Advertisement
ಮಂಗಳವಾರ ಹಾಗೂ ಬುಧವಾರ ನಗರದಲ್ಲಿ ನೀರು ರೇಷನಿಂಗ್ ನಿಯಮದಂತೆ ತುಂಬೆ ಡ್ಯಾಂನಲ್ಲಿ ಪಂಪಿಂಗ್ ಸ್ಥಗಿತಗೊಳಿಸಲಾಗಿತ್ತು. ಇದರಂತೆ ಎರಡೂ ದಿನ ಮಂಗಳೂರಿನಲ್ಲಿ ನೀರು ಸರಬರಾಜು ವ್ಯತ್ಯಯವಾಗಿ ಜನರು ಸಮಸ್ಯೆ ಅನುಭವಿಸಿದರು. ನಗರದ ಎತ್ತರ ಪ್ರದೇಶ ಹಾಗೂ ಪೈಪ್‌ಲೈನ್‌ನಲ್ಲಿ ಏರ್‌ಲಾಕ್ ಆಗಿದ್ದ ವ್ಯಾಪ್ತಿಗಳಿಗೆ ಬುಧವಾರವೂ ಸಮಸ್ಯೆ ಎದುರಾಗಿತ್ತು. ಮೇ 9ರ ಬೆಳಗ್ಗೆ 6 ಗಂಟೆಯಿಂದ ಮೇ 13ರ ಬೆಳಗ್ಗೆ 6 ಗಂಟೆಯವರೆಗೆ 96 ತಾಸುಗಳ ಕಾಲ ನೀರು ಸರಬರಾಜು ಇರಲಿದೆ.
ತುಂಬೆಯಿಂದ ಮಂಗಳೂರಿಗೆ ಬರುವ ನೀರು ಪೂರೈಕೆಯ ಮುಖ್ಯ ಪೈಪ್‌ಲೈನ್‌ನಲ್ಲಿರುವ ಅಕ್ರಮ ಸಂಪರ್ಕ ತೆರವು ಕಾರ್ಯಾಚರಣೆ ಬುಧವಾರವೂ ನಡೆದಿದೆ. ಫರಂಗಿಪೇಟೆಯಲ್ಲಿ ಬುಧವಾರ ಕಾರ್ಯಾಚರಣೆಗೆ ಅಧಿಕಾರಿಗಳು ಆಗಮಿಸಿದಾಗ ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು.