ಮೂಡುಬಿದಿರೆ:”ಬಲೂನ್ ನೆಲ ಬಿಟ್ಟು ಮೇಲ ಕ್ಕೇರಲು ಸಾಧ್ಯವಾಗುವುದು ಅದು ತುಂಬಿಕೊಂಡ ಹೀಲಿಯಂ ಅನಿಲದಿಂದಲೇ ಹೊರತು ಬಾಹ್ಯ ಬಣ್ಣದಿಂದಲ್ಲ. ಅಂತೆಯೇ ನಮ್ಮೊಳಗೆ ತುಂಬಿಸಿಕೊಂಡಿರುವ ಸಾಮರ್ಥ್ಯ, ಮೌಲ್ಯಗಳಿಂದಾಗಿ ಯಶಸ್ಸಿನ ಪಥದಲ್ಲಿ ಸಾಗಲು ಸಾಧ್ಯವೇ ಹೊರತು ಬಾಹ್ಯ ಅಲಂಕಾರ, ಬಣ್ಣಗಳಿಂದಲ್ಲ’ ಎಂದು ಟೊರ್ರಿಹ್ಯಾರಿಸ್ ಬಿಸಿನೆಸ್ ಸೊಲ್ಯುಷನ್ಸ್‌ನ ಚೀಫ್ ಪೀಪಲ್ ಆಫೀಸರ್ ಬೃಜೇಶ್ ಎಸ್.ಹೇಳಿದರು.
ಬಡಗಮಿಜಾರಿನಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಎಂಜಿನಿಯರಿಂಗ್‌ನಲ್ಲಿ ಬುಧವಾರ ಪ್ರಾರಂಭವಾದ 12ನೇ ವರ್ಷದ “ಸೆನ್ಶಿಯಾ-2019′ ರಾಜ್ಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ, ತಾಂತ್ರಿಕ ಹಾಗೂ ಮ್ಯಾನೇಜೆ¾ಂಟ್ ಹಬ್ಬ’ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿ ಅಥವಾ ಕಂಪೆನಿಗಳು ತಮ್ಮೊಳಗಿನ ಪ್ರತಿಭೆ, ಸಂಪನ್ಮೂಲಗಳಿಂದ ಏರಬಹುದಾದ ಎತ್ತರಕ್ಕೆ ಏರಲು ಸಾಧ್ಯವಾಗುತ್ತದೆ’ ಎಂದರು.
“ಮೈಟ್’ನ ಗೌರವ ಸಲಹೆಗಾರ ಪ್ರೊ| ಜಿ.ಆರ್. ರೈ ಮಾತನಾಡಿ, 12 ವರ್ಷಗಳ ಹಿಂದೆ ಹುಟ್ಟಿಕೊಂಡ ಮೈಟ್ ಶಿಕ್ಷಣದೊಂದಿಗೆ ಬೌದ್ಧಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಅರಳುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿ, ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ಸ್ಪರ್ಧಾಳುಗಳು ಅವಿಭಜಿತ ದ.ಕ. ಜಿಲ್ಲೆಯ ಸುತ್ತ ಪುಟ್ಟ ಪ್ರವಾಸ ಕೈಗೊಂಡು ಈ ಭಾಗದ ವಿಶೇಷತೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ’ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜಲಕ್ಷ್ಮೀ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರಾಜೇಶ್ ಚೌಟ ಅವರು, “ಸೆನ್ಶಿಯಾ ತನ್ನ ಚಿರನೂತನತೆಯೊಂದಿಗೆ 12ನೇ ಅಧ್ಯಾಯ ತೆರೆದಿದೆ; ಈ ಹಬ್ಬದ ಉತ್ತಮಾಂಶಗಳನ್ನು ಸ್ಪರ್ಧಿಗಳು ತಮ್ಮೊಂದಿಗೆ ಒಯ್ಯಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.
9 ವೇದಿಕೆ; 63 ಸ್ಪರ್ಧೆ
ಪ್ರಾಚಾರ್ಯ ಡಾ| ಜಿ. ಎಲ್. ಈಶ್ವರ ಪ್ರಸಾದ್ ಸ್ವಾಗತಿಸಿ ಪ್ರಸ್ತಾವನೆಗೈದು, ರಾಜ್ಯದ 45 ಎಂಜಿನಿಯರಿಂಗ್, ಮ್ಯಾನೇಜ್ಮೆಂಟ್ ಸಂಸ್ಥೆಗಳು ಸಹಿತ 1,700ರಷ್ಟು ಸ್ಪರ್ಧಾಳುಗಳು ಆಗಮಿಸಿದ್ದು 9 ವೇದಿಕೆಗಳಲ್ಲಿ 63 ವಿಷಯಗಳಲ್ಲಿ ಸ್ಪರ್ಧೆಗಳನ್ನು ಸಂಯೋಜಿಸಲಾಗಿದೆ.
ಮಾ. 28ರಂದು “ಸೆನ್ಶಿಯಾ ಪ್ರಶಸ್ತಿ ಪ್ರದಾನ, ಮಿಖಾ ಸಿಂಗ್ ಸಂಗೀತ ಸಂಜೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಅಚಲ್ ಪೂಂಜಾ, ಅಪೂವಾì ನಿರೂಪಿಸಿದರು. ಸೆನ್ಶಿಯಾ ಮುಖ್ಯ ಸಂಯೋಜಕಿ ಡಾ| ಆಶಾ ಕ್ರಾಸ್ತ ವಂದಿಸಿದರು.