Advertisement

ಸುಷ್ಮಾ, ನಡ್ಡಾ, ಕಟೀಲ್ ಸೇರಿದಂತೆ ಹಲವರು ಮೋದಿ ಟೀಂನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲ!

10:53 AM Jun 01, 2019 | Team Udayavani |

ನವದೆಹಲಿ: ನರೇಂದ್ರ ಮೋದಿ ಅವರ 2ನೇ ಅವಧಿಯ ಸರ್ಕಾರದಲ್ಲಿ ಮನೇಕಾ ಗಾಂಧಿ, ಸುರೇಶ್ ಪ್ರಭು, ಜೆಪಿ ನಡ್ಡಾ ಹಾಗೂ ರಾಧಾ ಮೋಹನ್ ಸಿಂಗ್ ಈ ಬಾರಿ ಕ್ಯಾಬಿನೆಟ್ ನಲ್ಲಿ ಯಾವುದೇ ಸ್ಥಾನ ಪಡೆದಿಲ್ಲ.

Advertisement

ಗುರುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ನರೇಂದ್ರ ಮೋದಿ 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅಲ್ಲದೇ ಅಮಿತ್ ಶಾ ಸೇರಿದಂತೆ 58 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಆದರೆ ನೂತನ ಸಚಿವ ಸಂಪುಟದಲ್ಲಿ ಅನಾರೋಗ್ಯದ ಕಾರಣದಿಂದ ಕಳೆದ ಬಾರಿ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ, ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಈ ಬಾರಿ ಸಂಪುಟದಿಂದ ಹೊರಗುಳಿದಿದ್ದಾರೆ. ಕರ್ನಾಟಕದಿಂದ ಡಿವಿ ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಕ್ಯಾಬಿನೆಟ್ ದರ್ಜೆ ಪಡೆದಿದ್ದರೆ,ಸುರೇಶ್ ಅಂಗಡಿ ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಭಾರೀ ಹಿನ್ನಡೆ ಎಂಬಂತೆ ರಾಜಕೀಯ ವಲಯದಲ್ಲಿ ವಿಶ್ಲೇಷಿಲಾಗುತ್ತಿದ್ದು, ಅನಂತ್ ಕುಮಾರ್ ಹೆಗಡೆಯಾಗಲಿ  ಹ್ಯಾಟ್ರಿಕ್ ಜಯ ಸಾಧಿಸಿದ ದಕ್ಷಿಣ ಕನ್ನಡದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ರಾಜ್ಯದ ಬೇರೆ ಯಾವ ಸಂಸದರೂ ಬೇರೆ ಯಾರೂ ಸಚಿವ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next