Advertisement

ಮಂಗಳೂರು ಗಲಭೆಯ ದೃಶ್ಯ ತುಣುಕುಗಳ ಘಟನೆ, ಸನ್ನಿವೇಶ ಪರಿಶೀಲಿಸುವುದು ಅಗತ್ಯ: ಡಾ. ಹರ್ಷ

10:02 AM Jan 12, 2020 | Naveen |

ಮಂಗಳೂರು: ಮಂಗಳೂರು ಗಲಭೆಯ ವಿಚಾರವಾಗಿ ಘಟನೆಯ ಕೆಲ ಆಯ್ದು ದೃಶ್ಯಗಳನ್ನು ಘಟನೆ ಮತ್ತು ಸನ್ನಿವೇಶ ಬದಲಾಯಿಸಿ ಮಾಧ್ಯಮಕ್ಕೆ ಬಿಡುಗಡೆ ಮಾಡಲಾಗಿದೆ. ಈ ತುಣುಕುಗಳ ಸಮಗ್ರ ದೃಶ್ಯ ನೋಡಿದಾಗ ಸಂಪೂರ್ಣ ನೈಜ ಚಿತ್ರಣ ನೋಡಲು ಸಾಧ್ಯ. ಹಾಗಾಗಿ ತುಣುಕುಗಳ ಘಟನೆ ಮತ್ತು ಸನ್ನಿವೇಶ ಪರಿಶೀಲಿಸುವುದು ಅಗತ್ಯ ಎಂದು ಮಂಗಳೂರು ನಗರ ಪೊಲೀಸ್ ಕಮಿಷನ್ ಡಾ. ಪಿ ಎಸ್ ಹರ್ಷ ಹೇಳಿದರು.

Advertisement

ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ವಿಡಿಯೋ ಬಿಡುಗಡೆ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಈ ಘಟನೆಯ ಕುರಿತು ಈಗಾಗಲೇ ಸಿಐಡಿ ಮತ್ತು ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ಈಗಾಗಿ ಮಂಗಳೂರು ಪೊಲೀಸ್ ತಮ್ಮ ಬಳಿ ಇದ್ದ ಸಾಕ್ಷ್ಯಗಳನ್ನು ಶಾಸನಬದ್ದವಾದ ತನಿಖಾ ಸಂಸ್ಥೆಗೆ ಒದಗಿಸಲಿದೆ. ಸಂಪೂರ್ಣ ತನಿಖೆ ಬಳಿಕ ಪೂರ್ಣ ಸತ್ಯ ಹೊರ ಬರಲಿದೆ ಎಂದು ಹೇಳಿದರು.

ಕಳೆದ ಡಿಸೆಂಬರ್ 19 ರಂದು 144 ಸೆಕ್ಷನ್ ಜಾರಿಯಲ್ಲಿತ್ತು. ಆದರೂ ಕೆಲ ಕಿಡಿಕೇಡಿಗಳ ಗುಂಪು ಅಕ್ರಮ ಕೂಟ ರಚಿಸಿ ವ್ಯಾಪಕ ಹಿಂಸಾಚಾರಕ್ಕೆ ತೊಡಗಿದರು. ಈ ಸಂದರ್ಭ ಕರ್ತವ್ಯ ನಿರತ ಪೊಲೀಸರು ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡು ಶಾಂತಿ ಸುವ್ಯವಸ್ಥೆ ಪುನರ್ ಸ್ಥಾಪಿಸಿರುತ್ತಾರೆ. ಘಟನೆ ಕುರಿತು ಆರೋಪಿಗಳ ಪತ್ತೆಗಾಗಿ ವಿಡಿಯೋಗಳನ್ನು ಮಂಗಳೂರು ಪೊಲೀಸ್ ಅಧಿಕೃತ ಫೇಸ್ ಬುಕ್ ಪೇಜ್‌ನಲ್ಲಿ ಹಾಕಲಾಗಿದೆ, ಈ ಕುರಿತು ಸಾರ್ವಜನಿಕರಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ವಿಡಿಯೋ ಲಭ್ಯ ಆಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next