ಮಂಗಳೂರು: ಮೈಸೂರು-ಮಂಗಳೂರು ನಡುವಿನ ವಿಮಾನಯಾನ ಇಂದಿನಿಂದ (ಡಿ. 11) ಆರಂಭವಾಗಿದೆ. ಮೈಸೂರಿನಿಂದ ಅಲಯನ್ಸ್ ಏರ್ ನ ಮೊದಲ ವಿಮಾನ ಶುಕ್ರವಾರ ಮಂಗಳೂರು ಏರ್ ಪೋರ್ಟ್ ಗೆ ಬಂದಿಳಿಯಿತು.
ಅಲಯನ್ಸ್ ಏರ್ ನ ಮೊದಲ ವಿಮಾನ 11.22 ಕ್ಕೆ ವಿಮಾನ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಒಟ್ಟು 78 ಪ್ರಯಾಣಿಕರು ಬಂದಿಳಿದರು.
ಉಡಾನ್ ಯೋಜನೆಯಡಿ ಅಲಯನ್ಸ್ ಏರ್ ವಿಮಾನ ವಾರದಲ್ಲಿ ನಾಲ್ಕು ದಿನ ಸಂಚರಿಸಲಿದೆ. ಬುಧವಾರ, ಶುಕ್ರವಾರ, ಶನಿವಾರ, ರವಿವಾರ ಈ ಸೇವೆ ಇರಲಿದೆ.
ಇದನ್ನೂ ಓದಿ:ಕಷ್ಟ ಕಾಲದಲ್ಲಿ ಸಂಬಳ ನೀಡಿದ್ದೇವೆ, ಇದನ್ನೆಲ್ಲಾ ಅರ್ಥ ಮಾಡಿಕೊಳ್ಳಿ: ಸಾರಿಗೆ ಸಚಿವ ಸವದಿ
ಮಂಗಳೂರು- ಮೈಸೂರು ನಡುವೆ 255 ಕಿ.ಮೀ ದೂರವಿದ್ದು, ಬಸ್ ಮೂಲಕ ಸಂಚಾರಕ್ಕೆ ಸುಮಾರು ಆರರಿಂದ ಏಳು ಗಂಟೆ ಕಾಲ ಬೇಕಾಗುತ್ತದೆ. ಆದರೆ ಇದೀಗ ವಿಮಾನಯಾನ ಆರಂಭವಾದ ಕಾರಣ ಕೇವಲ ಒಂದು ಗಂಟೆಯಲ್ಲಿ ಕ್ರಮಿಸಬಹುದಾಗಿದೆ.