ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
Advertisement
ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ನೇತೃತ್ವದ ತಂಡ ಸಂಸದ ನಳಿನ್ ಕುಮಾರ್ ಹಾಗೂ ನನ್ನನ್ನು ಭೇಟಿ ಯಾಗಿ ಸಮಸ್ಯೆಯ ಬಗ್ಗೆ ವಿವರಿಸಿದ್ದಾರೆ. ನಿಯಮಗಳ ಸಮಸ್ಯೆಗಳೇನೇ ಇದ್ದರೂ ದೈನಂದಿನ ಚಟುವಟಿಕೆಗಳಿಗಾಗಿ ದ.ಕ.ಗೆ ಬರುವ ಕಾಸರಗೋಡು ಕನ್ನಡಿಗರಿಗೆ ತುರ್ತು ಪಾಸ್ ನೀಡಲು ಸೂಚಿಸಲಾಗಿದೆ ಎಂದರು.
ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಲಾ ಗಿದ್ದ ವೆನ್ಲಾಕ್ ಜಿಲ್ಲಾಸ್ಪತ್ರೆಯ ಹೊರರೋಗಿ ವಿಭಾಗದ (ಒಪಿಡಿ) ಸೇವೆಯನ್ನು ಮುಂದಿನ ಎರಡು ದಿನಗಳಲ್ಲಿ ಪುನಃ ಆರಂಭಿಸಲಾಗು ವುದು. ಪ್ರಾರಂಭಿಕವಾಗಿ ಕೊರೊನಾಕ್ಕಾಗಿ ನಿಗದಿಪಡಿಸಲಾದ ಆಸ್ಪತ್ರೆ ಹೊರತುಪಡಿಸಿ ಉಳಿದ ಕಟ್ಟಡವನ್ನು ಒಪಿಡಿಗೆ ಮೀಸಲಿಡಲಾ ಗುವುದು ಎಂದು ಹೇಳಿದರು.