Advertisement

ಮಂಗಳೂರು: ಮಾರ್ಚ್ ಒಳಗಡೆ ವಸತಿ ಯೋಜನೆ ಪೂರ್ಣಗೊಳಿಸಲಾಗುವುದು: ಸಚಿವ ವಿ ಸೋಮಣ್ಣ

08:07 PM Jan 08, 2020 | Naveen |

ಮಂಗಳೂರು: ವಸತಿ ಯೋಜನೆಯಲ್ಲಿ ಮನೆಯನ್ನೇ ಕಟ್ಟದೇ ಹಿಂದಿನ ಸರಕಾರ ಬಿಲ್ ಮಾಡಿದೆ. ಮನೆ ನಿರ್ಮಾಣವನ್ನೇ ಮಾಡದೇ ನಕಲಿ ಬಿಲ್ ಮಾಡಿದ್ದಾರೆ. ವಸತಿ ಯೋಜನೆಯಲ್ಲಿ ಈ ರೀತಿ ವ್ಯವಹಾರ ನಡೆಸಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡು ಕ್ರಮಕ್ಕೆ ಸೂಚಿಸಿದ್ದೇನೆ ವಸತಿ ಸಚಿವ ವಿ ಸೋಮಣ್ಣ ಹೇಳಿದರು.

Advertisement

ಅವರು ಬುಧವಾರದಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಈಗ ನಾನು ಎಲ್ಲಾ 224 ಕ್ಷೇತ್ರಕ್ಕೆ 211 ಕೋಟಿ ಹಣವನ್ನ ಮನೆ ನಿರ್ಮಾಣಕ್ಕೆ ಬಿಡುಗಡೆ ಮಾಡಿದ್ದೇನೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಸೂಚನೆ ಮಾಡಿದಲ್ಲಿ ಅರ್ಧ ಕಟ್ಟಿದ ಮನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಇನ್ನೂ ವಸತಿ ಯೋಜನೆ ಪೂರ್ಣ ಮಾಡಲು ಸುಮಾರು 200 ಕೋಟಿ ಬೇಕು. ಅದನ್ನ ಈ ಮಾರ್ಚ್ ಒಳಗಡೆ ಪೂರ್ಣ ಮಾಡಲಾಗುವುದು. ಇನ್ನು ಕೇವಲ 15 ದಿನಗಳಲ್ಲ ಹಣ ಬಿಡುಗಡೆಗೆ ಪ್ರಯತ್ನ ಮಾಡುತ್ತೇನೆ. ಇನ್ನು ಮುಂದಿನ ಬಾರಿಯಿಂದ ಒಂದು ಮನೆಗೆ 2 ಲಕ್ಷಕ್ಕೆ ಹಣ ಬಿಡುಗಡೆಗೆ ಸಿಎಂ ಬಳಿ ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next