Advertisement
ಕ್ರೀಡಾಂಗಣದಲ್ಲಿ ವಾಕಿಂಗ್ ಟ್ರ್ಯಾಕ್‌ನಿರ್ಮಿಸಬೇಕು ಎಂಬುವುದು ಹಿರಿಯ ನಾಗರಿಕರ, ಸಾರ್ವಜನಿಕರ ಬಹುಕಾಲದ ಬೇಡಿಕೆಯಾಗಿತ್ತು. ಅದರಂತೆ ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮ ಶಾಸಕರ ನಿಧಿಯಿಂದ 2 ಕೋ.ರೂ. ಅನುದಾನ ಬಿಡುಗಡೆಗೊಳಿಸಿದ್ದಾರೆ.
Related Articles
Advertisement
ಎರಡು ವರ್ಷದ ಬಳಿಕ ಕ್ರೀಡಾಂಗಣದಲ್ಲಿ ಕ್ರೀಡಾ ಚಟುವಟಿಕೆ ಮತ್ತೆ ಚುರುಕುಗೊಂಡಿದೆ. ಶಾಲಾ ಕಾಲೇಜುಗಳಿಗೆ ಸಂಬಂಧಿಸಿದ ಕ್ರೀಡಾ ಚಟುವಟಿಕೆಗಳು ಪ್ರತಿದಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇದರಿಂದ ಮೈದಾನದ ಬಳಕೆ ಹೆಚ್ಚಾಗಿದ್ದು, ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಕೂಡ ಹೆಚ್ಚು ಬಳಕೆಯಾಗುತ್ತಿದೆ.
ವಾಕಿಂಗ್ ಟ್ರ್ಯಾಕ್ ಮಾಡುವಂತಿಲ್ಲ?
ಒಂದು ಕಡೆಯಲ್ಲಿ ವಾಕಿಂಗ್ ಟ್ರ್ಯಾಕ್ ನಡೆಯುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಇದಕ್ಕೆ ಅಪಸ್ವರವೂ ಕೇಳಿ ಬಂದಿದೆ. ಕ್ರೀಡಾಂಗಣವನ್ನು ಕೇವಲ ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು. ಅಲ್ಲಿ ಇತರ ಚಟುವಟಿಕೆಗಳಿಗೆ ಅವಕಾಶವಿಲ್ಲ. ಕ್ರೀಡೆಗೆ ಸಂಬಂಧ ಪಡದವರು ಕ್ರೀಡಾಂಗಣದೊಳಗೆ ಬಂದು ವಾಕಿಂಗ್-ಜಾಗಿಂಗ್ ಮಾಡಲು ಅವಕಾಶ ನೀಡಬಾರದು. ಕ್ರೀಡಾಂಗಣದ ಬಳಕೆಗೆ ಕೆಲವೊಂದು ನಿಯಮಾವಳಿಗಳಿದ್ದು, ವಾಕಿಂಗ್ ಗೆ ಪಾರ್ಕ್ ಅಥವಾ ಬೇರೆ ಯಾವುದಾದರೂ ಸ್ಥಳವನ್ನು ಬಳಸಬಹುದು. ಯಾವುದೇ ಕ್ರೀಡಾಂಗಣದಲ್ಲಿ ಜಾಗಿಂಗ್ ಟ್ರ್ಯಾಕ್ ಇಲ್ಲ ಎನ್ನುವ ಮಾತುಗಳೂ ಇಲ್ಲಿ ಕೇಳಿ ಬಂದಿದೆ.
ಅನುದಾನ ಬಿಡುಗಡೆ: ಮಂಗಳಾ ಕ್ರೀಡಾಂಗಣದ ಅಭಿವೃದ್ಧಿಯ ಭಾಗವಾಗಿ ವಾಕಿಂಗ್ ಟ್ರ್ಯಾಕ್, ನೀರು ಹರಿದು ಹೋಗುವ ಚರಂಡಿ ಹಾಗೂ ಇತರ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ. ಬೆಳಗ್ಗೆ – ಸಂಜೆ ವೇಳೆ ಹಿರಿಯ ನಾಗರಿಕರಿಗೆ ವಾಕಿಂಗ್ ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅನುದಾನ ಬಿಡುಗಡೆಗೊಳಿಸಲಾಗಿದೆ. – ವೇದವ್ಯಾಸ ಕಾಮತ್, ಶಾಸಕರು