Advertisement

ಬಂಟ್ವಾಳ: ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ಪೊಲೀಸ್ ದಾಳಿ; ಆರೋಪಿಗಳು ವಶಕ್ಕೆ

09:15 PM Jan 17, 2021 | Team Udayavani |

ಬಂಟ್ವಾಳ: ಬಿಸಿರೋಡಿನ ಹೃದಯ ಭಾಗದಲ್ಲಿನ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಎಸ್.. ಅವಿನಾಶ್ ಹಾಗೂ ಬಂಟ್ವಾಳ ವೃತ್ತ ನಿರೀಕ್ಷಕರಾದ ಟಿ ಡಿ ನಾಗರಾಜ್ ನೇತ್ರತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು, ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

Advertisement

ಬಿಸಿರೋಡಿನ ಮುಖ್ಯ ವೃತ್ತದ ಬಳಿಯಲ್ಲಿರುವ ಮನೆಯೊಂದರಲ್ಲಿ ವೇಶ್ಯಾವಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಎಸ್. ಅವಿನಾಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಪುತ್ತೂರು ನೆಕ್ಕಿಲಾಡಿ ನಿವಾಸಿ ಶರಣ್‌ (28)ವರ್ಷ, ಬಂಟ್ವಾಳ ಕರಿಯಂಗಳ ನಿವಾಸಿ ಭರತ್(28), ಪುತ್ತೂರು ಚಿಕ್ಕಮೂಡ್ನೂರು ಗ್ರಾಮ ನಿವಾಸಿ ಕಿರಣ್ ಕೆ (25)ಎಂಬವರುಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಒಟ್ಟು ರೂ. 4,400/ ನಗದು ಹಾಗೂ ಕೃತ್ಯಕ್ಕೆ ಬಳಸಿದ ಇತರ ಸಾಮಾಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ.

ದಾಳಿಯ ವೇಳೆ ಮೂವರು ಯುವಕರನ್ನು ವಶಕ್ಕೆ ಪಡೆದುಕೊಂಡು,  ಐದು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ಒಟ್ಟು ಎಂಟು ಮಂದಿಯನ್ನು ಠಾಣೆಗೆ ಕರದೊಯ್ಯಲಾಗಿದ್ದು ತನಿಖೆ ಮುಂದುವರಿದಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ಸಿಗಬೇಕಾಗಿದೆ.

ಇದನ್ನೂ ಓದಿ:  ಕರ್ನಾಟಕ ಆಕ್ರಮಿತ ಕೆಲಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲಿದ್ದೇವೆ: ಉದ್ಧವ್ ಠಾಕ್ರೆ

Advertisement

Udayavani is now on Telegram. Click here to join our channel and stay updated with the latest news.

Next