Advertisement

ಮಂಗಳೂರು: ವೇಶ್ಯಾವಟಿಕೆ ಜಾಲ ಪತ್ತೆ; ಇಬ್ಬರ ಬಂಧನ

07:59 PM Oct 31, 2019 | Naveen |

ಮಂಗಳೂರು: ಕಂಕನಾಡಿಯ ಎಂಪೋರಿಯಂ ವಾಣಿಜ್ಯ ಸಂಕೀರ್ಣದಲ್ಲಿರುವ ಎಂಬಲ್ಲಿಸ್ ಸಲೂನ್ ಮತ್ತು ಸ್ಪಾ ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಟಿಕೆ ಜಾಲವನ್ನು ಕದ್ರಿ ಪೊಲೀಸರು ಕಾರ್ಯಚರಣೆ ಮೂಲಕ ಗುರುವಾರದಂದು ಪತ್ತೆ ಹಚ್ಚಿದ್ದಾರೆ.

Advertisement

ಈ ಕಾರ್ಯಚರಣೆಯಲ್ಲಿ ಇಬ್ಬರು ಪಿಂಪ್ ಗಳಾದ ಮಂಗಳದೇವಿಯ ವಾಲಿದ್ ಖಾನ್ (34 ವರ್ಷ) ಮತ್ತು ಉತ್ತರ ಪ್ರದೇಶದ ಇಸ್ತಿಕಾರ್ (38 ವರ್ಷ) ಎಂಬವರನ್ನು ಬಂಧಿಸಲಾಗಿದೆ. ಇನೋರ್ವ ಮಹಿಳಾ ಪಿಂಪ್ ವಿನೋಧ ಎಂಬುವವರು ತಲೆಮರೆಸಿಕೊಂಡಿದ್ದು, ಈಕೆಯ ವಿರುದ್ಧ ಈ ಹಿಂದೆ ವೇಶ್ಯಾವಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಕದ್ರಿ ಇನ್ಸ್ಪಪೆಕ್ಟರ್ ಶಾಂತಾರಾಮ, ಎಸೈ, ಮಾರುತಿ, ಮತ್ತು ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next