Advertisement
ಮೀನುಗಾರಿಕೆಗೆ ಬೋಟು, ಎಂಜಿನ್‌ಗಳನ್ನು ದುರಸ್ತಿಗೊಳಿಸಿ ಬಲೆಗಳನ್ನು ಸಿದ್ಧಗೊಳಿಸಲಾಗಿದೆ. ಐಸ್‌ಪ್ಲಾಂಟ್‌ಗಳು ರವಿವಾರವೇ ಕಾರ್ಯಾರಂಭಿಸಿದ್ದು, ಕಡಲಿಗಿಳಿಯುವ ಬೋಟುಗಳಿಗೆ ಮಂಜುಗಡ್ಡೆ ತುಂಬಿಸಲಾಗುತ್ತಿದೆ. ಸರಕಾರದ ತೆರಿಗೆ ರಹಿತ ಡೀಸೆಲ್ ನೀಡುವ ಕಾರ್ಯ ಸೋಮವಾರದಿಂದ ಪ್ರಾರಂಭವಾಗಲಿದೆ.
Related Articles
Advertisement
ವ್ಯಾಪಾರ ವಹಿವಾಟು ವೃದ್ಧಿಮಲ್ಪೆ: ಯಾಂತ್ರಿಕ ಮೀನುಗಾರಿಕೆ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಮಲ್ಪೆ ಬಂದರಿನಲ್ಲಿರುವ ಹೊಟೇಲು, ಅಂಗಡಿ ಮುಂಗಟ್ಟುಗಳು ಮತ್ತೆ ಸದ್ದು ಮಾಡಲಿವೆ. ನಗರದ ಪೇಟೆಯಲ್ಲಿ ವ್ಯಾಪಾರ ವಹಿವಾಟುಗಳು ವೃದ್ಧಿಸಲಿದೆ. ಯಾಂತ್ರಿಕ ದೋಣಿಗಳಲ್ಲಿ ದುಡಿಯುವ ಬಹುಪಾಲು ಮಂದಿ ಒಡಿಶಾ, ತಮಿಳುನಾಡು, ಆಂಧ್ರಪ್ರದೇಶ, ಝಾರ್ಖಂಡ್ ಇತ್ಯಾದಿ ರಾಜ್ಯಗಳಿಗೆ ಸೇರಿದವರಾಗಿದ್ದು, ಮತ್ತೆ ಬಂದರಿನತ್ತ ಮುಖ ಮಾಡುತ್ತಿದ್ದಾರೆ. ಪರಿಹಾರವಾಗಬೇಕಾದ ಸಮಸ್ಯೆಗಳು
ಪ್ರಸ್ತುತ ಬಂದರಿನಲ್ಲಿ ಹಲವಾರು ಸಮಸ್ಯೆಗಳಿವೆ. ಮುಖ್ಯವಾಗಿ ಸಮರ್ಪಕವಾದ ಲ್ಯಾಂಡಿಂಗ್ ಸೆಂಟರ್ ಇಲ್ಲದೆ ತಂದ ಮೀನನ್ನು ಒತ್ತಡದಲ್ಲಿ ಖಾಲಿ ಮಾಡುವ ಪರಿಸ್ಥಿತಿ ಇದೆ. 2,500 ಸಾವಿರಕ್ಕೂ ಅಧಿಕ ಯಾಂತ್ರಿಕ ಬೋಟುಗಳು ಇಲ್ಲಿವೆ. ಆದರೆ ಅವಕಾಶ ಇರುವುದು 1,000 ಬೋಟುಗಳಿಗೆ ಮಾತ್ರ. 8 ವರ್ಷಗಳಿಂದ ಬಂದರಿನಲ್ಲಿ ಡ್ರೆಜ್ಜಿಂಗ್ ಮಾಡದಿರುವುದರಿಂದ ಬೋಟುಗಳ ತಳ ತಾಗಿ ಹಾನಿಗೀಡಾಗುತ್ತವೆ. ಮೀನುಗಾರ ಸಂಘಟನೆಗಳು ಮಂಡಿಸಿದ ಬೇಡಿಕೆಗೆ ಮನ್ನಣೆಯೇ ಇಲ್ಲ ಎನ್ನಲಾಗಿದೆ.