Advertisement
ಸಕಲೇಶಪುರ ಸಮೀಪ ರೈಲು ಮಾರ್ಗದ ಮೇಲೆ ಗುಡ್ಡ ಕುಸಿದಿದ್ದು, ಮಣ್ಣು ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಮತ್ತೆ ಮತ್ತೆ ಮಣ್ಣು ಕುಸಿತವಾಗುತ್ತಿದ್ದುದರಿಂದ ಕಾರ್ಯಾಚರಣೆಗೆ ಹಿನ್ನಡೆಯಾಗಿತ್ತು. ಜತೆಗೆ ಕಳೆದೆರಡು ದಿನಗಳಿಂದ ಸಕಲೇಶಪುರ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.
ಸುಬ್ರಹ್ಮಣ್ಯ: ಸಕಲೇಶಪುರ ಸಮೀಪ ರೈಲು ಮಾರ್ಗಕ್ಕೆ ಗುಡ್ಡ ಕುಸಿದ ಮಣ್ಣು ತೆರವು ಕಾರ್ಯ ಪೂರ್ಣಗೊಂಡಿದ್ದು ಇದೀಗ ಆ. 14ರಿಂದ ಮಂಗಳೂರು – ಬೆಂಗಳೂರು ನಡುವೆ
ರೈಲು ಸಂಚಾರ ಪುನರಾರಂಭ ಆಗಲಿದೆ.
Related Articles
Advertisement
ಶುಕ್ರವಾರ ರಾತ್ರಿ ಗುಡ್ಡ ಕುಸಿದ ಬಳಿಕ ನಾಲ್ಕು ದಿನಗಳ ಸಮಾರೋಪಾದಿಯ ಮಣ್ಣು ತೆರವು ಕಾರ್ಯಾಚರಣೆ ನಡೆದಿದ್ದು ಇದೀಗ ರೈಲು ಮಾರ್ಗ ಸಂಚಾರಕ್ಕೆ ಯೋಗ್ಯವಾಗಿದೆ. ಇದಕ್ಕೂ ಮೊದಲು ಜು. 26ರ ರಾತ್ರಿ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ಸಮೀಪದ ದೋಣಿಗಲ್ ಎಂಬಲ್ಲಿ ರೈಲು ಮಾರ್ಗದಲ್ಲಿ ಭೂ ಕುಸಿತ ಸಂಭವಿಸಿ ರೈಲು ಸಂಚಾರ ತಡೆ ಹಿಡಿದು ದುರಸ್ತಿ ಕಾರ್ಯ ಆರಂಭಿಸಲಾಗಿತ್ತು. ಸುಮಾರು 12 ದಿನಗಳ ನಿರಂತರ ದುರಸ್ತಿ ಕಾರ್ಯಾಚರಣೆ ಬಳಿಕ ಆ. 8ರಂದು ರೈಲು ಸಂಚಾರ ಆರಂಭಗೊಂಡಿತ್ತು