Advertisement
ಸೆ. 6ರ ಸಂಜೆ 4.30ಕ್ಕೆ ಬೈಂದೂರಿನ ಶಿರೂರು ಗಡಿ ಭಾಗದಿಂದ ರಾಲಿ ಪ್ರಾರಂಭವಾಗಲಿದೆ. 5.30ಕ್ಕೆ ಕುಂದಾಪುರಕ್ಕೆ ಆಗಮಿಸಿ ಸಭೆ ನಡೆಯಲಿದೆ. ಅನಂತರ ಉಡುಪಿ ಮೂಲಕ ಮಣಿಪಾಲಕ್ಕೆ ಆಗಮಿಸಿ ವಾಸ್ತವ್ಯ ಹೂಡಲಿದೆ. ಮಣಿಪಾಲದ ಆರ್‌ಎಸ್‌ಬಿ. ಸಭಾಭವನ, ವೈಷ್ಣವಿ ಮತ್ತು ಎಂಜೆಸಿಯಲ್ಲಿ ಉಳಿಯಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸರಿ ಸುಮಾರು 3 ಸಾವಿರ ಮೋಟಾರ್ ಸೈಕಲ್‌ಗಳು ಉಡುಪಿ ಜಿಲ್ಲೆ ಯಿಂದ ರ್ಯಾಲಿಯಲ್ಲಿ ಭಾಗವಹಿಸ ಲಿವೆ. ಪೊಲೀಸರೇನಾದರೂ ರಾಲಿ ತಡೆದರೆ ಮುಂದೇನು ಮಾಡಬೇಕು ಎನ್ನುವುದನ್ನು ಆಮೇಲೆಯೇ ನಿರ್ಧರಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಗೆ ರಾಲಿ ಪ್ರವೇಶಿಸಲು ಅವಕಾಶ ನೀಡಿಲ್ಲ. ಕಾನೂನು ಸುವ್ಯವಸ್ಥೆ ನಿಟ್ಟಿನಲ್ಲಿ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಕಾನೂನು ಉಲ್ಲಂ ಸಿದರೆ ಕ್ರಮ ಕೈಗೊಳ್ಳುವುದು ಖಚಿತ ಎಂದು ಎಸ್‌ಪಿ ಡಾ| ಸಂಜೀವ ಎಂ. ಪಾಟೀಲ್ ಅವರು ತಿಳಿಸಿದ್ದಾರೆ. ಗಡಿ ಭಾಗದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಪೊಲೀಸ್ ಭದ್ರತೆ ಇರುತ್ತದೆ. ಯಾವುದೇ ಕಾರಣಕ್ಕೂ ಶಾಂತಿಭಂಗವಾದರೆ ಬಂಧನದ ಕ್ರಮವೂ ಅನಿವಾರ್ಯವಾಗುತ್ತದೆ ಎಂದವರು ಹೇಳಿದ್ದಾರೆ.