Advertisement
ಇಲ್ಲಿ ಕಾರ್ಯಾಚರಿಸುತ್ತಿದ್ದ ಎರಡು ನಗದು ವಿನಿಮಯ ಕೇಂದ್ರಗಳನ್ನು ನಷ್ಟದ ಕಾರಣ ನೀಡಿ ಟೆಂಡರ್‌ಪಡೆದ ಗುತ್ತಿಗೆದಾರರು ಬಂದ್ ಮಾಡಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಅದರಲ್ಲೂ ವಿದೇಶಗಳಿಂದ ಆಗಮಿಸುವವರಿಗೆ ನಗದು ವಿನಿಮಯಕ್ಕೆ ಸಮಸ್ಯೆಯಾಗುತ್ತಿದೆ. ಪರ್ಯಾಯ ವ್ಯವಸ್ಥೆ ರೂಪಿಸುವತ್ತ ವಿಮಾನ ನಿಲ್ದಾಣ ಪ್ರಾಧಿಕಾರವು ಹೆಜ್ಜೆ ಇರಿಸಿದೆ.
ನಿಲ್ದಾಣದ ಒಳಭಾಗದ ನಗದು ವಿನಿಮಯ ಕೇಂದ್ರವನ್ನು ಆರ್‌ಬಿಐ ನಿಯಮದ ಪ್ರಕಾರ ಟೆಂಡರ್ ಆಧಾರದಲ್ಲಿ ಕೇರಳ ಮೂಲದ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಗಿತ್ತು. ಆದರೆ ಇತ್ತೀಚೆಗೆ ವಿವಿಧ ಕಾರಣಗಳಿಂದ ನಷ್ಟವಾಗುತ್ತಿದೆ ಎಂಬ ಕಾರಣ ನೀಡಿ ಸಂಸ್ಥೆ ಹಿಂದೆ ಸರದಿದೆ.
Related Articles
Advertisement
ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲವು ದಿನಗಳಿಂದ “ನಗದು ವಿನಿಮಯ ಕೇಂದ್ರ’ ಸ್ಥಗಿತಗೊಂಡಿದೆ. ಹೊಸ ಕೇಂದ್ರ ಆರಂಭಿಸಲು ಟೆಂಡರ್ ಕರೆಯಲಾಗಿದೆ. ಜತೆಗೆ, ತುರ್ತಾಗಿ ವಿನಿಮಯ ಸೇವೆ ಆರಂಭಿಸುವುದಕ್ಕಾಗಿ ಆರ್‌ಬಿಐ ನಿಯಮ ಪ್ರಕಾರ ಸ್ಥಳೀಯ ಬ್ಯಾಂಕ್‌ಗಳ ಜತೆಗೆ ಮಾತುಕತೆ ನಡೆಸಲಾಗಿದೆ. ಕೆಲವೇ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ.– ಜೈಶಂಕರ್ ಕಮರ್ಷಿಯಲ್ ಮ್ಯಾನೇಜರ್,
ಮಂಗಳೂರು ಅಂ. ವಿಮಾನ ನಿಲ್ದಾಣ ವಿದೇಶದಿಂದ
ಆಗಮಿಸುವವರಿಗೆ ಸಮಸ್ಯೆ
ನಿಗದಿತ ಪ್ರಮಾಣಕ್ಕಿಂತ ಅಧಿಕ ಚಿನ್ನ ಅಥವಾ ಬೆಲೆಬಾಳುವ ವಸ್ತುಗಳನ್ನು ವಿದೇಶದಿಂದ ತಂದರೆ ನಿಲ್ದಾಣದಲ್ಲಿ ತೆರಿಗೆ ಪಾವತಿಸಬೇಕು. ಆದರೆ ವಿದೇಶದಿಂದ ಬರುವ ಬಹುತೇಕರಲ್ಲಿ ಭಾರತೀಯ ಕರೆನ್ಸಿ ಇರುವುದಿಲ್ಲ. ನಿಲ್ದಾಣದ ಒಳಗೆಯೇ ವಿನಿಮಯ ಕೇಂದ್ರವಿದ್ದರೆ ಇದಕ್ಕೆ ಅನುಕೂಲ. ಈಗ ಕೇಂದ್ರ ಸ್ಥಗಿತಗೊಂಡು ಸಮಸ್ಯೆಯಾಗಿದೆ. -ದಿನೇಶ್ ಇರಾ