Advertisement
ಶನಿವಾರ ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿ ಗೋಡಂಬಿ ಕಾರ್ಖಾನೆ ಸಹಿತ ವಿವಿಧೆಡೆ ಮತಯಾಚನೆ ಬಳಿಕ ಕೈಗಾರಿಕೋದ್ಯಮಿಗಳೊಂದಿಗೆ ಮಾತು ಕತೆ ನಡೆಸಿದರು. ವೈದ್ಯಕೀಯ, ಶಿಕ್ಷಣ, ಪ್ರವಾಸೋದ್ಯಮ, ಕೈಗಾರಿಕೆ ಮತ್ತಿತರ ಕ್ಷೇತ್ರದಲ್ಲಿ ಅಭಿವೃದ್ಧಿಗೆ ವಿಪುಲ ಅವಕಾಶಗಳಿದ್ದವು. ಆದರೆ ಇಲ್ಲಿನ ಸಂಸದರ ಇಚ್ಛಾಶಕ್ತಿಯ ಕೊರತೆ ಯಿಂದ ಮೂಲಸೌಕರ್ಯದಲ್ಲಿ ಯಾವುದೇ ಬೆಳವಣಿಗೆಯಾಗಲಿಲ್ಲ. ಅಭಿವೃದ್ಧಿಗೆ ಬಂದ ಅನುದಾನಗಳು ಮರಳಿ ಹೋಗಿವೆ. ಯಾವುದೇ ಸ್ಪಷ್ಟ ನಿರ್ಧಾರ ತಾಳುವಲ್ಲಿ ಆಸಕ್ತಿ ವಹಿಸದ ಕಾರಣ ಈ ಸಮಸ್ಯೆಯಾಗಿದೆ.
ಆರಿಸಿ ಬಂದಲ್ಲಿ ಅದನ್ನು ಜಾರಿ ಮಾಡುವ ಮೂಲಕ ಪ್ರವಾಸೋದ್ಯಮದಲ್ಲಿ ಹೆಸರು ತರುವಂತೆ ಮಾಡುತ್ತೇನೆ ಎಂದರು. ಮಾಜಿ ಶಾಸಕ ಮೊದಿನ್ ಬಾವಾ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಾಜಿ ಉಪ ಮೇಯರ್ ಪುರುಷೋತ್ತಮ್ ಚಿತ್ರಾಪುರ, ಕೆ. ಸದಾಶಿವ ಶೆಟ್ಟಿ, ಕವಿತಾ ಸನಿಲ್, ಕುಮಾರ್ ಮೆಂಡನ್, ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಗೌರವ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಐಝಾಕ್ ವಾಸ್, ಉದ್ಯಮಿಗಳಾದ ಬಿ.ಎ. ನಝಿರ್ ಅಹ್ಮದ್, ಸ್ವರ್ಣ ಸುಂದರ್, ಅಜಿತ್ ಕಾಮತ್, ಹೆನ್ರಿ ಬ್ರಿಟೋ, ನಾಸೀರ್, ಹೇಮಂತ್ ಕುಮಾರ್, ಕಾರ್ಯಕರ್ತರು ಉಪಸ್ಥಿತರಿದ್ದರು.