ಮಂಗಳೂರು: ಇಂದು ಮುಂಜಾನೆಯಿಂದಲೇ ಆರಂಭಗೊಂಡ ಎಸಿಬಿ ದಾಳಿ ಮುಕ್ತಾಯವಾಗಿದ್ದು, ಬಿಜೈ ಕಾಪಿಕಾಡ್ ಪ್ಲಾಟ್ ನಿಂದ ಅಧಿಕಾರಿಗಳು ಹೊರಟಿದ್ದಾರೆ.
ಮಹಾನಗರ ಪಾಲಿಕೆ ಟೌನ್ ಪ್ಲಾನಿಂಗ್ ಜಂಟಿ ನಿರ್ದೇಶಕ ಜಯರಾಜ್ ನಾಯಕ್ ಅವರ ಬಿಜೈ ಕಾಪಿಕಾಡ್ ನಲ್ಲಿರುವ ಪ್ಲಾಟ್, ಪಡೀಲ್ ನಲ್ಲಿರುವ ಮನೆ ಹಾಗೂ ಕೇರಳದ ಮಾಹೆಯಲ್ಲಿರುವ ಪತ್ನಿ ಕ್ವಾರ್ಟರ್ಸ್ ಗೆ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.
ದಾಳಿ ವೇಳೆ ಕೋಟ್ಯಾಂತರ ರೂಪಾಯಿ ಆಸ್ತಿ ಪತ್ತೆಯಾಗಿದೆ ಎನ್ನಲಾಗಿದೆ. 1.5 ಕೋಟಿ ಆಸ್ತಿ ದಾಖಲೆ ಪತ್ರ , 1 ಕೋಟಿ ಜಯರಾಜ್ ನಾಯಕ್ ಪತ್ನಿಯ ಅಕೌಂಟ್ ನಲ್ಲಿ ಹಣ, 7.5 ಲಕ್ಷ ನಗದು ಹಣ ಹಾಗೂ 160 ಗ್ರಾಂ ಚಿನ್ನಾಭರಣ ಪತ್ತೆಯಾಗಿದ್ದು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಅಧಿಕಾರಿಗಳು ತೆರಳಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ACB ಬೇಟೆ: ಲಕ್ಷಾಂತರ ರೂ. ಮೌಲ್ಯದ ಗರಿ ಗರಿ ನೋಟು, ಚಿನ್ನಾಭರಣ ಪತ್ತೆ
Related Articles
ಇದನ್ನೂ ಓದಿ: ಮಹಾನಗರ ಪಾಲಿಕೆ ಟೌನ್ ಪ್ಲಾನಿಂಗ್ ನ ಜಂಟಿ ನಿರ್ದೇಶಕ ಜಯರಾಜ್ ಅವರ ಮನೆ ಮೇಲೆ ಎಸಿಬಿ ದಾಳಿ