Advertisement
ಮಂಡ್ಯ ತಾಲೂಕಿನ 65 ವರ್ಷದ ವೃದ್ಧ ಹಾಗೂ ನಾಗಮಂಗಲ ತಾಲೂಕಿನ 24 ವರ್ಷದ ಯುವಕನಿಗೆ ಸೋಂಕಿನ ಜತೆಗೆ ಇತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ೧೦೯ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಶುಕ್ರವಾರ 246 ಜನರು ಸೋಂಕಿಗೆ ಒಳಗಾಗಿದ್ದಾರೆ. ಮಂಡ್ಯ ತಾಲೂಕಿನಲ್ಲಿ 67, ಮದ್ದೂರಿನಲ್ಲಿ 21, ಮಳವಳ್ಳಿಯಲ್ಲಿ 15, ಪಾಂಡವಪುರದಲ್ಲಿ 36, ಶ್ರೀರಂಗಪಟ್ಟಣದಲ್ಲಿ 18, ಕೆ.ಆರ್.ಪೇಟೆಯಲ್ಲಿ 58 ಮತ್ತು ನಾಗಮಂಗಲ ತಾಲೂಕಿನಲ್ಲಿ 31 ಮಂದಿಗೆ ಕೊರೊನಾ ವಕ್ಕರಿಸಿದೆ. ಇದರಿಂದ ಜಿಲ್ಲೆಯಲ್ಲಿ 11556 ಸೋಂಕಿತ ಪ್ರಕರಣಗಳು ದಾಖಲಾಗಿವೆ. 282 ಚೇತರಿಕೆ:
ಜಿಲ್ಲೆಯಾದ್ಯಂತ 282 ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮಂಡ್ಯ 50, ಮದ್ದೂರು 22, ಮಳವಳ್ಳಿ 12, ಶ್ರೀರಂಗಪಟ್ಟಣ 93, ಕೆ.ಆರ್.ಪೇಟೆ ೫೧ ಹಾಗೂ ನಾಗಮಂಗಲದ 54 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೂ 9512 ಜನರು ಚೇತರಿಸಿಕೊಂಡಿದ್ದಾರೆ.
Related Articles
ಪ್ರಸ್ತುತ 1930 ಸಕ್ರಿಯ ಪ್ರಕರಣಗಳಿವೆ. 566 ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ, 128 ಖಾಸಗಿ ಆಸ್ಪತ್ರೆಯಲ್ಲಿ, 190 ಕೋವಿಡ್ ಕೇರ್ ಸೆಂಟರ್‌ನಲ್ಲಿ ಹಾಗೂ 1046 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ 1515 ಜನರ ಗಂಟಲಿನ ದ್ರವ ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಟಿ.ಎನ್.ಧನಂಜಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement