ಮಂಗಳೂರು: ಕುವೈಟ್‌ಗೆತೆರಳಿ ಅತಂತ್ರ ಸ್ಥಿತಿಯಲ್ಲಿರುವ 35 ಮಂದಿ ಯುವಕರನ್ನು ರವಿವಾರ ಕುವೈಟ್‌ನ ಖ್ಯಾತ ಉದ್ಯಮಿಯೊಬ್ಬರು ಭೇಟಿ ಮಾಡಿದ್ದು, ಸಮಸ್ಯೆ ಇತ್ಯರ್ಥ ಗೊಳಿಸಲು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಕುವೈಟ್‌ನಲ್ಲಿರುವ ಮಂಗಳೂರು ಮೂಲದ ಕನ್ನಡಿಗರು ಯುವಕ ರೊಂದಿಗೆ ಈ ಉದ್ಯಮಿಯ ಭೇಟಿ ಮಾಡಿಸಿದ್ದರು. ವಂಚಿಸಿದ ಕಂಪೆನಿ ಮುಖ್ಯಸ್ಥರ ಜತೆ ಮಾತುಕತೆ ನಡೆಸಿ, ಸಮಸ್ಯೆ ಇತ್ಯರ್ಥಗೊಳಿಸುವುದಾಗಿ ಉದ್ಯಮಿ ಭರವಸೆ ನೀಡಿದ್ದಾರೆ.
ಕುವೈಟ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೂ ಸಮಸ್ಯೆ ಯನ್ನು ಗಂಭೀರವಾಗಿ ಪರಿಗಣಿ ಸಿದ್ದು, ವಂಚಿಸಿದ ಕಂಪೆನಿಯನ್ನು ಕರೆಸಿ ಕೊಳ್ಳಲಿದೆ ಎಂಬ ಮಾಹಿತಿ ಲಭಿಸಿದೆ.
ರವಿವಾರದಂದು ಕುವೈಟ್‌ನಲ್ಲಿ ರುವ ಅನಿವಾಸಿ ಕನ್ನಡಿಗರಾದ ಎಂ. ಮೋಹನ್‌ದಾಸ್ ಕಾಮತ್, ರಾಜ್ ಭಂಡಾರಿ, ನೌಶದ್, ಮಾಪಿಯಾ ಕಡಬ ಯುವಕರಿಗೆ ಊಟೋಪಚಾರ ಕಲ್ಪಿಸಿದ್ದಾರೆ. ದಿಲ್ಲಿ ಮೂಲದ ಉದ್ಯಮಿ ಆಕಾಶ್ ಎಸ್. ಪನ್ವಾರ್ ಅವರಿಗೆ ಭಾರತಕ್ಕೆ ಮರಳುವವರೆಗೆ ಆಹಾರ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದಾರೆ.
ಯುವಕರು ಈಗ ಇನೆಸ್ಕೋ ಕಂಪೆನಿ ನಿಯೋಜಿಸಿದ ಮೆಸ್‌ನಲ್ಲಿ ಇದ್ದು, ಆ ಕಂಪೆನಿಯು ಹಣ ನೀಡಿಲ್ಲ ಎಂಬ ಕಾರಣಕ್ಕೆ ಮುಂದಿನ ವಾರದಿಂದ ಊಟ ಮತ್ತು ವಸತಿ ನಿಲ್ಲಿಸುವುದಾಗಿ ಮೆಸ್ ಸಿಬಂದಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಸರ್ವ ಪ್ರಯತ್ನ: ಕಾಮತ್
ಕುವೈಟ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಪಾಸ್‌ಪೋರ್ಟ್ ಮತ್ತು ಇತರ ದಾಖಲೆಗಳನ್ನು ಯುವಕರಿಗೆ ಹಸ್ತಾಂತರಿಸಿ ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಿಕೊಡುವವರೆಗೆ ಸಂಪೂರ್ಣ ಫಾಲೋ ಅಪ್ ಮಾಡಲಾಗುವುದು. ನೂತನ ಸರಕಾರ ಅಸ್ತಿತ್ವಕ್ಕೆ ಬಂದ ತತ್‌ಕ್ಷಣ ಕೆಲವೇ ದಿನಗಳೊಳಗೆ ಯುವಕರನ್ನು ಕರೆತರುವ ಕೆಲಸ ಕಾರ್ಯಗಳಿಗೆ ವೇಗ ಸಿಗಲಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.