Advertisement

ಮಂಗಳೂರು ಪಾಲಿಕೆ ಚುನಾವಣೆ: ಶೇ. 59.67 ಮತದಾನ

12:32 AM Nov 13, 2019 | mahesh |

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಿಗೆ ಮಂಗಳವಾರದ ಚುನಾವಣೆಯಲ್ಲಿ ಶೇ. 59.67 ಮತದಾನವಾಗಿದೆ. ಚುನಾವಣೆ ಶಾಂತಿಯುತವಾಗಿತ್ತು.

Advertisement

ಒಟ್ಟು 3,94,894 ಮತದಾರರಲ್ಲಿ 1,13,084 ಪುರುಷರು, ಮತ್ತು 1,22,527 ಮಹಿಳೆಯರು ಸೇರಿ ಒಟ್ಟು 2,35,628 ಮಂದಿ ಮತ ಚಲಾಯಿಸಿದ್ದಾರೆ.ಮಂಗಳವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಬಹುತೇಕ ಕೇಂದ್ರಗಳಲ್ಲಿ ಮಂದಗತಿಯಲ್ಲಿತ್ತು. ಮಧ್ಯಾಹ್ನದ ವೇಳೆಗೆ ಶೇ. 39ರಷ್ಟು ಮತದಾನ ನಡೆದಿತ್ತು. ಕಳೆದ ಅವಧಿಗೆ ಹೋಲಿಸಿದರೆ ಈ ಬಾರಿ ಮತದಾನ ಪ್ರಮಾಣ ಕಡಿಮೆಯಿತ್ತು. 2013ರ ಮಾ. 7ರಂದು ಶೇ. 63.29ರಷ್ಟು ಮತದಾನವಾಗಿತ್ತು.

ಗುರುವಾರ ಮತ ಎಣಿಕೆ
ಮತಯಂತ್ರಗಳನ್ನು ನಗರದ ಸ್ಟೇಟ್‌ ಬ್ಯಾಂಕ್‌ ರೊಸಾರಿಯೋ ಹೈಸ್ಕೂಲ್‌ನಲ್ಲಿರುವ ಡಿಮಸ್ಟರಿಂಗ್‌ ಕೇಂದ್ರದ ಸ್ಟ್ರಾಂಗ್‌ರೂಂನಲ್ಲಿಡಲಾಗಿದೆ. ನ.14ರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದ್ದು, ಮಧ್ಯಾಹ್ನ 1 ಗಂಟೆಯ ವೇಳೆ ಪೂರ್ಣ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಗಳಿವೆ.

ಮತದಾನ ಪ್ರಮಾಣದಲ್ಲಿ ಕುಸಿತ
2018ರಲ್ಲಿ ಜರಗಿದ ವಿಧಾನಸಭೆ ಮತ್ತು 2019ರ ಎ. 18 ರಂದು ಜರಗಿದ ಲೋಕಸಭಾ ಚುನಾವಣೆಗಿಂತಲೂ ಕಡಿಮೆ ಪ್ರಮಾಣದ ಮತದಾನ ದಾಖಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಪಾಲಿಕೆ ವ್ಯಾಪ್ತಿಯನ್ನು ಪೂರ್ತಿಯಾಗಿ ಒಳಗೊಳ್ಳುವ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.70.71 ಮತದಾನ ಆಗಿತ್ತು. ಪಾಲಿಕೆಯ ಅರ್ಧಭಾಗವನ್ನು ಒಳಗೊಳ್ಳುವ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಶೇ.75.31 ಮತದಾನವಾಗಿತ್ತು.

ಕಾಂಗ್ರೆಸ್‌ನಿಂದ 60, ಬಿಜೆಪಿಯಿಂದ 60, ಜೆಡಿಎಸ್‌ 12, ಸಿಪಿಎಂ 7, ಸಿಪಿಐ 1, ಎಸ್‌ಡಿಪಿಐ 6, ಜೆಡಿಯು 2, ಡಬ್ಲೂಪಿಐ 3, ಕರ್ನಾಟಕ ರಾಷ್ಟ್ರ ಸಮಿತಿ 2 ಹಾಗೂ ಪಕ್ಷೇತರರು 27 ಸೇರಿ ಒಟ್ಟು 180 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next