Advertisement
ಶನಿವಾರ ಬೆಳಗ್ಗೆ ಶಾಸಕ ಕೆ. ರಘುಪತಿ ಭಟ್ ನಿವಾಸದಲ್ಲಿ ಶಕ್ತಿ ಕೇಂದ್ರ ಮಟ್ಟದ ಕಾರ್ಯಕರ್ತರ ಸಭೆ “ಚಾಯ್ ಪೆ ಚರ್ಚಾ’ ಮತ್ತು ಬಿಜೆಪಿ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮರಳಿನ ಸಮಸ್ಯೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮೂಲ ಕಾರಣ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿÇÉೆಯ ಎಲ್ಲ ಐದು ಕ್ಷೇತ್ರಗಳು ಬಿಜೆಪಿ ಪಾಲಾದ ಅನಂತರ ಈ ಸಮಸ್ಯೆ ನಿವಾರಣೆಗೆ ಎಲ್ಲ ರೀತಿಯ ಪ್ರಯತ್ನ ನಡೆದಿತ್ತು. ಕೇಂದ್ರ, ರಾಜ್ಯ ಸರಕಾರದಿಂದ ಇದ್ದ ಎಲ್ಲ ತಾಂತ್ರಿಕ ತೊಂದರೆ ಮುಕ್ತಗೊಳಿಸಲಾಗಿತ್ತು.
Related Articles
Advertisement
ಶಾಸಕ ಕೆ.ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ. ಅಧ್ಯಕ್ಷ ದಿನಕರ್ ಬಾಬು, ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಜಿÇÉಾ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ಚುನಾವಣಾ ಉಸ್ತುವಾರಿ ಪ್ರವೀಣ್ ಕುಮಾರ್ ಶೆಟ್ಟಿ, ನಗರಸಭಾ ಸದಸ್ಯರಾದ ಭಾರತೀ ಪ್ರಶಾಂತ್, ಗಿರಿಧರ್ ಆಚಾರ್ಯ, ಬಾಲಕೃಷ್ಣ ಶೆಟ್ಟಿ, ಅಶೋಕ್ ನಾಯ್ಕ…, ನಗರ ಅಲ್ಪಸಂಖ್ಯಾಕ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕ್ಕರ್, ಉಪಾಧ್ಯಕ್ಷ ಅಲ್ವಿನ್ ಡಿ’ಸೋಜಾ, ಪಕ್ಷದ ಪ್ರಮುಖರಾದ ಇನ್ನ ಉದಯಕುಮಾರ್ ಶೆಟ್ಟಿ, ಕೃಷ್ಣ ಕುಲಾಲ್, ಅರುಣಾ ಪೂಜಾರಿ ಉಪಸ್ಥಿತರಿದ್ದರು. ಪೆರಂಪಳ್ಳಿ ವಾಸುದೇವ್ ಭಟ್ ನಿರೂಪಿಸಿದರು.
ಹೆಗ್ಡೆ ಪ್ರಚಾರ ಆರಂಭಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆಯವರು ಇದೇ ಪ್ರಥಮ ಬಾರಿಗೆ ಶೋಭಾ ಕರಂದ್ಲಾಜೆಯವರ ಪರವಾಗಿ ಉಡುಪಿಯಲ್ಲಿ ಪ್ರಚಾರ ನಡೆಸಿದರು. ಇದಕ್ಕೂ ಹಿಂದೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಚಾರ ನಡೆಸಿದ್ದರು.