Advertisement

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ: ಕುತೂಹಲದ ಪೂರ್ವರಂಗ

01:10 PM Apr 06, 2018 | |

ಕರ್ನಾಟಕದ ಪ್ರತಿಷ್ಠೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ ಮಂಗಳೂರು ದಕ್ಷಿಣ ಕ್ಷೇತ್ರ. ಮಂಗಳೂರು ಮಹಾನಗರ ಪಾಲಿಕೆಯ ಬಹುತೇಕ ಪ್ರದೇಶಗಳನ್ನು ಒಳಗೊಂಡಿರುವುದರಿಂದ ಮಹತ್ವದ ಕ್ಷೇತ್ರ. ಮಂಗಳೂರು ಸ್ಮಾರ್ಟ್‌ ಸಿಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಶಾಸಕರಿಗೆ ಹೆಚ್ಚುವರಿ ಹೊಣೆಗಾರಿಕೆ.

Advertisement

2008ರ ಚುನಾವಣೆ ಸಂದರ್ಭದಲ್ಲಿ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡನೆಯಾಯಿತು. ಈ ಪ್ರಕ್ರಿಯೆಯಲ್ಲಿ ಮಂಗಳೂರು ಕ್ಷೇತ್ರ ವಿಸ್ತಾರವಾಯಿತು. ಮಂಗಳೂರು ಕ್ಷೇತ್ರದ ಹೆಸರು ಕೂಡ ಬದಲಾಯಿತು. ಮತದಾರರ ಸಂಖ್ಯೆಯೂ ಹೆಚ್ಚಾಯಿತು.

ಅದು ಈಗ ಮಂಗಳೂರು ದಕ್ಷಿಣ ಕ್ಷೇತ್ರ. ಪಕ್ಕದ ಉಳ್ಳಾಲ ಕ್ಷೇತ್ರ ಈ ಪ್ರಕ್ರಿಯೆಯಲ್ಲಿ ಮಂಗಳೂರು ಎಂದಾಯಿತು. ಮಂಗಳೂರು ದಕ್ಷಿಣ ಕ್ಷೇತ್ರ ರಾಜ್ಯಕ್ಕೆ ಸಮಗ್ರವಾಗಿ ನಿರ್ಣಾಯಕ ಕೊಡುಗೆಗಳನ್ನು ವಿವಿಧ ರಂಗಗಳಲ್ಲಿ ನೀಡುತ್ತಿದೆ. ಮಹತ್ವದ ಪ್ರಗತಿ ಕಾರ್ಯಗಳು ಮಂಗಳೂರನ್ನು ಕೇಂದ್ರೀಕರಿಸಿ ನಡೆಯುತ್ತಿವೆ.

ಮಂಗಳೂರು ದಕ್ಷಿಣ ‘ಕ್ಷೇತ್ರ’ದ ಚುನಾವಣಾ ಇತಿಹಾಸವೂ ಕುತೂಹಲಕಾರಿಯಾಗಿದೆ. ಸಂಗ್ರಹಿತ ಮಾಹಿತಿಯಂತೆ ಇಲ್ಲಿ 1952ರಲ್ಲಿ ಪ್ರಥಮ ಚುನಾವಣೆ ನಡೆದಿತ್ತು. ಆ ಬಳಿಕ 1962 ಮತ್ತು 1967ರಲ್ಲಿ ಕಾಂಗ್ರೆಸ್‌ ಜಯಿಸಿತು. 1972ರಲ್ಲಿ ಪ್ರಥಮ ಬಾರಿಯಾಗಿ ಮಹಿಳಾ ಅಭ್ಯರ್ಥಿ (ಕಾಂಗ್ರೆಸ್‌ನ ಎಡ್ಡಿ ಸಲ್ದಾನ) ಇಲ್ಲಿ ಗೆದ್ದರು.

1972ರಲ್ಲಿ ಕಾಂಗ್ರೆಸ್‌, 1983ರಲ್ಲಿ ಬಿಜೆಪಿ, 1985 ಮತ್ತು 1989ರಲ್ಲಿ ಕಾಂಗ್ರೆಸ್‌, 1994, 1999, 2004, 2008ರಲ್ಲಿ ಸತತ 4 ಬಾರಿಯಾಗಿ ಬಿಜೆಪಿಯ ಎನ್‌. ಯೋಗೀಶ್‌ ಭಟ್‌ ಗೆದ್ದರು. 2013ರಲ್ಲಿ ಕಾಂಗ್ರೆಸ್‌ ಜಯಿಸಿತು.

Advertisement

ಈ ಬಾರಿಯ ಚುನಾವಣೆಗೆ ಸಂಬಂಧಿಸಿ ಚಟುವಟಿಕೆಗಳು ಇಲ್ಲಿ ಆರಂಭವಾಗಿವೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಇನ್ನು ಕೂಡ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿಲ್ಲ. ಇದು ಚುನಾವಣಾ ಪೂರ್ವರಂಗಕ್ಕೆ ಯಾವುದೇ ರೀತಿ ಪ್ರಭಾವಿಸಿಲ್ಲ. ನಿರೀಕ್ಷೆಯಂತೆ ಇಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪ್ರಮುಖ ಹೋರಾಟ. ಜೆಡಿಎಸ್‌ ಮತ್ತು ಇತರ ಪಕ್ಷಗಳ ನಿಲುವು ಇನ್ನು ಘೋಷಣೆಯಾಗಿಲ್ಲ. ಕಾಂಗ್ರೆಸ್‌ನ ಅಭ್ಯರ್ಥಿ ಯಾರೆಂದು ತೀರ್ಮಾನವಾಗಿದೆ; ಘೋಷಣೆಯಷ್ಟೇ ಬಾಕಿ ಎಂಬುದು ಕೆಲವು ಮೂಲಗಳ ಮಾಹಿತಿ. ಬಿಜೆಪಿಯಲ್ಲಿ ಇಬ್ಬರು ಮತ್ತು ಓರ್ವ ಮೂರನೆಯವರ ಹೆಸರು ಹೆಚ್ಚು ಪ್ರಚಲಿತದಲ್ಲಿದೆ.

ಅಂದ ಹಾಗೆ…
ಇದು 66 ವರ್ಷಗಳ ಹಿಂದಿನ ದಾಖಲೆ. ಆಗ ನಡೆದ ಪ್ರಥಮ ವಿಧಾನಸಭಾ ಚುನಾವಣೆಯಲ್ಲಿ ಆಗಿನ ಸೌತ್‌ ಕೆನರಾ ಜಿಲ್ಲೆಯು ಆಗಿನ ಮದ್ರಾಸ್‌ ಪ್ರಾಂತ್ಯಕ್ಕೆ (ಪ್ರಸಿಡೆನ್ಸಿ) ಸೇರಿತ್ತು. ಮಂಗಳೂರು ಕ್ಷೇತ್ರದಿಂದ ಗೆದ್ದವರು ಕಾಂಗ್ರೆಸ್‌ನ ಎಲ್‌.ಸಿ. ಪಾಯಿಸ್‌ ಅವರು. ನ್ಯಾಯವಾದಿ ಆಗಿದ್ದ ಅವರು 22,285 ಮತ ಪಡೆದರೆ ಸಿಪಿಐಯ ಎ. ಶಾಂತಾರಾಮ ಪೈ 13,818, ಜನಸಂಘದ ಅನಂತ ಮಲ್ಯ 2,949 ಮತ ಗಳಿಸಿದ್ದರು. 9 ಮಂದಿ ಕಣದಲ್ಲಿದ್ದರು! 

ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next