Advertisement

ಮಂಗಳೂರು : ಆದಿತ್ಯ ರಾವ್ ಕೃತ್ಯ ನಡೆಸಿದ ಸ್ಥಳಗಳ ಮಹಜರು

10:02 AM Jan 25, 2020 | Naveen |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯ ರಾವ್ ಕೃತ್ಯ ನಡೆಸಿದ ಸ್ಥಳಗಳನ್ನು ಪೊಲೀಸರು ಶುಕ್ರವಾರದಂದು ಸ್ಥಳ ಮಹಜರು ನಡೆಸಿದರು.

Advertisement

ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಹಾಗೂ ತನಿಖಾಧಿಕಾರಿಯಾದ ಬೆಳ್ಳಿಯಪ್ಪರವರ ನೇತೃತ್ವದಲ್ಲಿ ನಡೆದ ಸ್ಥಳ ಮಹಜರು ಪ್ರಕ್ರಿಯೆಯಲ್ಲಿ ಆರೋಪಿ ಆದಿತ್ಯ ರಾವ್ ತಾನು ಸ್ಪೋಟಕಗಳನ್ನುಇರಿಸಿದ್ದ ಸ್ಥಳವನ್ನು ಪೊಲೀಸರಿಗೆ ತೋರಿಸಿದ್ದಾನೆ.

ವಿಮಾನ ನಿಲ್ದಾಣವನ್ನು ಪ್ರವೇಶಿಸಿದ ಬಗೆ, ಅಲ್ಲಿ ಸ್ಪೋಟಕ ತುಂಬಿದ್ದ ಬ್ಯಾಗನ್ನು ಇರಿಸಿದ ರೀತಿ ಬಳಿಕ ಎಸ್ಕ್ಲವೇಟರ್ ಮೂಲಕ ಇಳಿದು ಬಂದದ್ದು ಹಾಗೂ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ರಿಕ್ಷಾವನ್ನು ಹತ್ತಿ ಹೋದ ರೀತಿಯನ್ನು ಪೊಲೀಸರಿಗೆ ಈ ಸಂದರ್ಭದಲ್ಲಿ ಆರೋಪಿಯು ತೋರಿಸಿಕೊಟ್ಟಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next