Advertisement

ಅ. 7ರಿಂದ 16: ಮಂಗಳೂರು ದಸರಾ ಮಹೋತ್ಸವ

09:54 PM Sep 26, 2021 | Team Udayavani |

ಮಹಾನಗರ: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಈ ವರ್ಷ ಮಂಗಳೂರು ದಸರಾ ಮಹೋತ್ಸವವನ್ನು ಸರಕಾರದ ಮಾರ್ಗ ಸೂಚಿಯಂತೆ ಸಾಂಪ್ರದಾಯಿಕವಾಗಿ ನಡೆಸಲು ನಿರ್ಧರಿ ಸಲಾಗಿದ್ದು, ಇದಕ್ಕೆ ಪೂರಕ ಸಿದ್ಧತೆಗಳು ನಡೆಯುತ್ತಿವೆ ಎಂದು ದೇಗುಲದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ ತಿಳಿಸಿದ್ದಾರೆ.

Advertisement

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ರವಿವಾರ ನಡೆದ ದಸರಾ ಮಹೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅ. 7ರಿಂದ 16ರ ವರೆಗೆ ಮಂಗಳೂರು ದಸರಾ ಮಹೋತ್ಸವ ನಡೆಯಲಿದ್ದು, ಮಹೋತ್ಸವ ವನ್ನು ಯಶಸ್ವಿಗೊಳಿಸಲು ಸಂಘ  - ಸಂಸ್ಥೆಗಳು, ಭಕ್ತರು ಸಹಿತ ಸರ್ವರ ಸಹಕಾರ ಕೋರಿದ ಅವರು ಕಳೆದ ಬಾರಿಯಂತೆ ಈ ಬಾರಿಯೂ ನಗರದ ರಾಜಬೀದಿಗಳು ವಿದ್ಯುದ್ದೀಪಗಳಿಂದ ಕಂಗೊಳಿಸಲಿವೆ ಎಂದರು.

ಇದನ್ನೂ ಓದಿ:ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲು ಸಚಿವರ ಆಗ್ರಹ

ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ ಮಾತನಾಡಿ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಆಶಯದಂತೆ ಮಂಗಳೂರು ದಸರಾ ಮಹೋತ್ಸವ ನಡೆಯಲಿದ್ದು, ಇದು ಯಶಸ್ವಿಯಾಗಿ ನಡೆಯ ಬೇಕಾದರೆ ಎಲ್ಲ ಸಂಘ-ಸಂಸ್ಥೆಗಳು, ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದರು.

Advertisement

ಆರ್ಥಿಕ ಚೈತನ್ಯಕ್ಕೆ ಪುನಶ್ಚೇತನ
ಕಳೆದ ಬಾರಿ ದಸರಾವನ್ನು “ನಮ್ಮ ದಸರಾ-ನಮ್ಮ ಸುರಕ್ಷೆ’ ಚಿಂತನೆಯೊಂದಿಗೆ ಯಶಸ್ವಿಯಾಗಿ ನಡೆಸಲಾಗಿದೆ. ದಸರಾ ಮಹೋತ್ಸವದ ದರ್ಬಾರು ಮಂಟಪ, ಮೂರ್ತಿ ರಚನೆ ಕಾರ್ಯ ನಡೆಯುತ್ತಿದೆ. ಕಳೆದ ಬಾರಿಯೂ ಮಂಗಳೂರು ದಸರಾ ಮಹೋತ್ಸವ ಮೂಲಕ ಕರಾವಳಿಯ ಆರ್ಥಿಕ ಚೈತನ್ಯಕ್ಕೆ ಪುನಶ್ಚೇತನ ಸಿಕ್ಕಂತಾಗಿದೆ. ಇದಕ್ಕೆ ಗೋಕರ್ಣನಾಥ, ಶಾರದೆ, ನವದುರ್ಗೆಯರ ಅನುಗ್ರಹ ಕಾರಣ. ಎಲ್ಲರ ಸಹಕಾರದೊಂದಿಗೆ ಈ ಬಾರಿಯೂ ಉತ್ಸವ ಯಶಸ್ವಿಯಾಗಿ ನಡೆಯಲಿದೆ ಎಂದು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌ ಆರ್‌. ಹೇಳಿದರು.

ಕುದ್ರೋಳಿ ದೇಗುಲದ ಉಪಾಧ್ಯಕ್ಷರಾದ ಉರ್ಮಿಳಾ ರಮೇಶ್‌ ಕುಮಾರ್‌, ಟ್ರಸ್ಟಿಗಳಾದ ರವಿಶಂಕರ್‌ ಮಿಜಾರು, ಜಗದೀಶ್‌ ಡಿ. ಸುವರ್ಣ, ಶೇಖರ್‌ ಪೂಜಾರಿ, ಕುದ್ರೋಳಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷರಾದ ಡಾ| ಅನಸೂಯಾ, ಡಾ| ಬಿ.ಜಿ. ಸುವರ್ಣ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ರಾಧಾಕೃಷ್ಣ ಕೆ., ಶೈಲೇಂದ್ರ ಸುವರ್ಣ, ಚಿತ್ತರಂಜನ್‌ ಗರೋಡಿ, ಸೂರ್ಯಕಾಂತ್‌ ಜೆ. ಸುವರ್ಣ, ವೇದಕುಮಾರ್‌ ಬೆಂಗಳೂರು, ಲೀಲಾಕ್ಷ ಕರ್ಕೇರ, ಜಯರಾಜ್‌ ಸೋಮಸುಂದರ್‌, ಚಂದನ್‌ ದಾಸ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next