Advertisement

ಮಂಗಳೂರಲ್ಲಿ ಕಾರ್ಮಿಕರಿಗೆ 2000 ರೂ. ವದಂತಿ: ಅಂತರ ಮರೆತು ಸೇರಿದ ನೂರಾರು ಜನ

05:18 PM Apr 15, 2020 | keerthan |

ಮಂಗಳೂರು: ಹಣ ಸಿಗುತ್ತದೆ ಎಂಬ ಮಾತು ಕೇಳಿ ಕೂಲಿ ಕಾರ್ಮಿಕರು ಗುಂಪು ಸೇರಿದ ಘಟನೆ ಮಂಗಳೂರಿನ ಕೂಳೂರಿನಲ್ಲಿ ಬುಧವಾರ ನಡೆದಿದೆ. ಜನರು ಹಣ ಪಡೆಯುವ ಧಾವಂತದಲ್ಲಿ ಸಾಮಾಜಿಕ ಅಂತರ ಮರೆತು ಒಂದು ಕಡೆ ಸೇರಿದ ಘಟನೆ ನಡೆಯಿತು.

Advertisement

ಕೂಳೂರಿನ ಖಾಸಗಿ ಕಟ್ಟಡವೊಂದರಲ್ಲಿ ಕೂಲಿ ಕಾರ್ಮಿಕರ ಮಾಹಿತಿ ಪಡೆದು ಹಣ ಅಕೌಂಟ್ ಗೆ ಹಾಕಲಾಗುತ್ತದೆ ಎಂದು ತಪ್ಪು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ 600-750 ಮಂದಿ ಗುಂಪು ಸೇರಿತ್ತು. ‘ನಮ್ಮ ಬ್ಯಾಂಕ್ ಖಾತೆಗೆ 2000 ರೂ. ಹಣ ಬರುತ್ತದೆ’ ಎಂದು ನಾವೆಲ್ಲಾ ಬಂದು ನಿಂತಿದ್ದೇವೆ ಎಂದರು. ಆದರೆ ಯಾರು ಹೇಳಿದ್ದು ಎಂದು ಕೇಳಿದರೆ ಯಾರೆಇಗೂ ಗೊತ್ತಿರಲಿಲ್ಲ.

ಎಲ್ಲರೂ ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಗಳನ್ನು ಹಿಡಿದುಕೊಂಡು ಸರತಿ ಸಾಲುಗಳಲ್ಲಿ ಮಧ್ಯಾಹ್ನ 11.30 ಯಿಂದ 3.30 ಯವರೆಗೆ ಜನ ಜಂಗುಳಿ ಸೇರಿತ್ತು. ಮಾಹಿತಿ ಪಡೆಯುವವರ ಬಳಿ ಯಾಕಾಗಿ ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆ ಸಂಖ್ಯೆ ಪಡೆಯಲಾಗುತ್ತಿದೆ ಎಂದು ಕೇಳಿದರೆ, ನಮಗೆ ಡಿಸಿ ಕಚೇರಿಯಿಂದ ಕೂಲಿ ಕಾರ್ಮಿಕರ ಮಾಹಿತಿ ಪಡೆಲು ಹೇಳಿದ್ದಾರೆ. ಆದರೆ ಯಾರಿಗೂ 2000 ರೂ. ಬ್ಯಾಂಕ್ ಖಾತೆಗೆ ಹಾಕುತ್ತಿಲ್ಲ ಎಂದರು.

ಸ್ಥಳಕ್ಕೆ ಆಗಮಿಸಿದ್ದ ಕಾರ್ಮಿಕ ಅಧಿಕಾರಿಗಳನ್ನು ಕೂಲಿ ಕಾರ್ಮಿಕರು ಮುತ್ತಿಗೆ ಹಾಕಿದರು. ಆದರೆ ಅವರು ಕಾರು ಚಲಾಯಿಸಿ ಹೊರಟೇ ಹೋದರು. ಅಲ್ಲದೆ ಮಾಹಿತಿ ಪಡೆಯುವವರೂ ತಮ್ಮ ತಮ್ಮ ಬೈಕ್ ಏರಿ ಅಲ್ಲಿಂದ ಪರಾರಿ ಆಗಿದ್ದಾರೆ. ಒಟ್ಟಿನಲ್ಲಿ 2000 ಸಿಗುತ್ತದೆ ಎಂದು ಬಂದವರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮನೆ ದಾರಿ ಹಿಡಿದರು. ಆದರೆ ಈ ಬಗ್ಗೆ ಪೊಲೀಸ್ ಇಲಾಖೆಗೆ, ಸ್ಥಳೀಯ ಕಾರ್ಪೊರೇಟರ್, ಮಹಾನಗರ ಪಾಲಿಕೆಯ ಆಯುಕ್ತರು ಯಾರಿಗೂ ಸರಿಯಾದ ಮಾಹಿತಿ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next