Advertisement
ಮಂಗಳೂರು ವಕೀಲರ ಸಂಘದ ಹಿರಿಯ ವಕೀಲರಾದ ಕೆ. ಶಂಭು ಶರ್ಮ ಹಲ್ಲೆಗೊಳಗಾದವರು. ಚಂದ್ರಹಾಸ ಶ್ರೀಯಾನ್ ಹಲ್ಲೆಗೈದ ಆರೋಪಿ. ಶಂಭು ಶರ್ಮ ಅವರು ಕರ್ತವ್ಯ ನಿಮಿತ್ತ ಕಕ್ಷಿದಾರರೋರ್ವರ ಸ್ಥಳದ ವೀಕ್ಷಣೆಗೆ ಹೋದ ಸಂದರ್ಭದಲ್ಲಿ ಚಂದ್ರಹಾಸ ಶ್ರೀಯಾನ್ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾನೆ ಎಂದು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಭು ಶರ್ಮ ಅವರ ಮೇಲಿನ ಹಲ್ಲೆಯನ್ನು ಮಂಗಳೂರು ವಕೀಲರ ಸಂಘ ಖಂಡಿಸಿದೆ. ಹಲ್ಲೆ ನಡೆಸಿದ ವ್ಯಕ್ತಿಯ ಮೇಲೆ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ರಾಘವೇಂದ್ರ ಎಚ್.ವಿ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀಧರ ಎಚ್. ಅವರು ಒತ್ತಾಯಿಸಿದ್ದಾರೆ.