Advertisement
ಬೆಲ್ಲದ ಪಾರ್ಕ್‌ನಲ್ಲಿ ಬೆಲ್ಲ ತಯಾರಿಕೆಗೆ ಸೂಕ್ತವಾದ ಕಬ್ಬಿನ ತಳಿ, ಸಂಶೋಧನೆ, ರಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಹಾಗೂ ಆಲೆಮನೆಗಳಲ್ಲಿ ತಯಾರಾಗುವ ಬೆಲ್ಲ ಗುಣಮಟ್ಟದ ಬಗ್ಗೆ ಪರೀಕ್ಷೆ ನಡೆಸಲು ಪ್ರಯೋ ಗಾಲಯದ ಸೌಲಭ್ಯಗಳಿವೆ. ಆದರೆ, ಅದನ್ನು ಸರಿಯಾಗಿ ಬಳಸಿಕೊಳ್ಳಲು ಆಲೆಮನೆಗಳು ಮುಂದಾಗುತ್ತಿಲ್ಲ.
Related Articles
Advertisement
ಪ್ರಮಾಣ ಪತ್ರಕ್ಕಾಗಿ ಬಳಕೆ:
ಕೆಲವು ಆಲೆಮನೆ ಮಾಲೀಕರು ತಯಾರಿಸಿದ ಬೆಲ್ಲವನ್ನು ಹೊರ ಜಿಲ್ಲೆ, ರಾಜ್ಯಗಳಿಗೆ ಸರಬರಾಜು ಮಾಡುವ ಉದ್ದೇಶದಿಂದ ಇಲ್ಲಿ ಪರೀಕ್ಷೆ ಮಾಡಿಸಿ ಪ್ರಮಾಣ ಪತ್ರ ಪಡೆದು ಬೆಲ್ಲದ ಲೇಬಲ್‌ಗೆ ಹಾಗೂ ಮಾರುಕಟ್ಟೆಗಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಕಬ್ಬು ತಳಿ ವಿಜ್ಞಾನಿ ಎಂ.ಎಸ್.ಸ್ವಾಮಿಗೌಡ.
ಬೆಲ್ಲ ತಯಾರಿಕೆಗೆ ಉತ್ತಮ ಕಬ್ಬಿನ ತಳಿ ಸಂಶೋಧನೆ
ಬೆಲ್ಲ ತಯಾರಿಕೆಗೆ ಉತ್ತಮ ಕಬ್ಬಿನ ತಳಿಗಳ ಸಂಶೋಧನೆ ಮಾಡಲಾಗಿದೆ. ಆದರೆ, ರೈತರಿಗೆ ಇದರ ಬಗ್ಗೆ ಅರಿವಿನ ಕೊರತೆ ಹೆಚ್ಚಿದೆ. ಬೆಲ್ಲ ತಯಾರಿಕೆಗೆ ಬೇಕಾದ ಸಿಹಿ ಅಂಶದ ಕಬ್ಬಿನ ತಳಿಗಳು ವಿ.ಸಿ.ಫಾರಂನಲ್ಲಿವೆ. ರಸಾಯನಿಕ ಗೊಬ್ಬರ ಬಳಸದೆ ಉತ್ತಮ ಇಳುವರಿ ಪಡೆಯುವ ಕಬ್ಬಿನ ತಳಿಗಳು ಇಲ್ಲಿ ಸಿಗಲಿವೆ. ಅಲ್ಲದೆ ಬೆಳೆಯುವ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.
ರಸಾಯನಿಕ ಮುಕ್ತ ಬೆಲ್ಲ ತಯಾರಿಸುವ ಹಾಗೂ ಬೆಲ್ಲ ತಯಾರಿಕೆಗೆ ಬೇಕಾದ ಕಬ್ಬಿನ ತಳಿಗಳನ್ನು ಸಂಶೋಧನೆ ಮಾಡಲಾಗುತ್ತಿದೆ. ಇದರ ಬಗ್ಗೆ ಸಾಕಷ್ಟು ಆಲೆಮನೆ ಮಾಲೀಕರಿಗೆ ತರಬೇತಿ, ಕಾರ್ಯಾಗಾರ ನಡೆಸಲಾಗಿದೆ. ನಮ್ಮ ಸಂಸ್ಥೆಯಿಂದ ಬೆಲ್ಲ ತಯಾರಿಕೆ ಬಗ್ಗೆ ಮಾಹಿತಿ ಒದಗಿಸಲಾಗುತ್ತಿದೆ. ಕೆಲವರು ರಸಾಯನಿಕ ಬಳಕೆ ಮಾಡಿ ಬೆಲ್ಲ ತಯಾರಿಸುತ್ತಿರುವುದರಿಂದ ಮಂಡ್ಯ ಬೆಲ್ಲ ಬ್ರ್ಯಾಂಡ್‌ಗೆ ತೊಂದರೆಯಾಗುತ್ತಿದೆ. ಆತ್ಮನಿರ್ಭರ್ ಭಾರತ್‌ಗೆ ಬೆಲ್ಲ ಆಯ್ಕೆಯಾಗಿದ್ದು, ಅದರ ಹಿನ್ನೆಲೆ ಸಾವಯವ ಬೆಲ್ಲ ತಯಾರಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. (ಡಾ.ಎಸ್.ಎನ್.ಸ್ವಾಮಿಗೌಡ, ಕಬ್ಬು ತಳಿ ವಿಜ್ಞಾನಿ ಮಂಡ್ಯ )
