ ಕೆಲವರು ಸೇರ್ಪಡೆಗೊಳ್ಳುವವರಿದ್ದಾರೆ. ಅವರು ಬರುತ್ತೇನೆಂದು ಮೊನ್ನೆ ಹೇಳಿದ್ದರು. ಇವತ್ತು ಅವರೆಲ್ಲ ಸೇರ್ಪಡೆಯಾಗುತ್ತಾರಲ್ಲವೇ?’ ಎಂದು ಸಭೆ ಮೇಲುಸ್ತುವಾರಿ ವಹಿಸಿದ್ದ ಮುಖಂಡರೊಬ್ಬರು ಪಕ್ಕದಲ್ಲಿದ್ದ ಕಾರ್ಯ ಕರ್ತರಲ್ಲಿ ಆತಂಕದಿಂದ ವಿಚಾರಿಸುತ್ತಿರು ವುದು ಕೇಳಿಸಿತು. “ಅವರು ಬಾರದಿದ್ದರೆ ನಮ್ಮ ಕಥೆ ಕೈಲಾಸ. ಅವರನ್ನು ಕರೆತರುವ ಕೆಲಸ ಆಗಬೇಕು’ ಎಂದು ಕೆಲವರು ಸಲಹೆ ಮಾಡುತ್ತಿದ್ದರು. ಮುಂದೆ ಸಾಗಿದಾಗ ಮರೋಳಿಯಲ್ಲಿ ಇನ್ನೊಂದು ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುತ್ತಿರುವ ವಾಹನ ರೊಯ್ಯನೆ ಸಾಗಿತು. ಪ್ರಚಾರದ ಕಾವು ಈ ಭಾಗದಲ್ಲಿ ಸ್ವಲ್ಪ ಹೆಚ್ಚೇ ಇರುವ ಅನುಭವಾಯಿತು.
Advertisement
ಅಲ್ಲಿ ಇಲ್ಲಿ ಬಿಸಿ; ಕೆಲವೆಡೆ ತಣ್ಣನೆಪಡೀಲ್ನ ಲ್ಲಿ ಚುನಾವಣೆ ವಾತಾವರಣ ಎಲ್ಲಿಯೂ ಕಾಣಿಸಲಿಲ್ಲ. ಅಂಗಡಿಯೊಂದರ ಬಳಿ ಹಿಂದಿನ ದಿನ ಸಂಜೆ ನಾಗುರಿಯಲ್ಲಿ ನಡೆದ ಒಂದು ಪಕ್ಷದ ಪ್ರಚಾರದ ಸಭೆಯ ಕುರಿತು ಮಾತುಕತೆ ನಡೆಯುತ್ತಿತ್ತು. ಪಡೀ ಲ್- ಬಜಾಲ್ ರಸ್ತೆಯ ಅಂಗಡಿ ಬಳಿ ತೆರಳಿ ಮಾತಿಗೆಳೆದಾಗ, “ಏರೆನ್ ಕೇಂಡಲಾ ಎಂಕ್ಲೇ ಬರ್ಪ . ಪಕ್ಷೇತೆರೆರೆನ್ ಕೇಂಡಲಾ ಅವೇ ಪಾತೆರ’ (ಯಾರನ್ನು ಕೇಳಿದರೂ ನಾವೇ ಗೆಲ್ಲುತ್ತೇವೆ ಎಂಬ ಮಾತು ಕೇಳಿಬರುತ್ತದೆ) ಎಂದರು.
Related Articles
Advertisement
ಸುತ್ತಾಟ: ಬಿಕರ್ನಕಟ್ಟೆ, ಪಡೀಲ್, ಪಂಪ್‌ವೆಲ್, ಎಕ್ಕೂರು,ಕಂಕನಾಡಿ, ವೆಲೆನ್ಸಿಯಾ, ಜಪ್ಪು
ಬೇಸಗೆ ರಜಾ ದಿನವಾದ ಕಾರಣ ಮನೆಯಲ್ಲಿ ಯಾರೂ ಇರುವುದಿಲ್ಲ. ಹೀಗಾಗಿ ಪ್ರಚಾರದ ಕರಪತ್ರಗಳನ್ನು ಆವರಣದಲ್ಲಿ ಎಸೆದು ಹೋಗುತ್ತಾರೆ, ಅಥವಾ ಪಕ್ಕದ ಮನೆಯವರ ಬಳಿ ಕೊಟ್ಟು ಹೋಗುತ್ತಾರೆ. ಹಾಗಾಗಿ ಕೆಲವೊಂದು ಬಾರಿ ಮನೆ ಮಂದಿಗೆ ಅಭ್ಯರ್ಥಿಗಳ ದರ್ಶನವೇ ಆಗುತ್ತಿಲ್ಲ.– ಮಾರ್ಶಲ್, ಬಿಕರ್ನಕಟ್ಟೆ ಈಗ ಜನರಲ್ಲಿ ಮತ ಚಲಾಯಿಸುವ ಉಮೇದು ಕಡಿಮೆಯಾಗಿದೆ. ಚುನಾವಣೆ ಬಂದಾಗ ನಮ್ಮ ಬಳಿಗೆ ಬಂದು ಓಟು ಕೊಡಿ ಎಂದು ಕಾಲು ಹಿಡಿಯುತ್ತಾರೆ; ಗೆದ್ದ ಮೇಲೆ ನಾವೇ ಅವರ ಕಾಲು ಹಿಡಿದರೂ ನಮ್ಮ ಕೆಲಸ ಮಾಡಿಸಿ ಕೊಡುವುದಿಲ್ಲ ಎಂಬುದೇ ಇದಕ್ಕೆ ಕಾರಣ.
-ಚೇತನ್, ಎಕ್ಕೂರು – ಹಿಲರಿ ಕ್ರಾಸ್ತಾ