Advertisement

ನೈಋತ್ಯ ರೈಲ್ವೇಗೆ ಮಂಗಳೂರು ಸೇರ್ಪಡೆ –ಪರಿಶೀಲಿಸಿ ಕ್ರಮ: ಸುರೇಶ್‌ ಅಂಗಡಿ

01:20 AM Jul 18, 2019 | Sriram |

ಮಂಗಳೂರು: ದಕ್ಷಿಣ ರೈಲ್ವೇಯ ಪಾಲಕ್ಕಾಡ್‌ ವಿಭಾಗದಿಂದ ಮಂಗಳೂರನ್ನು ಪ್ರತ್ಯೇಕಿಸಿ ನೈಋತ್ಯ ರೈಲ್ವೇಗೆ ಸೇರಿಸುವಂತೆ 2004ರಲ್ಲಿ ರೈಲ್ವೇ ಬೋರ್ಡ್‌ನಿಂದ ಗಜೆಟ್ ನೋಟಿಫಿಕೇಶನ್‌ ಆಗಿದ್ದು, ಇದನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಸಂಸದ ನಳಿನ್‌ ಕುಮಾರ್‌ ಕಟೀಲು ನೇತೃತ್ವದಲ್ಲಿ ಮಂಗಳೂರು ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ ವತಿಯಿಂದ ಕೇಂದ್ರದ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

Advertisement

ತೋಕೂರಿನಿಂದ ಮಂಗಳೂರು ಸೆಂಟ್ರಲ್ ನೇತ್ರಾವತಿಯವರೆಗೆ ಪಾಲ ಕ್ಕಾಡ್‌ ರೈಲ್ವೇ ವಿಭಾಗದಲ್ಲಿರುವ ಪ್ರದೇಶವನ್ನು ಬದಲಿಸುವಂತೆ ದಾಖಲೆಗಳನ್ನು ಸಲ್ಲಿಸಲಾಯಿತು. ಸಚಿವರು ಮಾತ ನಾಡಿ, ವಿಷಯ ಗಮನಕ್ಕೆ ಬಂದಿದ್ದು, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವೆ’ ಎಂದು ಆಶ್ವಾಸನೆ ನೀಡಿದರು.

ಮಂಗಳೂರು – ಬೆಂಗಳೂರು ರೈಲುಸಂಖ್ಯೆ 16511/12 ಮತ್ತು 16515/14 ವಾರದಲ್ಲಿ 4 ದಿನ ಶ್ರವಣಬೆಳಗೊಳ, 3 ದಿನ ಮೈಸೂರು ಮಾರ್ಗದಲ್ಲಿ ಸಂಚರಿಸುತ್ತಿದ್ದು, ಇದನ್ನು 7 ದಿನವೂ ಶ್ರವಣ ಬೆಳಗೊಳ ಮಾರ್ಗದಲ್ಲಿ ಓಡಿಸಬೇಕು, ರೈಲು ಸಂಖ್ಯೆ 16585/86 ಯಶವಂತ ಪುರ-ಮಂಗಳೂರು ಹಗಲು ರೈಲನ್ನು ವಾರದ 7 ದಿನವೂ ಓಡಿಸಬೇಕು. ಈಗಾಗಲೇ ಮಂಜೂರಾಗಿರುವ ಮಂಗಳೂರುಕೇಂದ್ರ ರೈಲು ನಿಲ್ದಾಣದ 4- 5ನೇಪ್ಲಾಟ್ ಫಾರಂ ನಿರ್ಮಾಣ ಕಾಮಗಾರಿಗೆಮೂರು ವರ್ಷಗಳ ಹಿಂದೆ ರೈಲ್ವೇ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಯಾಗಿದ್ದರೂ ಈವರೆಗೆ ಕಾಮಗಾರಿ ಪ್ರಾರಂಭಗೊಂಡಿಲ್ಲ ಎಂದು ಮನವಿ ಯಲ್ಲಿ ಉಲ್ಲೇಖೀಸಲಾಗಿದೆ.

ಸಚಿವರು ಪಾಲಕ್ಕಾಡ್‌ ಡಿಆರ್‌ಎಂಗೆ ದೂರವಾಣಿ ಕರೆ ಮಾಡಿ ಈ ಮೂರು ಬೇಡಿಕೆಗಳನ್ನು ಕೂಡಲೇ ಪೂರೈಸುವಂತೆ ಆದೇಶಿಸಿದರು.

ಮಂಗಳೂರು -ಮೀರಜ್‌ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ರೈಲು ಗೇಜ್‌ ಪರಿವರ್ತನೆಯ ಸಂದರ್ಭ 1994ರಲ್ಲಿ ತಾತ್ಕಾಲಿಕವಾಗಿ ರದ್ದುಗೊಂಡಿದ್ದು, ಪುನರಾರಂಭಿಸುವಂತೆ ಮನವಿ ಸಲ್ಲಿಸಲಾಯಿತು. ಈ ಬಗ್ಗೆ ಪರಿಶೀಲಿಸಿ ಕ್ರಮ ಜರಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

Advertisement

ಮಂಗಳೂರು ರೈಲು ನಿಲ್ದಾಣ ವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೇರಿಸು ವುದಾಗಿ 2009-10ರ ಬಜೆಟ್ ನಲ್ಲಿ ಘೋಷಿಸಿದ್ದರೂ ಈವರೆಗೆ ಯಾವುದೇ ಪ್ರಗತಿಯಾಗದೆ ಇರುವುದನ್ನು ಪರಿಶೀಲಿಸುವ ಆಶ್ವಾಸನೆಯನ್ನು ಸಚಿವರು ನೀಡಿದ್ದಾರೆ. ಕಾಣಿಯೂರು- ಕಾಂಞಂ ಗಾಡ್‌ ಹೊಸ ರೈಲು ಮಾರ್ಗದ ಸರ್ವೆಕಾರ್ಯವನ್ನು ಕರ್ನಾಟಕ ರಾಜ್ಯ ಸರ ಕಾರದ ಸಹಕಾರದೊಂದಿಗೆ ಕೂಡಲೇ ಪ್ರಾರಂಭಿಸಲು ಆದೇಶಿಸಿದ್ದಾರೆ.

ಪಶ್ಚಿಮ ಕರಾವಳಿ ರೈಲು ಅಭಿವೃದ್ಧಿ ಯಾತ್ರಿ ಸಮಿತಿಯ ಅಧ್ಯಕ್ಷ ಜಿ. ಹನುಮಂತ ಕಾಮತ್‌, ಎಂ. ನರೇಶ್‌ ಶೆಣೈ, ಗುರುಪ್ರಸಾದ್‌ ಮತ್ತು ಸಂಜಯ್‌ ಪೈ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next