Advertisement
ದೇಶದ ಸ್ಮಾರ್ಟ್‌ಸಿಟಿ ಮಿಷನ್ ನಗರಗಳು ಪ್ರಮುಖ ಮೂಲ ಸೌಕರ್ಯ ಒದಗಿಸುವ, ನಾಗರಿಕರಿಗೆ ಯೋಗ್ಯವಾದ ಸುಲಲಿತ ಜೀವನಮಟ್ಟ ನೀಡುವ ಸ್ವಚ್ಛ ಮತ್ತು ಸುಸ್ಥಿರ ಪರಿಸರ ಹಾಗೂ ಉತ್ತಮ ಪರಿಹಾರಗಳಿಗೆ ಸಂಬಂಧಿಸಿದಂತೆ ನಗರವನ್ನು ಉತ್ತೇಜಿಸುವ ದೃಷ್ಟಿಯಿಂದ ಸುಲಲಿತ ಜೀವನ ಸೂಚ್ಯಂಕ ಸಮೀಕ್ಷೆಯನ್ನು ನಡೆಸುತ್ತಿದೆ.
Related Articles
ಸಮೀಕ್ಷೆಯ ಇಲ್ಲಿವರೆಗಿನ ಪಾಲ್ಗೊಳ್ಳುವಿಕೆಯ ಶೇಕಡಾವಾರು ಪ್ರಮಾಣದಲ್ಲಿ ಮಂಗಳೂರು 3ನೇ ಸ್ಥಾನದಲ್ಲಿದ್ದು, ತುಮಕೂರು ಮೊದಲ ಸ್ಥಾನ ದಲ್ಲಿದೆ. ಆದರೆ ನಿಗದಿತ ಗುರಿ ಮೀರಲಾಗಿದೆ. ಮಂಗಳೂರಿ ನಲ್ಲಿ 5,172ರಷ್ಟು ಮಂದಿ ಪಾಲ್ಗೊಳ್ಳುವ ಗುರಿ ಇಟ್ಟು ಕೊಳ್ಳಲಾಗಿತ್ತಾದರೂ 6,246 ಮಂದಿ ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಗುರಿ ಮೀರಿ ಸಾಧನೆಯಾಗಿದೆ. ಆದರೆ ಜನರ ಪಾಲ್ಗೊಳ್ಳುವಿಕೆಯ ಶೇಕಡಾವಾರು ಪ್ರಮಾಣದಲ್ಲಿ ಮಂಗಳೂರಿನಲ್ಲಿ ಶೇ. 121 ಪ್ರಮಾಣ ಆಗುವುದರೊಂದಿಗೆ 3ನೇ ಸ್ಥಾನದಲ್ಲಿದೆ. ಶೇ. 133ರಷ್ಟು ಜನರು ಪಾಲ್ಗೊಳ್ಳುವಿಕೆಯೊಂದಿಗೆ ತುಮಕೂರು ಮೊದಲ ಸ್ಥಾನದಲ್ಲಿದ್ದರೆ, ಶೇ. 129ರಷ್ಟು ಜನರ ಪಾಲ್ಗೊಳ್ಳುವಿಕೆಯೊಂದಿಗೆ ದಾವಣಗೆರೆ ಎರಡನೇ ಸ್ಥಾನದಲ್ಲಿದೆ. ಫೆ. 29ರೊಳಗೆ ನಾಗರಿಕರ ಪಾಲ್ಗೊಳ್ಳುವಿಕೆಯಲ್ಲಿ ಈ ಎರಡೂ ನಗರಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಕಾಯ್ದುಕೊಳ್ಳುವ ಸವಾಲು ಮಂಗಳೂರಿಗಿದೆ. ಇದಕ್ಕೆ ಜನರ ಸಹಕಾರ ಅಗತ್ಯವಾಗಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
Advertisement
ಗುರಿ ಮೀರಿ ಸಾಧನೆಸಮೀಕ್ಷೆಯಲ್ಲಿ ನಗರದ ಒಟ್ಟು ಜನಸಂಖ್ಯೆಯ ಶೇ. 1ರಷ್ಟು ಜನ ಪಾಲ್ಗೊಳ್ಳಲೇಬೇಕೆಂಬ ನಿಯಮವಿದೆ. ಅದಕ್ಕಾಗಿ ಪ್ರತಿ ನಗರಗಳಿಗೆ ಒಟ್ಟು ಜನಸಂಖ್ಯೆಯ ಶೇ. 1ರಷ್ಟು ಜನರ ಗುರಿ ನಿಗದಿಪಡಿಸಲಾಗಿದೆ. ಮಂಗಳೂರಿನಲ್ಲಿ ಒಟ್ಟು 5.20 ಲಕ್ಷ ಜನಸಂಖ್ಯೆಯಿದ್ದು, ಈ ಪೈಕಿ ಶೇ. 1 ಅಂದರೆ 5,172 ಮಂದಿಯನ್ನು ಒಳಗೊಳ್ಳುವ ಗುರಿ ನಿಗದಿಪಡಿಸಲಾಗಿದೆ. ಪ್ರಸ್ತುತ ನಿಗದಿತ ಗುರಿ ಮೀರಿ ಸಾಧನೆಯಾಗಿದೆ.
ಸಮೀಕ್ಷೆಗೆ ಗುರಿ ನಿಗದಿಪಡಿಸಿರುವುದು ಗುರಿ ಸಾಧನೆಯಾಗಬೇಕೆಂಬ ದೃಷ್ಟಿಯಿಂದ. ಆದರೆ ಜನರ ಪಾಲ್ಗೊಳ್ಳುವಿಕೆ ಗುರಿ ಮೀರಿ ಸಾಧನೆಯಾಗುವುದರೊಂದಿಗೆ ನಂ. 1 ಸ್ಥಾನಕ್ಕೇರಬೇಕು. ಇದರಿಂದ ಭವಿಷ್ಯದಲ್ಲಿ ನಗರದ ಆದ್ಯತೆಗಳನ್ನು ಸರಕಾರಕ್ಕೆ ತಿಳಿಸಲು ಸುಲಭವಾಗುತ್ತದೆ. ಮುಂದಿನ ಒಂದು ವಾರ ಕಾಲ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು.
- ಮೊಹಮ್ಮದ್ ನಝೀರ್, ನಿರ್ದೇಶಕ, ಸ್ಮಾರ್ಟ್ ಸಿಟಿ ಯೋಜನೆ ಮಂಗಳೂರು