Advertisement

ಮಂಗಳೂರು ಗ್ರಾಮಾಂತರ: 2ನೇ ದಿನ ಸಂಪೂರ್ಣ ಬಂದ್‌

09:14 PM Mar 29, 2020 | Sriram |

ಕಿನ್ನಿಗೋಳಿ: ದ.ಕ. ಸಂಪೂರ್ಣ ಬಂದ್‌ ಹಿನ್ನೆಲೆ ಕಿನ್ನಿಗೋಳಿ ಪರಿಸರದಲ್ಲಿ ಸಂರ್ಪೂಣ ಬಂದ್‌ ಮಾಡಿರುವುದರಿಂದ ಕಿನ್ನಿಗೋಳಿ ಮಾ. 29ರಂದು ಸ್ತಬ್ಧವಾಗಿದೆ.

Advertisement

ಕಿನ್ನಿಗೋಳಿ ಪರಿಸರದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್‌ ಮಾಡಿವೆ. ಕಿನ್ನಿಗೋಳಿಯ 3 ಮೆಡಿಕಲ್‌ ಶೋಪ್‌ಗ್ಳು ತೆರೆದಿದೆ, ಬೆಳಗ್ಗೆ ಅಂಗಡಿಗಳು ಪೇಪರ್‌, ಹಾಲು ವಿತರಣೆ ಮಾಡಿದ ಬಳಿಕ ಮುಚ್ಚಲಾಗಿದೆ. ಮೂಲ್ಕಿ ಪೋಲಿಸರು ಅನಾವಶ್ಯಕವಾಗಿ ದ್ವಿಚಕ್ರದಲ್ಲಿ ತಿರುಗಾಡುತ್ತಿರುವ ಜನರನ್ನು ವಿಚಾರಣೆ ಮಾಡಿ ಬಂದ್‌, ಕೊರೊನಾ ಜಾಗೃತಿಯ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರು.
ಕಿನ್ನಿಗೋಳಿಯ ಜೆಬಿ ಫ್ರೆಂಡ್ಸ್‌ನ ಸಂತೋಷ್‌ ಶೆಟ್ಟಿ ಪುನರೂರು ನೇತೃತ್ವದಲ್ಲಿ ಆರ್ಥಿ ಕವಾಗಿ ಅಸಹಾಯಕವಾಗಿರುವ ಸುಮಾರು 20ಕ್ಕೂ ಮಿಕ್ಕಿ ಕುಟುಂಬಗಳಿಗೆ ಅಕ್ಕಿ, ಬೆಳೆ, ದಿನಸಿ ವಸ್ತುಗಳನ್ನು ವಿತರಣೆ ಮಾಡಿದರು.

ಹಗ್ಗ ಕಟ್ಟಿ ಸಾಮಾಜಿಕ ಅಂತರ
ಉಳ್ಳಾಲ: ನೆರೆಯ ಕಾಸರಗೋಡು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌-19 ಸೋಂಕಿತರ ಪ್ರಮಾಣ ಹೆಚ್ಚಳದಿಂದ ದ.ಕ. ಜಿಲ್ಲಾಡಳಿತ ಸಂಪೂರ್ಣ ಕಪ್ಯೂì ವಿಧಿಸಿದ ಎರಡನೇ ದಿನವೂ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಪೂರ್ಣ ಬಂದ್‌ ಆಗಿದ್ದು ಮೆಡಿಕಲ್‌ ಶಾಪ್‌ಗ್ಳು ಮಾತ್ರ ತೆರೆದಿದ್ದು, ಇಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ.

ಉಳ್ಳಾಲ, ತೊಕ್ಕೊಟ್ಟು, ಕೋಟೆಕಾರು ಬೀರಿ, ದೇರಳಕಟ್ಟೆ, ನಾಟೆಕಲ್ಲು, ಅಸೈಗೋಳಿ, ಮುಡಿಪು ಸಹಿತ ಪ್ರಮುಖ ಜಂಕ್ಷನ್‌ಗಳಲ್ಲಿ ಮೆಡಿಕಲ್‌ ಶಾಪ್‌ಗ್ಳು ಮಾತ್ರ ತೆರದಿದ್ದು, ಕೆಲವೊಂದು ಅಗತ್ಯ ವಸ್ತುಗಳು ಮೆಡಿಕಲ್‌ಗ‌ಳಲ್ಲಿ ಲಭ್ಯವಿಲ್ಲ. ಹೆಚ್ಚಿನ ಮೆಡಿಕಲ್‌ ಶಾಪ್‌ಗ್ಳಲ್ಲಿ ಸಾಮಾಜಿಕ ಅಂತರಕ್ಕೆ ಫಲಕಗಳನ್ನು ಹಾಕಿದ್ದು ಕೆಲವೊಂದು ಮೆಡಿಕಲ್‌ ಶಾಪ್‌ಗ್ಳಲ್ಲಿ ಹಗ್ಗ ಕಟ್ಟಿ ಅಂತರವನ್ನು ಕಾಯ್ದುಕೊಂಡರೆ ಕೆಲವೊಂದು ಅಂಗಡಿಗಳಲ್ಲಿ ಸುಣ್ಣದ ಪೌಡರ್‌ ಬಳಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿದೆ.

