Advertisement
ನಗರದಿಂದ ಮೀನುಗಾರಿಕೆಗೆ ತೆರಳಿದ್ದ ಪರ್ಸೀನ್ ಬೋಟ್ ಸೋಮವಾರ ರಾತ್ರಿ ಮುಳುಗಡೆಯಾಗಿತ್ತು. ಬೋಟ್ ನಲ್ಲಿ ಒಟ್ಟು 25 ಮಂದಿ ತೆರಳಿದ್ದು, 19 ಮಂದಿ ಪಾರಾಗಿದ್ದರು. ನಾಪತ್ತೆಯಾಗಿದ್ದ ಆರು ಮಂದಿಯಲ್ಲಿ ಇಬ್ಬರ ಮೃತದೇಹ ಮಂಗಳವಾರ ಪತ್ತೆಯಾಗಿತ್ತು. ಒಂದು ಮೃತದೇಹ ಇಂದು ಪತ್ತೆಯಾಗಿದ್ದು, ಉಳಿದ ಮೂವರಿಗಾಗಿ ಶೋಧ ಮುಂದುವರಿದಿದೆ.
Related Articles
Advertisement
“ಹೇಗೆ ಸಂಭವಿಸಿತೋ ಗೊತ್ತಿಲ್ಲ’
“ನಾವು ಸುಮಾರು 12 ನಾಟಿಕಲ್ ಮೈಲು ದೂರದಲ್ಲಿ ಬೋಟ್ ನಿಲ್ಲಿಸಿ ಬಲೆ ಹಾಕಿ ಮೀನು ಹಿಡಿದು ದೋಣಿಗೆ ತುಂಬಿಸಿ ವಾಪಸಾಗುತ್ತಿದ್ದೆವು. ಅಲ್ಲಿಂದ ದಡ ಸೇರಲು ಅರ್ಧ ಗಂಟೆ ದಾರಿ ಮಾತ್ರ ಬಾಕಿ ಇತ್ತು. ನಾನು 15 ವರ್ಷಗಳಿಂದ ಮೀನುಗಾರಿಕೆ ಬೋಟ್ ಚಾಲಕನಾಗಿ ದುಡಿಯುತ್ತಿದ್ದೇನೆ. ಕಳೆದ ಕೆಲವು ತಿಂಗಳುಗಳಿಂದ ಶ್ರೀರಕ್ಷಾ ಬೋಟ್ ಚಲಾಯಿಸುತ್ತಿದ್ದೆ. ಆದರೆ ಸೋಮವಾರ ರಾತ್ರಿ ಏನಾಯಿತೆಂಬುದೇ ಗೊತ್ತಿಲ್ಲ. ನಾವು ಇದಕ್ಕಿಂತ ಮೂರು ಪಟ್ಟು ದೂರಕ್ಕೆ ಹೋಗಿ ಮೀನುಗಾರಿಕೆ ನಡೆಸಿದ್ದೆವು, ಏನೂ ಆಗಿರಲಿಲ್ಲ. ಆದರೆ ಸೋಮವಾರದ ಘಟನೆ ಕ್ಷಣದೊಳಗೆ ನಡೆದು ಹೋಯಿತು’ ಎಂದು ಮುಳುಗಡೆಯಾದ ಬೋಟ್‌ನ ಚಾಲಕ ರೂಪೇಶ್ ತಿಳಿಸಿದ್ದಾರೆ.