ಬೆಲ್ಲದ ಪಾರ್ಕ್ ಬಳಕೆ ಮಾಡಿಕೊಳ್ಳದ ಆಲೆಮನೆಗಳು
ಬೇರೆ ರಾಜ್ಯದಿಂದ ಕಳಪೆ ಗುಣಮಟ್ಟದ ಬೆಲ್ಲ ತರಿಸಿ ಅದಕ್ಕೆ ಸಕ್ಕರೆ, ರಸಾಯನಿಕ ಬೆರೆಸಿ ಬೆಲ್ಲ ತಯಾರಿಸುವ ಮೂಲಕ ಮಂಡ್ಯ ಬೆಲ್ಲ ಬ್ರ್ಯಾಂಡ್ ಗೆ ಕೆಟ್ಟ ಹೆಸರು ತರುವ ಹುನ್ನಾರ ನಡೆಯುತ್ತಿರುವ ಹಿನ್ನೆಲೆ ಕಳಪೆ ಗುಣಮಟ್ಟ ಬೆಲ್ಲ ತಯಾರಿಸುತ್ತಿದ್ದ ಆಲೆಮನೆಗಳಿಗೆ ಬೀಗ ಜಡಿಯಲಾಗುತ್ತಿದೆ. ಆಲೆಮನೆಗಳ ಮಾಲೀಕರು ಬೆಲ್ಲದ ಪಾರ್ಕ್‌ನಲ್ಲಿ ಕಬ್ಬು ಟನ್‌ಗೆ ಉತ್ತಮ ಸಾವಯವ ಬೆಲ್ಲದ ಇಳುವರಿ ಪಡೆಯುವ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಆದರೆ, ಮಾಹಿತಿ ಪಡೆಯಲು ಹೆಚ್ಚು ಆಲೆಮನೆ ಮುಂದಾಗುತ್ತಿಲ್ಲ.
ಅರಿವಿನ ಕೊರತೆ
ರಸಾಯನಿಕ ಮುಕ್ತ ಬೆಲ್ಲ ತಯಾರಿಸುವ ಹಾಗೂ ಉತ್ತಮ ಕಬ್ಬಿನ ತಳಿ ಪರಿಚಯಿಸಲಾಗುತ್ತದೆ. ಆದರೆ, ಇದರ ಬಗ್ಗೆ ರೈತರಿಗೆ ಅರಿವಿನ ಕೊರತೆ ಇದೆ. ದಕ್ಷಿಣ ಕರ್ನಾಟಕ ಭಾಗಕ್ಕೆ ಒಬ್ಬರೇ ಕಬ್ಬು ತಳಿ ಸಂಶೋಧಕರಿದ್ದಾರೆ. ವಿ.ಸಿ.ಫಾರಂನಲ್ಲಿ ಎಲ್ಲ ತಾಲೂಕಿನ ಕೃಷಿ ಅ ಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ. ಅದನ್ನು ಸಮರ್ಪಕವಾಗಿ ರೈತರಿಗೆ ತಲುಪಿಸಲು ಕೃಷಿ ಇಲಾಖೆ ವಿಫಲವಾಗುತ್ತಿದೆ.
ಖಾಸಗಿಯವರಿಗೆ ಟೆಂಡರ್
ವಿ.ಸಿ.ಫಾರಂನಲ್ಲಿರುವ ಬೆಲ್ಲದ ಪಾರ್ಕ್‌ನ್ನು ಸರ್ಕಾರದ ನಿರ್ದೇಶನದಂತೆ ಖಾಸಗಿಯವರಿಗೆ ಟೆಂಡರ್ ನೀಡಲಾಗುತ್ತಿದೆ. ಟೆಂಡರ್ ತೆಗೆದುಕೊಂಡವರು ಸಮರ್ಪಕವಾಗಿ ನಡೆಸುತ್ತಿಲ್ಲ. ಇದರಿಂದ ಅಲ್ಲಿ ಬೆಲ್ಲದ ತಯಾರಿಕೆ ಪ್ರಸ್ತುತ ನಿಲ್ಲಿಸಲಾಗಿದೆ. ಆದ್ದರಿಂದ ವಿ.ಸಿ.ಫಾರಂನ ಮೂಲಕವೇ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಹಲವರು ಟೆಂಡರ್ ಪಡೆದು ಸಾವಯವ ಬೆಲ್ಲ ತಯಾರಿಸಿದ್ದಾರೆ.
ಎಚ್.ಶಿವರಾಜು