ಅಗತ್ಯ ವಾಹನಗಳಿಗೆ ಪೆಟ್ರೋಲ್‌
ಈ ವ್ಯಾಪ್ತಿಯಲ್ಲಿ ಕೆಲವೊಂದು ಪೆಟ್ರೋಲ್‌ ಬಂಕ್‌ಗಳು ತೆರೆದಿದ್ದು ಅಗತ್ಯ ಸಾಮಾಗ್ರಿ ತಲುಪಿಸುವ ಮತ್ತು ಆರೋಗ್ಯ ಇಲಾಖೆ ಜಿಲ್ಲಾಡಳಿತದಿಂದ ಪಾಸ್‌ ಹೊಂದಿರುವ ವ್ಯಕ್ತಿಗಳ ವಾಹನಗಳಿಗೆ ಮಾತ್ರ ಪೆಟ್ರೋಲ್‌ ನೀಡಲಾಗುತ್ತಿದೆ. ಸಂಪೂರ್ಣ ಬಂದ್‌ನಿಂದ ತರಕಾರಿ ಮತ್ತು ಹಣ್ಣು ಹಂಪಲು ವ್ಯಾಪಾರಿಗಳು ತಾವು ತಂದಿದ್ದ ತರಕಾರಿಗಳು ಕೊಳೆತು ಹೋಗುವ ಭಯದಲ್ಲಿದ್ದು ಕೆಲವರು ರವಿವಾರ ಬೆಳಗ್ಗೆ ಕೊಳೆತ ತರಕಾರಿಗಳನ್ನು ತಮ್ಮ ತಮ್ಮ ಮನೆಗೆ ಸಾಗಿಸುತ್ತಿರುವುದು ಕಂಡು ಬಂತು.

Advertisement

ಜನಜೀವನ ಸ್ತಬ್ಧ
ಮೂಡುಬಿದಿರೆ: ಲಾಕ್‌ಡೌನ್‌ ಐದನೇ ದಿನಕ್ಕೆ ಕಾಲಿರಿಸಿದ್ದು ರವಿವಾರ ಮೂಡುಬಿದಿರೆಯಲ್ಲಿ ಔಷಧಾಲಯ, ಹಾಲು, ಪತ್ರಿಕಾ ಸ್ಟಾಲ್‌ ಹೊರತು ಎಲ್ಲ ವ್ಯವಹಾರಗಳೂ ಬಂದ್‌ ಆಗಿದ್ದವು.

ಮೂಲ್ಕಿ:ಸಂಪೂರ್ಣ ಬಂದ್‌
ಮೂಲ್ಕಿ: ಭಾರತ್‌ ಲಾಕ್‌ ಡೌನ್‌ ಆದ ಹಿನ್ನಲೆಯಲ್ಲಿ ಜಿಲ್ಲೆಯ ಗಡಿ ಪ್ರದೇಶವಾದ ಮೂಲ್ಕಿ ಠಾಣಾ ವ್ಯಾಪ್ತಿಯ ಎಲ್ಲೆಡೆಗಳಲ್ಲಿ ಪೊಲೀಸರು ಕಟ್ಟು ನಿಟ್ಟಿನ ಕ್ರಮದಿಂದ ಸಂಪೂರ್ಣ ಬಂದ್‌ ನಡೆದಿದೆ. ಮೆಡಿಕಲ್‌ ಶಾಪ್‌, ಕ್ಲಿನಿಕ್‌, ಆಸ್ಪತ್ರೆ ಮಾತ್ರ ತೆರೆದಿದ್ದು ಜನರು ಬೆಳಗ್ಗೆಯಿಂದಲೇ ಹಾಲು, ತರಕಾರಿ ಮತ್ತು ಇತರ ದಿನಸಿಗಾಗಿ ಎಲ್ಲೂ ಹೋದರೂ ಲಭ್ಯವಿಲ್ಲದೆ ಮನೆಗೆ ಹಿಂತಿರುಗಬೇಕಾಗಿದೆ. ಸುಮಾರು ಆರು ಗಂಟೆಯ ಹೊತ್ತಿಗೆ ಪೇಪರ್‌ ಮತ್ತು ಹಾಲು ಬಸ್‌ನಿಲ್ದಾಣದಲ್ಲಿ ಬಂದಿರುವುದು ಕ್ಷಣ ಮಾತ್ರದಲ್ಲಿ ಖಾಲಿಯಾಗಿದೆ. ದೇವಸ್ಥಾನದ ಮುಖ್ಯ ದ್ವಾರವನ್ನು ಮುಚ್ಚಿ ಪ್ರವೇಶ ಇಲ್ಲ ಎಂದು ಬರೆದಿರುವುದರಿಂದ ಕಂಡುಬಂತು. ನ. ಪಂ.ರಜೆಯಾದರೂ ಪೌರ ಕಾರ್ಮಿಕರು ಸ್ವತ್ಛತೆಯ ಕೆಲಸ ನಿರ್ವಹಿಸಿದರು.

ಸಾಮಾಜಿಕ ಅಂತರ
ಮೂಡುಬಿದಿರೆ: ಎಲ್ಲ ಔಷಧಾಲಯಗಳಲ್ಲಿ ಜನಸಂದಣಿ ಇತ್ತು. ಸಾಮಾಜಿಕ ಅಂತರ ಕಾಪಾಡಿ ಕೊಳ್ಳಲಾಗಿತ್ತು. ಲಾಕ್‌ಡೌನ್‌ ಅವಧಿಯಲ್ಲಿ ಪಾಲಿಸಬೇಕಾದ ನಿಯಮಗಳನ್ನು ಪೊಲೀಸರು ಧ್ವನಿವರ್ಧಕದ ಮೂಲಕ ಬಿತ್ತರಿಸುತ್ತಲಿದ್ದರು. ಸಮಾಜ ಮಂದಿರದಲ್ಲಿ ಕೊಪ್ಪಳಕ್ಕೆ ಹೋಗಬೇಕಾಗಿದ್ದ 55 ಮಂದಿ, ಬೆಳುವಾಯಿ ಕರಿಯಣ್ಣಂಗಡಿಯಲ್ಲಿ ಕೆಂಪು ಕಲ್ಲು ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಕೊಪ್ಪಳದ 40 ಮಂದಿ ಉಳಿದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next