Advertisement
ಆ ಬಳಿಕ ಮಾತನಾಡಿದ ಅವರು, 2018ರಲ್ಲೂ ಕಾವೇರಿ ಮಾತೆಗೆ ಪೂಜೆ ಮಾಡಿ ಭತ್ತ ನಾಟಿ ಮಾಡಿದ್ದೆ, ಅದರಂತೆ ಜಲಾಶಯ ಭರ್ತಿಯಾಗಿದೆ. ಈ ಬಾರಿಯೂ ಭತ್ತ ನಾಟಿಗೆ ಬರಲು ಮನವಿ ಮಾಡಿದ್ದರು, ರೈತರ ಮನವಿ ಮೇರೆಗೆ ಭತ್ತ ನಾಟಿಗೆ ಬಂದಿದ್ದೇನೆ. ಭೂಮಿ ತಾಯಿ ಮಕ್ಕಳಾದ ನಮ್ಮೆಲ್ಲರಿಗೂ ಭೂಮಿಯೇ ಸರ್ವಸ್ವ. ಬೇಸಾಯವೇ ಬದುಕು. ಭತ್ತದ ನಾಟಿ ನನ್ನ ಮನೆಯ ಕಾರ್ಯಕ್ರಮವೇ ಆಗಿತ್ತು. ರೈತಾಪಿ ಜನರೊಂದಿಗೆ ಇಂತಹ ಸಾರ್ಥಕ, ಅನನ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನಲ್ಲಿ ಧನ್ಯತೆಯ ಭಾವ ಉಂಟು ಮಾಡಿದೆ ಎಂದರು.
ಭತ್ತ ನಾಟಿಯಲ್ಲಿ ನಾನು ಭಾಗವಹಿಸಿರುವುದು ರೈತರಿಗೆ ಬಹಳ ಸಂತೋಷವಾಗಿದೆ. ಎಚ್.ಡಿ.ದೇವೇಗೌಡ ಅವರು ರೈತ ಕುಟುಂಬದಿಂದ ಬಂದಿದ್ದು, ಬೇಸಾಯವು ರಕ್ತಗತವಾಗಿ ಬಂದಿದೆ. ಕಳೆದ ವರ್ಷ ಮಳೆ ಸಮಸ್ಯೆಯಿಂದ ರೈತರು ಬಹಳ ತೊಂದರೆ ಅನುಭವಿಸಿದ್ದು, ಈ ಬಾರಿ ಉತ್ತಮ ಮಳೆಯಿಂದಾಗಿ ರೈತರು ಬೇಸಾಯ ಮಾಡಲು ಉತ್ಸುಕರಾಗಿದ್ದಾರೆ ಎಂದರು.
Related Articles
Advertisement
ಕೃಷಿ ಖಾತೆಯನ್ನೇ ನಿರೀಕ್ಷಿಸಿದ್ದೆ:
“ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ನನಗೆ ಕೃಷಿ ಖಾತೆ ಸಿಗಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದೆ, ಕೊನೆಗೆ ಆ ಖಾತೆ ಸಿಗಲಿಲ್ಲ. ಆದರೆ ಈಗಿನ ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶದಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಅನುಭವ ಹೊಂದಿದವರು. ರೈತರ ಸಮಸ್ಯೆಗಳ ಬಗ್ಗೆ ಅವರಿಗೂ ತಿಳಿದಿದೆ. ರೈತ ಸಮುದಾಯಕ್ಕೆ ವಿಶ್ವಾಸ ತುಂಬಿ, ರೈತ ಸಮುದಾಯಕ್ಕೆ ಸಂಪೂರ್ಣ ಬಲ ತುಂಬುವ ಕೆಲಸ ಮಾಡುವರು ಎಂಬ ವಿಶ್ವಾಸ ನನಗಿದೆ. ಶಿವರಾಜ್ ಸಿಂಗ್ ಚೌಹಾಣ್‌ರಿಂದ ದೇಶದ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.