Advertisement
ಅಧಿಕ ವೆಚ್ಚ, ಪರಿಸರ ಪೂರಕವಲ್ಲ ಎಂಬ ಕಾರಣಕ್ಕೆ ರಸ ಗೊಬ್ಬರ ಉತ್ಪಾದನೆಗೆ ನಾಫ್ತಾ ಬದಲು ಎಲ್‌ಎನ್‌ಜಿ ಬಳಸುವು ದನ್ನು ಕೇಂದ್ರ ಸರ ಕಾರ ಹಿಂದೆಯೇ ಕಡ್ಡಾಯ ಗೊಳಿಸಿದ್ದು, ಗೈಲ್ ಕಂಪೆನಿಯು ಕೊಚ್ಚಿಯಿಂದ ಕೊಳವೆ ಮೂಲಕ ಎಂಸಿಎಫ್ಗೆ ಪೂರೈಸಲು ಸಿದ್ಧತೆ ನಡೆಸಿದೆ.
ದಲ್ಲಿ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲಸ ನಿಧಾನವಾಗಿತ್ತು. ದ.ಕ.ದಲ್ಲೂ ಭೂಮಿ ಕಳೆದುಕೊಂಡ ಕೃಷಿಕರು, ಮತ್ತಿತರರು ವಿರೋಧಿಸಿ ದ್ದರು. ಪ್ರತೀ 30 ಕಿ.ಮೀ.ಗೆ ಒಂದರಂತೆ ಎಸ್‌ವಿ ಸ್ಟೇಷನ್ ನಿರ್ಮಿಸಲಾಗುತ್ತಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿ ಕಾಮಗಾರಿ ನಡೆಯುತ್ತಿದೆ. ತುರ್ತು ಸಂದರ್ಭ ಉದ್ಭವಿಸಿದಾಗ ಇದರ ಮೂಲಕ ಮೂಲಕ ಅನಿಲ ಸರಬರಾಜು ತಡೆಹಿಡಿಯಲು ಸಾಧ್ಯ. ಎಲ್‌ಎನ್‌ಜಿ ಮೂಲಕ ರಸಗೊಬ್ಬರ ಉತ್ಪಾದನೆಗೆ ಎಂಸಿಎಫ್‌ನಲ್ಲಿ ಈಗಾ ಗಲೇ ಯಂತ್ರೋಪಕರಣ ಪರಿಷ್ಕರಣೆ ಮಾಡಲಾಗಿದ್ದು, 315 ಕೋ.ರೂ. ವೆಚ್ಚದಲ್ಲಿ ಹೊಸ ಕೇಂದ್ರ ಸ್ಥಾಪಿಸಲಾಗಿದೆ.
Related Articles
Advertisement
ಪೈಪ್ ಮೂಲಕ ಅಡುಗೆ ಅನಿಲಕೊಚ್ಚಿಯಿಂದ ಎಂಸಿಎಫ್ಗೆ ದೊರೆತ ನೈಸರ್ಗಿಕ ಅನಿಲವನ್ನು ಜಿಲ್ಲೆಯ ಮನೆ ಬಳಕೆಗೂ ಒದಗಿಸುವ ಯೋಜನೆಯಿದೆ. ಜಿಲ್ಲೆಯಲ್ಲಿ 100 ಸಿಎನ್‌ಜಿ ಸ್ಟೇಷನ್‌ಗಳನ್ನು ಸರಕಾರಿ – ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲು ನಿರ್ಧರಿ ಸಲಾಗಿದೆ. ಸುಮಾರು 3.5 ಲಕ್ಷ ಕುಟುಂಬಗಳಿಗೆ ಕೊಳವೆ ಮೂಲಕ ಅಡುಗೆ ಅನಿಲ ವಿತರಣೆ ಮಾಡಲು ಯೋಜನೆ ಇದ್ದು, ಮೊದಲಿಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಇದರ ಲಾಭ ದೊರೆಯಲಿದೆ. ಆದರೆ ಹೊಸದಾಗಿ ಪೈಪ್‌ಲೈನ್ ಅಳವಡಿಸಬೇಕಾಗಿರುವುದರಿಂದ ಅನುಷ್ಠಾನಕ್ಕೆ ಸಮಯ ಬೇಕಾಗಬಹುದು. ನದಿಯಲ್ಲಿ ಸುರಂಗ!
ಪ್ರಸ್ತುತ ನೇತ್ರಾವತಿಯ ಫರಂಗಿಪೇಟೆ ವ್ಯಾಪ್ತಿಯಲ್ಲಿ ನದಿ ಪಾತ್ರದಲ್ಲಿ ಸುರಂಗದಂತೆ ನಿರ್ಮಾಣ ಮಾಡಿ ಅನಿಲ ಪೈಪ್‌ಲೈನ್ ಹಾಕಲಾಗುತ್ತಿದೆ. ನದಿ ನೀರು, ಪರಿಸರಕ್ಕೆ ಧಕ್ಕೆ ಆಗದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ ಎಂದು ಕಂಪೆನಿ ತಿಳಿಸಿದೆ. ಫಲ್ಗುಣಿ, ಅತ್ತ ಕಾಸರಗೋಡಿನ ಚಂದ್ರಗಿರಿ ನದಿಯಲ್ಲಿಯೂ ಇದೇ ಕಾಮಗಾರಿ ನಡೆಯುತ್ತಿದೆ. ಪರಿವರ್ತನೆಗಾಗಿ 315 ಕೋ.ರೂ. ವೆಚ್ಚ
ಎಲ್‌ಎನ್‌ಜಿ ಮೂಲಕ ರಸ ಗೊಬ್ಬರ ಉತ್ಪಾದನೆಗೆ ಎಂಸಿಎಫ್ ಈಗಾಗಲೇ ಪೂರಕ ಸಿದ್ಧತೆ ಮಾಡಿದೆ. ನಾಫ್ತಾದಿಂದ ಪರಿವರ್ತನೆ ಹೊಂದಲು ಅನುವಾಗುವಂತೆ ಇಲ್ಲಿನ ಯಂತ್ರೋಪಕರಣ ಸಹಿತ ಇಡೀ ಕೇಂದ್ರವನ್ನು ಸುಮಾರು 315 ಕೋ.ರೂ. ವೆಚ್ಚದಲ್ಲಿ ಮರುಸ್ಥಾಪಿಸಲಾಗಿದೆ. ಮುಂದಿನ ಕೆಲವೇ ತಿಂಗಳು ಗಳಲ್ಲಿ ಗ್ಯಾಸ್ ದೊರೆಯುವ ಸಾಧ್ಯತೆ ಇದೆ.
– ಪ್ರಭಾಕರ ರಾವ್, ಎಂಸಿಎಫ್ ನಿರ್ದೇಶಕರು