Advertisement
ತೋಟಗಾರಿಕೆ ಇಲಾಖೆ ಮಂಗಳೂರು, ಇದರ ಸಹಾಯಕ ನಿರ್ದೇಶಕ ಪ್ರವೀಣ್ ಕೆ. ಮುಖ್ಯ ಅತಿಥಿಯಾಗಿ ಮಾತನಾಡಿ, ವಿಷಮುಕ್ತ ಆಹಾರದ ಬಟ್ಟಲಿಗೆ ಅಗತ್ಯವಾದ ಜ್ಞಾನವನ್ನು ಸಮಾಜಕ್ಕೆ ನೀಡಿ, ಆ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಸಾವಯವ ಕೃಷಿಕ ಗ್ರಾಹಕ ಬಳಗದ ಸಾಮಾಜಿಕ ಕಳಕಳಿ ಮತ್ತು ಅವಿರತ ಶ್ರಮವನ್ನು ಕೊಂಡಾಡಿದರು. ಇಂದು ನಗರದ ಉದ್ದಗಲಗಳಲ್ಲಿ ತ್ಯಾಜ್ಯ ಪದಾರ್ಥಗಳ ದಟ್ಟಣೆಯನ್ನು ಕಾಣುತ್ತೇವೆ. ಅವುಗಳ ಸೂಕ್ತ ನಿರ್ವಹಣೆಯು, ಸರಕಾರಕ್ಕೂ ಸವಾಲಾಗಿಯೇ ಪರಿಣಮಿಸಿದೆ ಎಂದರು.
ಪರಿವರ್ತಿಸುವ ಕಲೆಯನ್ನು ಕರಗತ ಮಾಡಿಕೊಂಡ ಈ ಶಿಬಿರಾರ್ಥಿಗಳು ಸಮಾಜಕ್ಕೆ ಆದರ್ಶಪ್ರಾಯರಾಗಿರುವರು, “ವರ್ತನೆಯ ಪರಿವರ್ತನೆಯೇ ನಿಜವಾದ ಶಿಕ್ಷಣ’, ಇದೇ ನಿಜವಾದ ಸಂಸ್ಕೃತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಬಿರಾರ್ಥಿಗಳು ನಿರಂತರವಾದ ತರಬೇತಿಯಿಂದ ಸಾವಯವ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ನೈಪುಣ್ಯವನ್ನು ಗಳಿಸಿರುವರು. ಇದೀಗ
ಅವರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಅದನ್ನು ಸುಸೂತ್ರವಾಗಿ ನಿಭಾಯಿಸುವ ಸಾಮರ್ಥ್ಯ ಹಾಗೂ ಕೌಶಲ ಅವರಲ್ಲಿ ಸದಾ
ಹಸುರಾಗಿರಲಿ; ಸಾವಯವ ಕೃಷಿ ನೈಪುಣ್ಯವು ಕ್ರಾಂತಿಕಾರಕ ಸಾಧನೆಗೆ ದಾರಿದೀಪವಾಗಲಿ ಎಂದು ಹಾರೈಸಿದರು.
Related Articles
ಅತಿಥಿಗಳ ಮುಂದಿರಿಸಿದರು.
Advertisement
ಶಿಬಿರಾರ್ಥಿಗಳಾದ ಸುಷ್ಮಾ, ಕವಿತಾ ಸುರೇಶ್, ವೀಣಾ, ಪ್ರೀತಮ್, ಧರ್ಣಪ್ಪ ಮೂಲ್ಯ ಅವರು ಶಿಬಿರದ ಅನುಭವವನ್ನುಹಂಚಿಕೊಂಡರು. ಅತಿಥಿಗಳಾದ ಪ್ರವೀಣ್ ಕೆ. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಿದರು. ಸಾವಯವ ಕೃಷಿಕ ಗ್ರಾಹಕ
ಬಳಗದ ಆಡಳಿತ ಮಂಡಳಿ ಸದಸ್ಯ ಹರಿಕೃಷ್ಣ ಕಾಮತ್ ಪುತ್ತೂರು ಅವರು, ಅತಿಥಿಗಳಿಗೆ ಸಾವಯವ ಅಕ್ಕಿ ಮತ್ತು ಬೆಲ್ಲವನ್ನು ನೀಡಿ ಗೌರವಿಸಿದರು.ಶಿಬಿರಾರ್ಥಿ ಜಯಂತಿ ಶಂಕರ್ ಪ್ರಾರ್ಥಿಸಿ, ಸಂಜನಾ ಸತೀಶ್ ವಂದಿಸಿದರು. ರೆನಿಟಾ ನಿರೂಪಿಸಿದರು.