Advertisement
ಎರಡನೇ ಹಂತದಲ್ಲಿ ಚೆಂಗಳ – ನೀಲೇಶ್ವರ ವರೆಗಿನ 37 ಕಿ.ಮೀ. ಮತ್ತು ತೃತೀಯ ಹಂತದಲ್ಲಿ ನೀಲೇಶ್ವರ -ತಳಿಪ್ಪರಂಬ ನಡುವಿನ 40 ಕಿ.ಮೀ. ಸೇರಿದಂತೆ ನಾಲ್ಕು ಹಂತದ ಕಾಮಗಾರಿಗೆ ಹಸಿರು ನಿಶಾನೆ ದೊರಕಿದೆ.
ಎಂದೋ ಮುಗಿಯಬೇಕಿದ್ದ ಕಾಮಗಾರಿ ಹಲವಾರು ಅಡೆ ತಡೆಗಳನ್ನು ಭೇದಿಸಿ ಆರಂಭಗೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಸಮಾಧಾನ ತಂದಿದೆ. ಆದರೆ ಮನೆ, ಕಟ್ಟಡಗಳನ್ನು ಕಳೆದುಕೊಂಡ ಸಂತ್ರಸ್ತರು ಪರ್ಯಾಯ ವ್ಯವಸ್ಥೆ ಇಲ್ಲದೆ ಕಂಗಾಲಾಗಿದ್ದಾರೆ. ಸಿಕ್ಕಿದ ಪರಿಹಾರ ನಿಧಿಯು ನಿವೇಶನ ಖರೀದಿಸಿ ಮನೆ ಕಟ್ಟಲು ಸಾಲದೆ ಕೆಲವರು ಬಾಡಿಗೆ ಮನೆಯನ್ನು ಅವಲಂಬಿಸಬೇಕಾಗಿದೆ.
Related Articles
Advertisement
ಮದುವೆ ಹಾಲ್‌ಗಳು, ಶಾಲೆ, ಅಂಗಡಿ ಮುಂಗಟ್ಟುಗಳ ಸ್ಥಳ ರಸ್ತೆ ಪಾಲಾಗ ಲಿದೆ. ಕಟ್ಟಡದ ಮೌಲ್ಯದ ದುಪ್ಪಟ್ಟು ಪರಿಹಾರ ನಿಧಿಯನ್ನು ನೀಡುತ್ತಿದ್ದರೂ ಅದು ಮಾಲಕರ ಪಾಲಾಗಲಿದೆ. ಅಲ್ಲಿ ಅದೆಷ್ಟೋ ವರ್ಷಗಳಿಂದ ಬಾಡಿಗೆ ನೆಲೆಯಲ್ಲಿದ್ದವರು ಬರಿಗೈಯಲ್ಲಿ ತೆರವುಗೊಳಿಸಬೇಕಾಗಿದೆ.
-ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪದಿಂದ ಮಿಲನ್ ಮೈದಾನದ ತನಕ 1.6 ಕಿ.ಮೀ. ಉದ್ದದ ಮೇಲ್ಸೇತುವೆ-ಕುಂಬಳೆ, ಮೊಗ್ರಾಲ್, ಶಿರಿಯ ಮತ್ತು ಉಪ್ಪಳ ಹೊಳೆಗಳಿಗೆ ನೂತನ ಸೇತುವೆ; ಮಣ್ಣು ಪರೀಕ್ಷೆ ಈಗಾಗಲೇ ನಡೆದಿದೆ
-ದಿನಕ್ಕೆ 10 ಕಿ.ಮೀ. ವೇಗದಲ್ಲಿ ಸಂಚಾರಕ್ಕೆ ತಡೆಯಾಗದಂತೆ ರಸ್ತೆ ನಿರ್ಮಾಣಗೊಳ್ಳಲಿದೆ