Advertisement
ದೇಶದ 100 ಸ್ಮಾರ್ಟ್‌ಸಿಟಿಗಳಲ್ಲಿ ಎರಡನೇ ಹಂತಕ್ಕೆ ಆಯ್ಕೆಯಾದ 75 ಸ್ಮಾರ್ಟ್‌ಸಿಟಿಯಲ್ಲಿ ಮಂಗಳೂರು ಕೂಡ ಒಂದು. ಅದರಂತೆ ಇದೀಗ ಸದ್ಯ ರ್‍ಯಾಂಕ್ ಪ್ರಕಟಿಸಿದ್ದು, ಮಂಗಳೂರು ನಗರ 49ನೇ ಸ್ಥಾನದಲ್ಲಿದೆ. ಎರಡನೇ ಹಂತದ ಸ್ಪರ್ಧೆ 6 ವಿಭಾಗಗಳಲ್ಲಿ ನಡೆಯುತ್ತಿದೆ.
Related Articles
Advertisement
ಹೆಚ್ಚುವರಿ ಮೂರು ವಿಭಾಗಕ್ಕೆ ಸ್ಪರ್ಧೆ
“ಬೆಸ್ಟ್ ಸ್ಮಾರ್ಟ್‌ಸಿಟಿ ಅವಾರ್ಡ್’ ಸಹಿತ ಕೇಂದ್ರ ಸರಕಾರದ ನಾಲ್ಕು ವಿಭಾಗಳಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಸ್ಪರ್ಧಿಸುತ್ತಿದೆ. ಸಂಚಾರ ವ್ಯವಸ್ಥೆ ಸುಧಾರಣೆಯ ನಿಟ್ಟಿನಲ್ಲಿ ಕೇಂದ್ರ ಸರಕಾರವು “ಟ್ರಾನ್ಸ್‌ಪೋರ್ಟ್ 4ಆಲ್’ ಎಂಬ ವಿಶೇಷ ಅಭಿಯಾನ ಆಯೋಜಿಸಿದ್ದು, ಇದರ ಎರಡನೇ ಹಂತದ ಯೋಜನೆಗೆ ಮಂಗಳೂರು ಸ್ಮಾರ್ಟ್ ಸಿಟಿ ಆಯ್ಕೆಯಾಗಿದೆ. ದೇಶದ 17 ರಾಜ್ಯಗಳಲ್ಲಿನ 46 ನಗರಗಳು ಸ್ಪರ್ಧಿಸುತ್ತಿದೆ. ಮಂಗಳೂರು ನಗರವನ್ನು ಸೈಕಲ್ ಸ್ನೇಹಿಯನ್ನಾಗಿಸುವ ನಿಟ್ಟಿನಲ್ಲಿ ನಗರದ ಓಣಿಗಳಲ್ಲಿ ಸೈಕಲ್ ಪಾಥ್ ನಿರ್ಮಾಣಕ್ಕೆ ಸೈಕಲ್4ಚೇಂಜ್ ಸ್ಪರ್ಧೆ ಆಯೋಜಿಸಿದ್ದು, ಮಂಗಳೂರು ಸ್ಪರ್ಧಿಸುತ್ತಿದೆ. ಅದೇ ರೀತಿ, ಮಂಗಳೂರು ನಗರದ ಬೀದಿಗಳನ್ನು ಸಾರ್ವಜನಿಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ “ಸ್ಟ್ರೀಟ್ಸ್4ಪೀಪಲ್’ ಎಂಬ ಅಭಿಯಾನದಲ್ಲಿಯೂ ಮಂಗಳೂರು ನಗರ ಸ್ಪರ್ಧೆಗಿಳಿದಿದೆ.