Advertisement

ಮಂಗಳೂರು : ಏರ್ ಗನ್ ನಿಂದ ಶೂಟ್ ಮಾಡಿ ನಾಯಿಯ ಹತ್ಯೆ

08:27 PM Jul 02, 2021 | Team Udayavani |

ಮಂಗಳೂರು : ನಗರದ ಶಿವಭಾಗ್ ನಲ್ಲಿ ಬೀದಿ ನಾಯಿಯನ್ನು ವ್ಯಕ್ತಿಯೋರ್ವ ಹತ್ಯೆ ಮಾಡಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಆರೋಪಿಯು ನಾಯಿಗೆ ಏರ್ ಗನ್ ನಿಂದ ಶೂಟ್ ಮಾಡಿರುವುದಾಗಿಪೊಲೀಸರು ತಿಳಿಸಿದ್ದಾರೆ. ಘಟನೆಯು ಜು.1 ರಂದು ಸಂಜೆ ಹೊತ್ತಲ್ಲಿ ನಡೆದಿದೆ ಎಂದು ಹೇಳಲಾಗಿದೆ.

ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ನಂತರ ಏರ್ ಗನ್ ನಿಂದ ಗುಂಡು ಹಾರಿಸಾಲಾಗಿರುವ ಮಾಹಿತಿ ತಿಳಿದಿದೆ. ಸದ್ಯ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಯ ಹುಡುಕಾಟದಲ್ಲಿ ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next