Advertisement
ವಿ. ಧನಂಜಯ ಕುಮಾರ್ ಅವರು 1999-2000ನೇ ಸಾಲಿನಲ್ಲಿ ಕೇಂದ್ರ ಸಚಿವರಾಗಿದ್ದಾಗ ಮಂಗಳೂರಿಗೆ ಕೇಂದ್ರ ಅಬಕಾರಿ ಆಯುಕ್ತರ ಕಚೇರಿ (ಮೇಲ್ಮನವಿ) ಮಂಜೂರು ಮಾಡಿದ್ದರು. ಆ ಕಚೇರಿಯು ಈಗಿನ ಆದಾಯ ತೆರಿಗೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.
ಆ ಬಳಿಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 5 ಸಾವಿರಕ್ಕೂ ಅಧಿಕ ತೆರಿಗೆದಾರರು ಜಿಎಸ್‌ಟಿ ಸಂಬಂಧಿ ಮೇಲ್ಮನವಿಗಳಿಗೆ ಮೈಸೂರು ಮತ್ತು ಬೆಳಗಾವಿಯನ್ನು ಅವಲಂಬಿಸ ಬೇಕಾಯಿತು. ಈಗ ಪಿಸಿಐಟಿ ಕಚೇರಿಯು ಗೋವಾದೊಂದಿಗೆ ವಿಲೀನವಾದರೆ ಕರಾವಳಿಯ ತೆರಿಗೆ ದಾರರು ಪ್ರಮುಖ ತೆರಿಗೆ ಕೆಲಸಗಳಿಗೆ ಹೊರ ರಾಜ್ಯವನ್ನು ನೆಚ್ಚಿಕೊಳ್ಳಬೇಕಾಗುತ್ತದೆ.
Related Articles
ಮಂಗಳೂರು ಪಿಸಿಐಟಿ ಕಚೇರಿಯನ್ನು ಉಳಿಸಿ ಕೊಳ್ಳುವ ಜವಾಬ್ದಾರಿ ಕರಾವಳಿಯ ಸಂಸದರು, ಶಾಸಕರು, ಸಚಿವರ ಮೇಲಿದೆ. ನಿರ್ಲಕ್ಷ್ಯ ವಹಿಸಿದರೆ 4 ಲಕ್ಷ ತೆರಿಗೆದಾರರು ಭವಿಷ್ಯದಲ್ಲಿ ಆಕ್ಷೇಪಿತ ತೆರಿಗೆಗೆ ಸಂಬಂಧಿಸಿದ ವ್ಯಾಜ್ಯಗಳಿಗೆ ಗೋವಾದತ್ತ ಎಡತಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
Advertisement
ಕೇಂದ್ರ ಅಬಕಾರಿ ಆಯುಕ್ತರ ಕಚೇರಿ (ಮೇಲ್ಮನವಿ)ಯನ್ನು ವರ್ಗಾಯಿಸಿದ ಬಳಿಕ ತೆರಿಗೆದಾರರು ಅಲೆದಾಡುವಂತಾಯಿತು. ಈಗ ನೇರ ತೆರಿಗೆದಾರರು ಹೋರಾಟ ನಡೆಸದಿದ್ದರೆ ಮತ್ತೂಮ್ಮೆ ಅನ್ಯಾಯವಾಗುವುದು ಖಂಡಿತ. -ಕೇಶವ ಎನ್, ಎಐಸಿಎಎ ಮಾಜಿ ಅಧ್ಯಕ್ಷ, ಮಂಗಳೂರು ಶಾಖೆ