Advertisement
ಕೆಪಿಟಿ ಮತ್ತು ನಂತೂರು ಜಂಕ್ಷನ್‌ಗಳ ನಡುವಿನ ಪದವು ಬಸ್ ತಂಗುದಾಣ ಬಳಿಯ 78 ಸೆಂಟ್ಸ್ ಜಾಗದಲ್ಲಿ ಈ ಅರಣ್ಯ ನಿರ್ಮಾಣವಾಗಿದೆ. ಕೇವಲ ಎರಡು ವರ್ಷದ ಹಿಂದೆ ಈ ಜಾಗದಲ್ಲಿ ತ್ಯಾಜ್ಯ ಕಸಕಡ್ಡಿಗಳನ್ನು ಎಸೆಯಲಾಗುತ್ತಿತ್ತು. 2022ರಲ್ಲಿ ಬಯೋಕಾನ್ ಸಂಸ್ಥೆ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆಯ ನೇತೃತ್ವದಲ್ಲಿ ಗಿಡಗಳನ್ನು ನೆಡ ನೆಟ್ಟು ಕಾಡು ಬೆಳೆಸುವ ಯೋಜನೆ ರೂಪು ತಳೆದಾಗ ಆಯ್ಕೆಯಾಗಿದ್ದು, ಈ ಜಾಗ. ಅದರ ಜವಾಬ್ದಾರಿ ಯನ್ನು ವಹಿಸಿಕೊಂಡದ್ದು ಪರಿಸರ ಪ್ರೇಮಿ ಜೀತ್ ಮಿಲನ್ ರೋಚ್ ಮತ್ತು ತಂಡ.
ತಂಡ ಮಾಡಿತ್ತು. ಜಪಾನ್‌ನಲ್ಲಿ ನಗರದ ನಡುವೆ ದಟ್ಟ ಕಾಡು ನಿರ್ಮಿಸುವ “ಡಾ| ಅಕಿರಾ ಮಿಯಾವಾಕಿ’ ಅವರ ಪರಿಕಲ್ಪನೆಯಂತೆ ಗಿಡಗ ಳನ್ನು ಬೆಳೆಸಲಾಯಿತು. ನಗರದ ತ್ಯಾಜ್ಯಗಳನ್ನೇ ಗೊಬ್ಬರವಾಗಿಸಿ ಅವುಗಳಿಗೆ ಉಣಿಸಲಾಗಿದೆ. ಮರಗಳಿಂದ ಉದುರುವ ತರಗೆಲೆಗಳಿಂದಾಗಿ ನೆಲವೂ ಫಲವತ್ತಾಗಿದೆ. ದಿನಕ್ಕೆ 8,000 ಲೀಟರ್ ನೀರನ್ನೂ ನೀಡಲಾಗುತ್ತಿದೆ. ಹೀಗೆ ಇಲ್ಲೊಂದು ದಟ್ಟ ಕಾಡಿನ ನಿರ್ಮಾಣವಾಗಿದೆ. “ಮಿಯಾವಾಕಿ ಅರಣ’ ಪರಿಕಲ್ಪನೆ ಯಡಿ ನಗರದಲ್ಲಿ ಈಗಾಗಲೇ ಅಲ್ಲಲ್ಲಿಕಿರು ಅರಣ್ಯಗಳು ನಿರ್ಮಾಣವಾಗಿದೆ.
Related Articles
ಪ್ರದೇಶ ದಟ್ಟ ಅರಣ್ಯವಾಗಿದ್ದು, ನೋಡುಗರ ಮನ ಸೆಳೆಯುತ್ತಿದೆ.
Advertisement
ಅರಣ್ಯದಲ್ಲಿ ಏನೆಲ್ಲಾ ಇವೆ?ಕಾಡು ಮಾವು, ಹಲಸು, ಹೆಬ್ಬಲಸು, ನೊರೆಕಾಯಿ, ಸೀತಾ ಅಶೋಕ, ಮಹಾಘನಿ, ಶ್ರೀಗಂಧ, ಹೊನ್ನೆ, ಸಂಪಿಗೆ, ಕಾಡು ಬಾದಾಮು, ಪುನರ್ಪುಳಿ, ಅಂಡಿಪುನರ್, ಹೊಂಗೆ, ಚೆರಿ, ಬಸವನಪಾದ, ಕದಂಬ, ಅಶ್ವತ್ಥ, ಆಲ, ಬಿದಿರು ಮೊದಲಾದ 150ಕ್ಕೂ ಅಧಿಕ ಜಾತಿಯ ಮರಗಳನ್ನು ಬೆಳೆಸಲಾಗಿದೆ. ಸುಮಾರು 2 ಸಾವಿರಕ್ಕೂ ಅಧಿಕ ಗಿಡಗಳು ಈ ಅರಣ್ಯದಲ್ಲಿದ್ದು, ಪ್ರಸ್ತುತ 10-15 ಅಡಿಗಳಷ್ಟು ಎತ್ತರಕ್ಕೆ ಬೆಳೆದಿವೆ. ಕೆಲವು ವರ್ಷಗಳಲ್ಲಿ ಇವುಗಳು ಹಣ್ಣು ಕೊಡಲು ಆರಂಭ ಮಾಡುತ್ತವೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡು ಬರುವ ಗಿಡಗಳನ್ನು ತಂದು ಬೆಳೆಸಲಾಗಿದ್ದು, ಅಳಿವಿನಂಚಿನಲ್ಲಿರುವ ಗಿಡಗಳೂ ಇವೆ ಎನ್ನುತ್ತಾರೆ ಅರಣ್ಯದ ಉಸ್ತುವಾಗಿ ಜೀತ್ ಮಿಲನ್. ಪದವು ಬಳಿ ನೆಟ್ಟು ಬೆಳೆಸಿದ ಮಿಯಾವಾಕಿ ಅರಣ್ಯ ನಾವು ಅಂದು ಕೊಂಡಿರುವುದ ಕ್ಕಿಂತಲೂ ಉತ್ತಮವಾಗಿ ಬಂದಿದೆ. ಕೆಲವು ಗಿಡಗಳು ಹೂಬಿಟ್ಟಿದ್ದು, ಕೆಲವು ಗಿಡಗಳಲ್ಲಿ ಹಣ್ಣುಗಳು ಬೆಳೆದಿವೆ. ಇದರಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಚಿಟ್ಟೆ ಗಳು ಕಂಡು ಬರುತ್ತಿದ್ದು, ಕಪ್ಪೆಗಳ ವಾಸಸ್ಥಾನವೂ ಆಗಿದೆ. ಇನ್ನೊಂದು 2 ವರ್ಷಗಳಲ್ಲಿ ಇನ್ನಷ್ಟು ಸುಂದರವಾಗಿ ಕಂಗೊಳಿಸಲಿದೆ.
ಜೀತ್ ಮಿಲನ್ ರೋಚ್,
ಪರಿಸರ ಪ್ರೇಮಿ *ಭರತ್ ಶೆಟ್ಟಿಗಾರ್