Advertisement

ಮಂಗಳೂರು: ಕಿತ್ತಳೆ ಹಣ್ಣು ಮಾರಿದವರನ್ನ ಚಹಾ ಮಾರಿದವರು ಗುರುತಿಸಿದ್ದಾರೆ: ಸುರೇಶ್ ಕುಮಾರ್

10:04 AM Feb 16, 2020 | Naveen |

ಮಂಗಳೂರು: ಪದ್ಮಶ್ರೀ ಪ್ರಶಸ್ತಿ ಅನೇಕರಿಗೆ ಸಿಕ್ಕೆದೆ. ಆದರೆ ಕಿತ್ತಳೆ ಹಣ್ಣು ಮಾರಿದವರನ್ನ ಚಹಾ ಮಾರಿದವರು ಗುರುತಿಸಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

Advertisement

ಸಚಿವ ಸುರೇಶ್ ಕುಮಾರ್ ಅವರು ಶನಿವಾರದಂದು ಹರೇಕಳದ ನ್ಯೂಪಡ್ಪುವಿನಲ್ಲಿರುವ ಹರೇಕಳ ಹಾಜಬ್ಬ ಅವರ ಶಾಲೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ತನ್ನ ಆರು ತಿಂಗಳ ಅವಧಿಯಲ್ಲಿ ಅನೇಕ ಸಂತರು ವ್ಯಕ್ತಿಯನ್ನು ಬೇಟಿ ಮಾಡಿದ್ದೆನೆ. ಅದರೆ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಪ್ರಥಮ ಬಾರಿಗೆ ಬೇಟಿಯಾಗಿದ್ದು, ಜೀವನದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಸಿನಿಮಾ ತಾರೆಯರು ತೆರೆಯ ಮೇಲೆ ಹಿರೋಗಳು. ಆದರೆ ನಿಜವಾದ ಹೀರೋ ಹಾಜಬ್ಬ ಆಗಿದ್ದಾರೆ ಎಂದರು.

ಹತ್ತನೆ ತರಗತಿ ಮಕ್ಕಳು ಶಾಲೆಯ ರಾಯಭಾರಿಗಳು. ನಿಮ್ಮ ಫಲಿತಾಂಶದ ಮೇಲೆ ಶಾಲೆಗೆ ಹೆಚ್ಚು ಮಕ್ಕಳು ಸೇರುತ್ತಾರೆ. ಪರೀಕ್ಷೆಯ ಬಗ್ಗೆ ಭಯಪಡಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.

ಇದೇ ಸಂಧರ್ಭದಲ್ಲಿ ಹಾಜಬ್ಬ ತಮ್ಮ ಮನವಿಯನ್ನು ಸಲ್ಲಿಸಿದರು. ಮನವಿಯಲ್ಲಿ ಆವರಣದ ಗೋಡೆ, ಕಟ್ಟಡ ದುರಸ್ತಿ, ಕರ್ನಾಟಕ ಪಬ್ಲಿಕ್ ಶಾಲೆಯ ಬೇಡಿಕೆಯನ್ನು ಸಲ್ಲಿಸಿದರು

Advertisement

Udayavani is now on Telegram. Click here to join our channel and stay updated with the latest news.

Next